ದಿನಭವಿಷ್ಯ| ಖಾಸಗಿ ಬದುಕಿನಲ್ಲಿ ನೀವು ನಿರೀಕ್ಷಿಸಿದ ಬೆಳವಣಿಗೆ ಸಾಧ್ಯವಾಗಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಹೆಚ್ಚು ಹೊಣೆಗಾರಿಕೆ. ಆದರೆ ನಿಮ್ಮ ಉತ್ಸಾಹಕ್ಕೆ ಭಂಗವಿಲ್ಲ. ಕಾರ್ಯ ಸಿದ್ಧಿ. ಕುಟುಂಬಸ್ಥರ ಜತೆ ಸೌಹಾರ್ದತೆ. ಆರ್ಥಿಕ ಪರಿಸ್ಥಿತಿ ಉತ್ತಮ.

ವೃಷಭ
ಉತ್ಸಾಹ ಪೂರ್ಣ ಕೌಟುಂಬಿಕ ಪರಿಸರ. ಬಂಧುಗಳ ಭೇಟಿ, ಕಾರ್ಯಗಳೆಲ್ಲ ಸಲೀಸು.  ಆರೋಗ್ಯ ಸಮಸ್ಯೆ ನಿವಾರಣೆ. ನಿಮಗಿಂದು ಅನುಕೂಲಕರ ದಿನ.

ಮಿಥುನ
ಮನೆಯಲ್ಲಿ ವಾಗ್ವಾದ ನಡೆದೀತು. ಸಾಧ್ಯವಾದಷ್ಟು ಅದರಿಂದ ದೂರವಿರಲು ಯತ್ನಿಸಿ. ಮಾತಿಗೆ ಮಾತು ಕೂಡಿಸಲು ಹೋಗಬೇಡಿ.

ಕಟಕ
ಇಂದು ಹೊಸ ಸಾಹಸಕ್ಕೆ ಹೋಗದಿರಿ. ಅದು ನಿಮ್ಮ ಮೇಲೆ ಒತ್ತಡ ಹೇರುವುದಲ್ಲದೆ, ಮನಸ್ಸಿನ ನೆಮ್ಮದಿ ಕಸಿಯಲಿದೆ. ಇಂದು ಖರ್ಚು ಅಧಿಕ.

ಸಿಂಹ
ನಿಮ್ಮ ಎಲ್ಲ ಕೆಲಸ ಇಂದು ಸುಗಮವಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರಕುವುದು. ಬಂಧುಗಳಿಂದ ಸಹಕಾರ ಲಭಿಸುವುದು.

ಕನ್ಯಾ
ಇಂದು ಆರಾಮವಾಗಿ ಕಳೆಯಬೇಕು ಎಂಬ ನಿಮ್ಮ ಯೋಜನೆ ಫಲಿಸದು. ಆಕಸ್ಮಿಕ ಬೆಳವಣಿಗೆ ನಿಮ್ಮನ್ನು ದಿನವಿಡೀ ಒತ್ತಡದಲ್ಲಿ ಮುಳುಗಿಸುವುದು.

ತುಲಾ
ನೀವಿಂದು ಹಲವಾರು ಹೊಣೆಗಾರಿಕೆ ನಿಭಾಯಿಸಬೇಕು. ಆದರೂ ಕೆಲವು ಅಪೂರ್ಣವಾಗಿ ಉಳಿಯುವವು. ಬಂಧುಗಳ ಒತ್ತಡ ಹೆಚ್ಚು.

ವೃಶ್ಚಿಕ
ಯಾವುದೇ ಕೆಲಸ ಇಂದು ಸಫಲವಾಗಿ ಮುಗಿಯುವುದು. ಕಠಿಣ ಕಾರ್ಯವೂ ಸುಲಭವೆನಿಸುವುದು. ಐಷಾರಾಮಿ ವಸ್ತು ಖರೀದಿ ಸಂಭವ.

ಧನು
ಸಕಾಲದಲ್ಲಿ ನಿಮ್ಮ ಕಾರ್ಯ ಮುಗಿಸುವಿರಿ. ಖಾಸಗಿ ಬದುಕಿನಲ್ಲಿ ನೀವು ನಿರೀಕ್ಷಿಸಿದ ಬೆಳವಣಿಗೆ ಸಾಧ್ಯವಾಗಲಿದೆ. ಆರ್ಥಿಕ ಉನ್ನತಿ.

ಮಕರ
ಕೆಲವರ ಮಾತು ನಿಮ್ಮ ಮನಸ್ಸು ಕೆಡಿಸಬಹುದು. ನಿಮ್ಮ ಏಕಾಗ್ರತೆ ಹಾಳಾದೀತು. ಹಾಗೆಂದು ಉತ್ಸಾಹ ಕುಂದದಿರಿ. ನಿಮ್ಮ ಕಾರ್ಯ ಮುಂದರಿಸಿ.

ಕುಂಭ
ಆರ್ಥಿಕ ಲಾಭ. ಕಾರ್ಯದಲ್ಲಿ ಸಫಲತೆ. ವೃತ್ತಿಯಲ್ಲಿ ನಿಮ್ಮ ಗುರಿ ಈಡೇರುವುದು. ಕಾಡುತ್ತಿದ್ದ ಸಮಸ್ಯೆ ನಿವಾರಣೆ. ಒಟ್ಟಿನಲ್ಲಿ  ಸಫಲ ದಿನ.

ಮೀನ
ಕುಟುಂಬ ಸದಸ್ಯರ ಜತೆ ಉತ್ತಮ ಹೊಂದಾಣಿಕೆ. ಅವರ ಬೇಕುಬೇಡ ಅರಿಯಲು ಸಫಲರಾಗುವಿರಿ. ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!