ದಿನಭವಿಷ್ಯ| ಮನೆಯ ಸಮಸ್ಯೆ ನಿಮ್ಮ ವೃತ್ತಿಯ ಮೇಲೂ ಪರಿಣಾಮ ಬೀರಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಮನೆಯ ಕಾರ್ಯದಲ್ಲಿ ನೀವೂ ನೆರವಾಗಿ.  ಅದರಿಂದ ಕೌಟುಂಬಿಕ ಹೊಣೆಗಾರಿಕೆ ಸುಲಭದಲ್ಲಿ ನಿಭಾಯಿಸಬಹುದು. ಆರ್ಥಿಕ ಉನ್ನತಿ.

ವೃಷಭ
ನಿಮ್ಮ ನಿಲುವಿಗೇ ಅಂಟಿಕೊಂಡು  ಕೂರಬೇಡಿ. ನಿಮ್ಮ ಸುತ್ತಲಿನ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ವೃತ್ತಿಯಲ್ಲಿ ಯಶಸ್ಸು.

ಮಿಥುನ
ಒಂದೆಡೆಯಿಂದ ವೃತ್ತಿಯ ಒತ್ತಡ, ಮತ್ತೊಂದೆಡೆಯಿಂದ ಕೌಟುಂಬಿಕ ಕಟ್ಟುಪಾಡು.ಇದು ನಿಮ್ಮ ದಿನವನ್ನು ಬಿಝಿಯಾಗಿಡುತ್ತದೆ.

ಕಟಕ
ಕೇವಲ ಅದೃಷ್ಟ ನಂಬಿ ಕೂರಬೇಡಿ. ನಿಮ್ಮ ಸಾಮರ್ಥ್ಯದ ಕುರಿತು ಹೆಚ್ಚು ವಿಶ್ವಾಸವಿಡಿ.  ಕೆಲಸದ ಗುಣಮಟ್ಟದಲ್ಲಿ ರಾಜಿ ಮಾಡಬೇಡಿ.ಆರ್ಥಿಕ ಸುಸ್ಥಿತಿ.

ಸಿಂಹ
ಕುಟುಂಬ ಸದಸ್ಯರ  ಮಧ್ಯೆ ಅಭಿಪ್ರಾಯ ಭೇದ ಉಂಟಾದೀತು. ಅದನ್ನು ಕೂಡಲೇ ಶಮನಗೊಳಿಸಿರಿ. ಬಂಧುಗಳ ಸಹಕಾರ. ಸಿಗುವುದು.

ಕನ್ಯಾ
ವೃತ್ತಿಯ ಒತ್ತಡ ಹೆಚ್ಚು. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಇತರರಿಂದ ಸೂಕ್ತ ಸಹಕಾರ ಸಿಗದೆ ಅಸಹನೆ ಹೆಚ್ಚುವುದು. ಸಹನೆ ಕಳಕೊಳ್ಳದಿರಿ.

ತುಲಾ
ನಿಮ್ಮ ಚಿಂತನೆಯಲ್ಲಿ ಇಂದು ಕೆಲವು ಬದಲಾವಣೆ ಆದೀತು. ಅದರಿಂದ ನಿಮಗೆ ಮಾನಸಿಕ ನಿರಾಳತೆ  ದೊರಕುವುದು.ಗೊಂದಲ ನಿವಾರಣೆ.

ವೃಶ್ಚಿಕ
ಮನೆಯ ಸಮಸ್ಯೆ ನಿಮ್ಮ ವೃತ್ತಿಯ ಮೇಲೂ ಪರಿಣಾಮ ಬೀರಬಹುದು. ಅನಿರೀಕ್ಷಿತ ಸಮಸ್ಯೆ  ಮನಶ್ಯಾಂತಿ ಹಾಳು ಮಾಡುತ್ತದೆ.

ಧನು
ಕೆಲವು ವ್ಯವಹಾರ ನಿಮಗೆ ಪೂರಕವಾಗಿ ಸಾಗದು.ಎಲ್ಲರ ಜತೆ ಸಹಕಾರದಿಂದ ಕಾರ್ಯ ಸಾಧಿಸಿಕೊಳ್ಳಿ. ಯಾರನ್ನೂ ದೂರ ಮಾಡದಿರಿ.

ಮಕರ
ನಿಮ್ಮ ಕಠಿಣ ನಿಲುವು  ಮನೆಯ ಶಾಂತಿ ಕೆಡಿಸಬಹುದು.ಕೆಲವು ವಿಷಯಗಳಲ್ಲಿ ನಿಮ್ಮ ನಿಲುವು ಸಡಿಲಿಸುವುದು ಒಳ್ಳೆಯದು. ಹೊಂದಾಣಿಕೆ ಮುಖ್ಯ.

ಕುಂಭ
ಮನೆಯಲ್ಲಿ ಪ್ರತಿಕೂಲ ಪರಿಸ್ಥಿತಿ.  ರೋಷಾವೇಷದಿಂದ ಯಾವುದೇ ಫಲವಿಲ್ಲ. ಶಾಂತಿ, ಸಹನೆಯಿಂದ ಪರಿಸ್ಥಿತಿ ನಿಭಾಯಿಸಿರಿ. ಆರ್ಥಿಕ ಒತ್ತಡ ಹೆಚ್ಚು.

ಮೀನ
ಅನಿಯಂತ್ರಿತ ಆಹಾರ ಸೇವನೆಯಿಂದ ಆರೋಗ್ಯಕೆಟ್ಟೀತು. ಎಚ್ಚರ ವಹಿಸಿರಿ. ಕೌಟುಂಬಿಕ ಬಿಕ್ಕಟ್ಟು ಕೆಲವರ ಮಧ್ಯಸ್ಥಿಕೆ ಯಿಂದ ಪರಿಹಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!