ದಿನಭವಿಷ್ಯ| ದಿನವು ನೀರಸವಾಗಿ ಆರಂಭಗೊಂಡರೂ ಬಳಿಕ ನಿಮ್ಮಲ್ಲಿ ಉತ್ಸಾಹ ತುಂಬಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಮೇಷ
ನಿಮ್ಮ ನಿರ್ಧಾರಗಳಿಗೆ ಇಂದು ಉತ್ತಮ ಫಲ ಸಿಗುವುದು. ಆರ್ಥಿಕ ಉನ್ನತಿ. ಕ್ರೀಡಾಪಟುಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ದೊಡ್ಡ ಯಶಸ್ಸು ಸಿಗಲಿದೆ.
ವೃಷಭ
ನಿಮ್ಮ ವ್ಯವಹಾರದಲ್ಲಿ ಯಶಸ್ಸು. ಜನಮನ್ನಣೆ. ಕೌಟುಂಬಿಕ ಪರಿಸರದಲ್ಲಿ ಶಾಂತಿ, ಸಮಾಧಾನ. ಆಪ್ತರೊಡನೆ ಸೌಹಾರ್ದ ಬಾಂಧವ್ಯ. ಒಟ್ಟಿನಲ್ಲಿ  ಸಫಲ ದಿನ.
ಮಿಥುನ

ನಿಮ್ಮ ವ್ಯವಹಾರ ವಿಸ್ತರಿಸುವುದು ಮುಖ್ಯ ಗುರಿಯಾಗಿರಲಿ. ಅದೃಷ್ಟ ನಿಮ್ಮ ಜತೆಗಿದೆ. ಹಾಗಾಗಿ ಯಾವುದೇ ಹಿನ್ನಡೆ ಬಾಧಿಸದು. ಎಲ್ಲರ ಸಹಕಾರ.

ಕಟಕ
ಹೆಚ್ಚಿನ ಕಷ್ಟವಿಲ್ಲದೆ ಇಂದು ನಿಮ್ಮ ಗುರಿ ಸಾಧಿಸುವಿರಿ. ಕುಟುಂಬಸ್ಥರ ಸಲಹೆಗೆ ಕಿವಿಗೊಡಿ. ಅಲಕ್ಷ್ಯ ಮಾಡಿದರೆ ಅದು ಸಂಘರ್ಷಕ್ಕೆ ಕಾರಣವಾದೀತು.

ಸಿಂಹ
ಕೆಲಸದಲ್ಲಿ ಬದ್ಧತೆ ಇರಲಿ. ಪದೇಪದೇ ನಿಲುವು ಬದಲಿಸಬೇಡಿ. ಸಣ್ಣ ಹಿನ್ನಡೆಗೇ ಅಂಜಿ ಕೂರಬೇಡಿ. ತಾಳ್ಮೆಯಿಂದ ಕಾರ್ಯವೆಸಗಿ.

ಕನ್ಯಾ
ವ್ಯಕ್ತಿಯೊಬ್ಬರು ನಿಮ್ಮ ಮೇಲೆ ಪ್ರಭಾವ ಬೀರಬಹುದು. ಹಳೆಯ ಹೂಡಿಕೆಯಿಂದ ಲಾಭ. ಕೌಟುಂಬಿಕ ಶಾಂತಿ ಕೆಡಿಸುವ ಮಾತು ಆಡದಿರಿ.

ತುಲಾ
ಕೌಟುಂಬಿಕ ಪರಿಸ್ಥಿತಿ ಸಮಾಧಾನಕರ. ನಿಮ್ಮ ಕಾರ್ಯಕ್ಕೆ ಉತ್ತಮ ಸಹಕಾರ. ಆರೋಗ್ಯಕ್ಕೆ ಹೆಚ್ಚು ಗಮನ ಕೊಡಿ. ದೇಹಾಲಸ್ಯ ನಿಮ್ಮನ್ನು ಕಾಡಬಹುದು.

ವೃಶ್ಚಿಕ
ದಿನವು ನೀರಸವಾಗಿ ಆರಂಭಗೊಂಡರೂ ಬಳಿಕ ನಿಮ್ಮಲ್ಲಿ ಉತ್ಸಾಹ ತುಂಬಲಿದೆ. ನೀವು ಬಯಸಿದ ಬೆಳವಣಿಗೆ ಸಂಭವಿಸಲಿದೆ. ಧನಲಾಭ ಅಥವಾ ವಸ್ತುಲಾಭ.

ಧನು
ವಾಸ್ತವ ಸ್ಥಿತಿಗೆ ಕುರುಡಾಗದಿರಿ. ಕೆಲವು ವಿಷಯಗಳನ್ನು ಬದಿಗೆ ಸರಿಸಬೇಡಿ. ಅದರತ್ತ ಗಂಭೀರ ಗಮನ ಹರಿಸಿ. ಹಣದ ವಿಚಾರದಲ್ಲಿ  ಹೊಣೆಗಾರಿಕೆಯಿರಲಿ.

ಮಕರ
ಫಲಪ್ರದ ದಿನ. ಏನು ಸಾಧಿಸಬಯಸುತ್ತೀರೋ ಅದು ಸಾಧ್ಯವಾಗಲಿದೆ. ವೃತ್ತಿಯಲ್ಲಿ ಉನ್ನತಿ. ಕೌಟುಂಬಿಕ ಬಿಕ್ಕಟ್ಟು ಶಮನ. ಆರ್ಥಿಕ ಸ್ಥಿತಿ ಸುಧಾರಣೆ.

ಕುಂಭ
ಹಿರಿಯರ ಜತೆ ವಾಗ್ವಾದ ನಡೆದೀತು. ಅದನ್ನು ತಪ್ಪಿಸಿಕೊಳ್ಳಿ. ಸಂಬಂಧದ ಸೌಹಾರ್ದತೆ ಕಾಪಾಡುವಲ್ಲಿ ಪ್ರಾಮಾಣಿಕತೆ ಅಗತ್ಯ ಎಂಬರಿವು ಇರಲಿ.

ಮೀನ
ಕೆಲಸದ ಜಾಗದಲ್ಲಿ ಬದಲಾವಣೆ ಉಂಟಾದೀತು. ಅದಕ್ಕೆ ಒಗ್ಗಿಕೊಳ್ಳಲು ಕಲಿಯಿರಿ. ಎಲ್ಲವನ್ನೂ ವಿರೋಧಿಸುವ ಧೋರಣೆ ಬಿಟ್ಟುಬಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!