ದಿನಭವಿಷ್ಯ| ನಿಮ್ಮಲ್ಲಿ ನೆಗೆಟಿವ್ ಚಿಂತನೆ ತುಂಬಿಸುವ ವ್ಯಕ್ತಿಗಳಿಂದ ದೂರವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಸಂತೋಷವನ್ನ್ನು ಮನಸ್ಸಿನೊಳಗೆ ಹುಡುಕಬೇಕು. ಕೆಲ ವಿಷಯಗಳಲ್ಲಿ ನಿಮ್ಮ ಮನಸ್ಥಿತಿ ಬದಲಿಸಿಕೊಂಡರೆ ಅದು ಸುಲಭವಾದೀತು.

ವೃಷಭ
ಕೆಲವು ದಿನಗಳ ಕಠಿಣ ಪರಿಶ್ರಮಕ್ಕೆ  ಇಂದು ಫಲ ದೊರಕುವುದು. ಉದ್ಯೋಗದಲ್ಲಿ ಉನ್ನತಿ. ಕೌಟುಂಬಿಕ ಸಮಸ್ಯೆ ಪರಿಹಾರ. ಬಂಧುಗಳ ಸಹಕಾರ.

ಮಿಥುನ
ಇತರರ ಜತೆ ಉತ್ತಮ ಹೊಂದಾಣಿಕೆ ಸಾಧಿಸಲು ಶಕ್ತರಾಗುವಿರಿ. ಇದರಿಂದಾಗಿ ಭಿನ್ನಾಭಿಪ್ರಾಯ ನಿವಾರಣೆ. ಸಂಸಾರದಲ್ಲಿ ಸಮನ್ವಯ.

ಕಟಕ
ಮನೆಯಲ್ಲಿ  ಭಿನ್ನಮತ ಉಂಟಾದೀತು. ನಿಮ್ಮ ನಿಲುವು ಸಡಿಲಿಸಿ ಹಾಗೂ ಹೊಂದಾಣಿಕೆ ಸಾಧಿಸಿ. ಎಲ್ಲ ಸರಿಹೋಗುವುದು.  ವ್ಯವಹಾರದಲ್ಲಿ ಲಾಭ.

ಸಿಂಹ
ಏಕಾಂಗಿತನ ಹೆಚ್ಚು ಆಪ್ತವಾದೀತು. ಅದಕ್ಕೆ ಕಾರಣ ಇತರರ ಜತೆಗಿನ ನಿಮ್ಮ ಸಂಘರ್ಷ. ಸಣ್ಣ ವಿಷಯಗಳಿಗೆ ಮನಸ್ಸು ಕೆಡಿಸಿಕೊಳ್ಳದಿರಿ. ಒಳ್ಳೆ ಚಿಂತನೆಯಿರಲಿ.

ಕನ್ಯಾ
ವ್ಯವಹಾರದಲ್ಲಿ ಆರ್ಥಿಕ ಲಾಭ. ಹತ್ತಿರದ ಬಂಧುಗಳಿಂದ ಒಳ್ಳೆಯ ಸುದ್ದಿ ಕೇಳುವಿರಿ. ನೆರೆಕರೆಯ ವ್ಯಕ್ತಿಗಳ ಜತೆಗಿನ ಅಸಮಾಧಾನ ನಿವಾರಣೆ.

ತುಲಾ
ನಿಮ್ಮಲ್ಲಿ ನೆಗೆಟಿವ್ ಚಿಂತನೆ ತುಂಬಿಸುವ ವ್ಯಕ್ತಿಗಳಿಂದ ದೂರವಿರಿ. ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಆಪ್ತರಿಂದ ಮಾನಸಿಕ ನೋವು ಪಡೆಯುವಿರಿ.

ವೃಶ್ಚಿಕ
ನೀವು ಏನನ್ನು ನಿರೀಕ್ಷಿಸಿದ್ದಿರೋ ಅದಕ್ಕಿಂತ ಹೆಚ್ಚಿನದ್ದನ್ನೇ ಇಂದು ಪಡೆಯುವಿರಿ. ಕೌಟುಂಬಿಕ ಸಹಕಾರ. ವೃತ್ತಿಯಲ್ಲಿ ಎಲ್ಲವೂ ಸುಗಮ, ಸರಳ.

ಧನು
ವೃತ್ತಿಯಲ್ಲಿ ಉನ್ನತಿ. ವ್ಯವಹಾರ ಪ್ರಗತಿ. ಮನೆಯಲ್ಲಿ ಹಿರಿಯರ ಜತೆ ಮಾತಿನ ಚಕಮಕಿ ನಡೆದೀತು. ಸಣ್ಣ ಆರೋಗ್ಯ ಸಮಸ್ಯೆ ಸಂಭವ.

ಮಕರ
ಕೌಟುಂಬಿಕ ಬದುಕಿನಲ್ಲಿ ಸಮಸ್ಯೆ ಎದುರಿಸುವಿರಿ. ಅಭಿಪ್ರಾಯಭೇದ. ಮಾತುಕತೆಯಿಂದ ಅದನ್ನು ಪರಿಹರಿಸಿ. ನಿಮ್ಮದೇ ಹಠ ಸಾಧಿಸಿ ಕೂರದಿರಿ.

ಕುಂಭ
ಪ್ರಮುಖ ವಿಷಯಕ್ಕೆ ಎಲ್ಲರ ಅಭಿಪ್ರಾಯ ಕೇಳುತ್ತ ಕೂತರೆ ಒತ್ತಡಕ್ಕೆ ಸಿಲುಕುವಿರಿ. ಕೆಲವೊಮ್ಮೆ ನಿಮ್ಮದೇ ಸ್ವಂತ ನಿರ್ಧಾರ  ತಾಳುವುದು ಒಳ್ಳೆಯದು.

ಮೀನ
ಕೆಲವು ವಿಷಯಗಳು ನಿಮಗೆ ಸಂಬಂಧ ಪಡದಿದ್ದರೂ ಅದರ ಕುರಿತು ಚಿಂತಿಸಿ ಮನಸ್ಸು ಕೆಡಿಸಿಕೊಳ್ಳುವಿರಿ. ಅಂತಹ ಚಿಂತನೆ ದೂರ ಮಾಡುವುದೇ ಪರಿಹಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!