ದಿನಭವಿಷ್ಯ| ಸಮಸ್ಯೆ ಕಾಡುತ್ತಿದ್ದರೂ ನಿಮ್ಮ ಉತ್ಸಾಹಶೀಲತೆ ಎಲ್ಲ ಚಿಂತೆಗಳನ್ನು ದೂರ ಮಾಡುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಮೇಷ
ಪ್ರಮುಖ ವಿಷಯದಲ್ಲಿ ನಿಮ್ಮ ನಿಲುವು ಬದಲಿಸುವ ಪ್ರಸಂಗ ನಡೆದೀತು.  ಕೌಟುಂಬಿಕ ಒತ್ತಡವು ನಿಮ್ಮ ನೆಮ್ಮದಿ ಕಲಕುವುದು. ಸಹನೆ ಅತ್ಯವಶ್ಯ.

ವೃಷಭ
ಸಮಸ್ಯೆ ಕಾಡುತ್ತಿದ್ದರೂ ನಿಮ್ಮ ಉತ್ಸಾಹಶೀಲತೆ ಎಲ್ಲ ಚಿಂತೆಗಳನ್ನು ದೂರ ಮಾಡುವುದು. ಆಪ್ತರ ಸಂಗದಲ್ಲಿ  ಸಂತೋಷ ಅನುಭವಿಸುವಿರಿ. ವೃತ್ತಿಯಲ್ಲಿ ಯಶ.

ಮಿಥುನ
ಇತರರ  ಚಾಡಿ ಮಾತು ನಂಬದಿರಿ. ಸಂಬಂಧ ಕೆಡಿಸಲು ಕೆಲವರು ಯತ್ನಿಸುವರು. ವಿವೇಕದಿಂದ ಪರಾಮರ್ಶಿಸಿ ನಿರ್ಧಾರ ತಾಳಿರಿ.

ಕಟಕ
ಮನೆಯಲ್ಲಿನ ಬೆಳವಣಿಗೆ ನಿಮಗೆ ಹಿತ ತಾರದು. ಆದರೆ ಅದನ್ನು ಒಪ್ಪಿಕೊಂಡು ಸಾಗುವುದರಲ್ಲಿ ನಿಮ್ಮ ಹಿತವಿದೆ. ಇತರರನ್ನು ಎದುರು ಹಾಕಿಕೊಳ್ಳದಿರಿ.

ಸಿಂಹ
ಮುಖ್ಯ ಕಾರ್ಯದಲ್ಲಿ ನೀವು ನಿರೀಕ್ಷಿಸಿದ ಯಶಸ್ಸು ಇಂದು ದೊರಕುವುದು.  ಆದರೆ ಯಶಸ್ಸಿನಿಂದ ಮೈಮರೆಯದಿರಿ. ಕೆಲಸ ಇನ್ನೂ ಉಳಿದಿದೆ.

ಕನ್ಯಾ
ಯಾವುದೇ ಹಿನ್ನಡೆ ನಿಮ್ಮನ್ನಿಂದು ಬಾಧಿಸದು. ಹಾಗಾಗಿ ಆ ಕುರಿತಾದ ಅಂಜಿಕೆ ಬಿಟ್ಟುಬಿಡಿ. ಆದರೆ ದಿನವಿಡಿ ನಿಮ್ಮ ಪಾಲಿಗೆ ನೀರಸವೆನಿಸುತ್ತದೆ.

ತುಲಾ
ವೃತ್ತಿಯಲ್ಲಿ ಬಿಕ್ಕಟ್ಟು. ಹಣಕಾಸು ಕೊರತೆ.  ಇತರರ ಸಹಕಾರದಿಂದ ಅದನ್ನು ನಿಭಾಯಿ ಸುವಿರಿ. ಖಾಸಗಿ ಬದುಕಿನಲ್ಲಿ ಏರುಪೇರು. ನಿರಾಶೆ ಸಂಭವ.

ವೃಶ್ಚಿಕ
ಅಧಿಕ ಕೆಲಸ, ಅಧಿಕ ಒತ್ತಡ. ಎಲ್ಲ ಕಾರ್ಯವನ್ನು ಒಮ್ಮೆಗೇ ಮುಗಿಸಲು ಯತ್ನಿಸುವಿರಿ  ಅಂತಿಮವಾಗಿ ಯಾವುದೇ ಕೆಲಸ ಸರಿಯಾಗಿ ನಡೆಯದು.

ಧನು
ವ್ಯವಹಾರದಲ್ಲಿ ಶುಭ ಸುದ್ದಿ. ನೀವು ನಿರೀಕ್ಷಿಸಿದಂತೆ ಕೆಲಸ ಸಾಗುವುದು. ಆದರೆ ಕೌಟುಂಬಿಕವಾಗಿ ಒತ್ತಡ. ಅವರ ಕೆಲವು ಬೇಡಿಕೆ ಅತಿಯೆನಿಸುವುದು.

ಮಕರ
ಧಾರ್ಮಿಕ ಕಾರ್ಯದಲ್ಲಿ  ಹೆಚ್ಚು ಆಸಕ್ತಿ. ಕೆಲವು ಸಮಸ್ಯೆಗಳು ನಿಮ್ಮನ್ನು ಆಧ್ಯಾತ್ಮಿಕದೆಡೆಗೆ ನೂಕಬಹುದು. ಕಷ್ಟಕ್ಕೆ ಅಂಜದಿರಿ, ಅದನ್ನು ಎದುರಿಸಿ.

ಕುಂಭ
ನಿಮ್ಮ ಜನಪ್ರಿಯತೆ ಹೆಚ್ಚಿಸುವ ಬೆಳವಣಿಗೆ.   ಕುಟುಂಬದಲ್ಲಿ ಭಿನ್ನಮತ ಮೂಡಿದರೂ ಶೀಘ್ರ ನಿವಾರಣೆ. ಆರ್ಥಿಕ ಸ್ಥಿತಿ ಸುಧಾರಣೆ. ವೃತ್ತಿಯಲ್ಲಿ ಉನ್ನತಿ.

ಮೀನ
ಸರಿಯಾದ ಯೋಜನೆಯಿಲ್ಲದೆ ನಿಮ್ಮ ಕೆಲಸ  ಕೆಡಬಹುದು. ಕೆಲಸದಲ್ಲಿನ ತಪ್ಪು ಸರಿಪಡಿಸುವುದರಲ್ಲೇ ನಿಮ್ಮ ಹಿತವಿದೆ. ಬಂಧಗಳ ಸಹಕಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!