ದಿನಭವಿಷ್ಯ| ಅನ್ಯರ ಕೆಟ್ಟ ಪ್ರಭಾವದಿಂದ ಹೊರಬರಲು ಪ್ರಯತ್ನಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಆಪ್ತರೊಂದಿಗೆ  ಸಂತೋಷದಿಂದ ಕಳೆಯುವ ಉದ್ದೇಶಕ್ಕೆ ಅಡ್ಡಿ ಒದಗಬಹುದು. ಕೆಲವರ ಮಾತು ಕೌಟುಂಬಿಕ ಶಾಂತಿ ಕಲಕಬಹುದು.

ವೃಷಭ
ಅನ್ಯರ ಕೆಟ್ಟ ಪ್ರಭಾವ ದಿಂದ ಹೊರಬರಲು ಪ್ರಯತ್ನಿಸಿ. ಅಂತಹವರ  ಸಹವಾಸ ತ್ಯಜಿಸಿರಿ. ನಿಮ್ಮ ವೃತ್ತಿ, ಹೊಣೆಗಾರಿಕೆ  ಗಂಭೀರವಾಗಿ ಪರಿಗಣಿಸಿರಿ.

ಮಿಥುನ
ದಿನವಿಡೀ ಹಲವಾರು ಕಾರ್ಯಚಟುವಟಿಕೆ. ಸಮಸ್ಯೆ ಸಣ್ಣದಾಗಿದ್ದರೂ  ಕಡೆಗಣಿಸಬೇಡಿ. ಅದನ್ನು ಪರಿಹರಿಸಲು ಆದ್ಯತೆ ಕೊಡಿ. ಇಲ್ಲವಾದರೆ ಕ್ಲಿಷ್ಟವಾಗಬಹುದು.

ಕಟಕ
ವೃತ್ತಿ ಮತ್ತು ವ್ಯವಹಾರಕ್ಕೆ ಆದ್ಯತೆ ನೀಡುವುದು ಒಳ್ಳೆಯದೆ. ಆದರೆ ಕುಟುಂಬ ಮತ್ತು ಪ್ರೀತಿಪಾತ್ರರನ್ನು ಕಡೆಗಣಿಸಬೇಡಿ.  ಅವರ   ಕಡೆಗೂ ಗಮನ ಕೊಡಿ.

ಸಿಂಹ
ಕಷ್ಟದಲ್ಲೂ ಎದೆಗುಂದದ ನಿಮ್ಮ ಮನಸ್ಥಿತಿ ನಿಮಗೆ ಒಳಿತು ತರುವುದು. ಸಮಸ್ಯೆ ನಿವಾರಣೆಗೆ ನೆರವು ನೀಡುವುದು. ಬಂಧುಗಳ ಭೇಟಿ, ಸಂತೋಷದ ಕಾಲಕ್ಷೇಪ.

ಕನ್ಯಾ
ಅತಿಯಾದ ಭಾವುಕತೆ ನಿಮ್ಮ ಗುರಿ ಸಾಧಿಸಲು ಅಡ್ಡ ಬಂದೀತು.  ಕೆಲವು ವಿಷಯಗಳಲ್ಲಿ ಕಠಿಣವಾಗಿ ವರ್ತಿಸುವುದೇ ನಿಮಗೆ ಒಳಿತು ತರುವುದು.

ತುಲಾ
ಸಮಸ್ಯೆ ಉಂಟಾದರೆ ಅದನ್ನು ಹಾಗೇ ಬಿಡಬೇಡಿ. ಪರಿಹರಿಸಲು ಆದ್ಯತೆ ಕೊಡಿ. ಇಲ್ಲವಾದರೆ ಬಳಿಕ ದೊಡ್ಡ ಸಮಸ್ಯೆಯಾಗುತ್ತದೆ.

ವೃಶ್ಚಿಕ
ಕೆಲವು ವ್ಯಕ್ತಿಗಳ ಒಡನಾಟವು ನಿಮಗೆ ಅಸಹನೀಯ ಎನ್ನಿಸಬಹುದು. ಆತುರದ ನಿರ್ಧಾರ ತಾಳದಿರಿ, ಸಹನೆಯಿಂದ ವರ್ತಿಸಿರಿ. ಹೊಂದಿಕೊಂಡು ಬಾಳಿ.

ಧನು
ಕೆಲ ವಿಷಯಗಳಲ್ಲಿ ಗೊಂದಲದ ಮನಸ್ಥಿತಿ. ಸ್ಪಷ್ಟ ನಿಲುವಿಗೆ ಬರಲಾಗದೆ ತೊಳಲಾಟ. ಪರಿಸ್ಥಿತಿ ಸರಿಯಾಗಿ ಪರಾಮರ್ಶಿಸಿ ಸೂಕ್ತ ನಿರ್ಧಾರ ತಾಳಿರಿ.

ಮಕರ
ಖಾಸಗಿ ಬದುಕಲ್ಲಿ ಭಾವನಾತ್ಮಕ ಬೆಳವಣಿಗೆ. ಆಪ್ತರ ಜತೆ ವೈಮನಸ್ಸು ಉಂಟಾದೀತು. ಹೊಂದಾಣಿಕೆಯಿಂದ ವರ್ತಿಸಿರಿ. ದುಡುಕಿನ ನಿರ್ಧಾರ ಬೇಡ.

ಕುಂಭ
ಖಾಸಗಿ ಬದುಕಲ್ಲಿ ಮಹತ್ವದ ಬೆಳವಣಿಗೆ.   ನಿಮ್ಮ ಇಷ್ಟದ ವ್ಯಕ್ತಿಯ ಜತೆ ಬಾಂಧವ್ಯ ವೃದ್ಧಿ. ಭಿನ್ನಾಭಿಪ್ರಾಯ ನಿವಾರಣೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದು.

ಮೀನ
ಕಷ್ಟಪಡದೇ ಫಲ ದೊರಕಬೇಕು ಎಂದು ಬಯಸದಿರಿ. ಕಠಿಣ ಶ್ರಮ ಅಗತ್ಯ. ಮನೆಯವರ ಮನಸ್ಸು ಅರಿತು ಅವರ ಭಾವನೆಗೆ  ಸ್ಪಂದಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!