ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಹಿರಿಯರ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಉಳಿದಂತೆ ಇಂದು ನಿಮಗೆ ಪೂರಕ ದಿನ. ನಿಮ್ಮ ಇಚ್ಛೆಯಂತೆ ಸಾಗುವುದು.
ವೃಷಭ
ಕೆಲವು ಅಹಿತಕರ ಕ್ಷಣಗಳನ್ನು ಅನುಭವಿಸುವಿರಿ. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಲಿಯಿರಿ. ಆಹಾರದಲ್ಲಿ ಹಿತಮಿತವಿರಲಿ.
ಮಿಥುನ
ಪ್ರೀತಿಯನ್ನು ಹುಡುಕಿಕೊಂಡು ಹೋಗದಿರಿ. ಅದು ತಾನಾಗಿ ನಿಮಗೆ ಒಲಿಯಲಿದೆ. ಸ್ವಂತ ವ್ಯವಹಾರ ನಡೆಸುವವರಿಗೆ ಉತ್ತಮ ಫಲವಿದೆ.
ಕಟಕ
ವೃತ್ತಿಯಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ. ದಿಟ್ಟತನದಿಂದ ಅದನ್ನು ಎದುರಿಸಿ. ಮನೆಯಲ್ಲಿ ಸೌಹಾರ್ದ ವಾತಾವರಣ. ಖರ್ಚು ಹೆಚ್ಚಳದ ಚಿಂತೆ.
ಸಿಂಹ
ನಿಮ್ಮ ಮನಶ್ಯಾಂತಿ ಕೆಡಿಸುವ ವ್ಯಕ್ತಿಗಳಿಂದ ದೂರವಿರಿ. ಮನೆಯೊಳಗಿನ ಬಿಕ್ಕಟ್ಟನ್ನು ಸಂಧಾನದ ಮೂಲಕ ಪರಿಹರಿಸಿ. ಆರ್ಥಿಕ ಸಂಕಟ.
ಕನ್ಯಾ
ವ್ಯಕ್ತಿಗತ ಬದುಕಿನಲ್ಲಿ ಕೆಲವು ಸಮಸ್ಯೆ ಹುಟ್ಟಿಕೊಳ್ಳುವುದು. ಅದನ್ನು ಪರಿಹರಿಸಲು ಶಕ್ತರೂ ಆಗುವಿರಿ. ಸಮಸ್ಯೆ ತಾತ್ಕಾಲಿಕ ಎಂಬ ಅರಿವು ಆಗಲಿದೆ.
ತುಲಾ
ಕೌಟುಂಬಿಕ ಅಶಾಂತಿ. ಯಾವುದೇ ಕೆಲಸವನ್ನು ಅತಿರೇಕವಾಗಿ ಮಾಡದಿರಿ. ಇತರರ ಮಾತನ್ನು ಕೇಳುವ ಸಹನೆಯಿರಲಿ. ಹೊಂದಾಣಿಕೆ ಮುಖ್ಯ.
ವೃಶ್ಚಿಕ
ಪ್ರೀತಿಯ ವಿಷಯದಲ್ಲಿ ಪ್ರತಿಕೂಲ ಬೆಳವಣಿಗೆ. ನಿಮ್ಮ ಅಸಹನೆ ಬಾಂಧವ್ಯ ಕೆಡಿಸುವುದು. ಕೆಲವರ ಮಾತು ನಿಮ್ಮ ಮನಸ್ಸು ಕೆಡಿಸಬಹುದು. ಸಂಯಮವಿರಲಿ.
ಧನು
ಕೆಲದಿನಗಳ ಕಠಿಣ ಶ್ರಮ ಉತ್ತಮ ಫಲ ನೀಡುವುದು. ವಿವೇಚನೆಯಿಂದ ಕಾರ್ಯ ಎಸಗಿದರೆ ಎಲ್ಲವೂ ಇಂದು ಸಲೀಸಾಗುವುದು.
ಮಕರ
ವ್ಯವಹಾರದಲ್ಲಿ ಹಿನ್ನಡೆ. ಕೆಲವರಿಂದ ಅಸಹಕಾರ. ಧೃತಿಗೆಡದೆ ನಿಮ್ಮ ದಾರಿಯಲ್ಲಿ ಮುಂದುವರಿಯಿರಿ. ಹಿರಿಯರ ಹಿತವಚನ ಪಾಲಿಸಿರಿ.
ಕುಂಭ
ಸಹೋದ್ಯೋಗಿಗಳ ಜತೆ ಅಸಹನೆ ಹೆಚ್ಚಬಹುದು. ಕೆಲವರ ನಡೆನುಡಿ ನಿಮಗೆ ಸರಿಬರುವುದಿಲ್ಲ. ಆತ್ಮೀಯರು ದೂರವಾಗುವ ಚಿಂತೆ.
ಮೀನ
ಎಲ್ಲರ ಅಭಿಪ್ರಾಯ ಕೇಳುತ್ತಾ ಹೋದರೆ ಒತ್ತಡ ಹೆಚ್ಚುವುದು. ಅದಕ್ಕಾಗಿ ಮೌನವಾಗಿ ನಿಮ್ಮ ಕಾರ್ಯ ಮಾಡುತ್ತಾ ಹೋಗಿ. ಯಶಸ್ಸು ಕಾದಿದೆ.