ದಿನಭವಿಷ್ಯ| ಸಂಗಾತಿ ಜತೆ ಸುಮಧುರ ಬಾಂಧವ್ಯ, ಆರ್ಥಿಕ ಸ್ಥಿತಿ ಉತ್ತಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ವೃತ್ತಿಯಲ್ಲಿ ಫಲಪ್ರದ ದಿನ. ಉದ್ಯೋಗ ಬದಲಾವಣೆಯ ಬಯಕೆ ಈಡೇರುವುದು. ಉಳಿತಾಯ ಹೆಚ್ಚಳ. ಬಂಧುಗಳ ಜತೆ ಉತ್ತಮ ಬಾಂಧವ್ಯ.

ವೃಷಭ
ವೃತ್ತಿಯಲ್ಲಿ ನಿಮ್ಮ ಸಾಧನೆಯ ಯಶಸ್ಸನ್ನು ಇತರರು ತಮ್ಮದೆಂದು ಹೇಳಬಹುದು. ಆರೋಗ್ಯಕರ ಆಹಾರವನ್ನಷ್ಟೇ ಸೇವಿಸಿ. ಬಂಧುಗಳ ಸಹಕಾರ.

ಮಿಥುನ
ಸಕಾಲದಲ್ಲಿ ಕೆಲಸ ಮುಗಿಸುವ ಮೂಲಕ ನಿರಾಳತೆ. ಸಂಗಾತಿ ಜತೆ ಸುಮಧುರ ಬಾಂಧವ್ಯ. ಆರ್ಥಿಕ ಸ್ಥಿತಿ ಉತ್ತಮ. ಆರೋಗ್ಯ ಸಮಸ್ಯೆ ಪರಿಹಾರ.

ಕಟಕ
ಖಾಸಗಿ ಜೀವನದ ಒತ್ತಡವು ವೃತ್ತಿಯ ಮೇಲೂ ಪರಿಣಾಮ ಬೀರಬಹುದು. ಮಕ್ಕಳ ವರ್ತನೆ ಮನಶ್ಯಾಂತಿ ಕಲಕಬಹುದು. ಸಂಯಮ ಮುಖ್ಯ.

ಸಿಂಹ
ಅನಿರೀಕ್ಷಿತ ಖರ್ಚು. ಇದರಿಂದಾಗಿ ನಿಮ್ಮ ಆರ್ಥಿಕ ಹೊಂದಾಣಿಕೆ ಏರುಪೇರಾಗಬಹುದು. ಕೌಟುಂಬಿಕ ಸಹಕಾರ. ಬೆನ್ನು ನೋವು
ಬಾಧಿಸುವ ಸಂಭವ.

ಕನ್ಯಾ
ಆರ್ಥಿಕ ಪರಿಸ್ಥಿತಿ ಎಲ್ಲೋ ಸ್ಥಗಿತಗೊಂಡಂತೆ ಅನಿಸಬಹುದು. ಹಣದ ಹೂಡಿಕೆಯಲ್ಲಿ ವಿವೇಕ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಸಂಭವ.

ತುಲಾ
ಕೆಲಸದ ಒತ್ತಡವು ನಿವಾರಣೆಗೊಂಡು ಮನಸ್ಸಿಗೆ ನಿರಾಳತೆ. ಇರುವ ಹಣದಲ್ಲೇ ತೃಪ್ತಿ ಕಾಣುವ ಮನಸ್ಥಿತಿ ನಿಮ್ಮದು. ಬಂಧುಗಳ ಸಹಕಾರ.

ವೃಶ್ಚಿಕ
ವೃತ್ತಿಯಲ್ಲಿ ಅಥವಾ ಕಲೆಯ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯದ ಅನಾವರಣ ಆಗಲಿದೆ. ಸಂಗಾತಿ ಜತೆಗಿನ ಭಿನ್ನಮತ ತಾರಕಕ್ಕೆ ಏರದಂತೆ ನೋಡಿಕೊಳ್ಳಿ.

ಧನು
ಹೆಚ್ಚುವರಿ ಕೆಲಸದ ಹೊರೆ. ಅದನ್ನು ಸಮರ್ಥವಾಗಿ ನಿಭಾಯಿಸಿ. ಆದಾಯ ಕಡಿಮೆ. ಹಾಗಾಗಿ ವೆಚ್ಚವನ್ನೂ ಕಡಿಮೆ ಮಾಡಬೇಕಾದೀತು.

ಮಕರ
ವೃತ್ತಿಪರ ಕಾರ್ಯದಲ್ಲಿ ಉತ್ತಮ ನಿರ್ವಹಣೆ. ಪ್ರೇಮದ ವಿಚಾರದಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಇತರರಿಂದ ನಿಮಗೆ ಪೂರಕ ಸ್ಪಂದನೆ ಪಡೆಯುವಿರಿ.

ಕುಂಭ
ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಇಂದು ನಿರಾಳತೆ ಪಡೆಯುವಿರಿ. ಪ್ರೀತಿಯ ವಿಷಯದಲ್ಲಿ ಭಾವನಾತ್ಮಕ ಏರುಪೇರು ಉಂಟಾದೀತು.

ಮೀನ
ಇಂದು ಬಂದಂತೆ ಪರಿಸ್ಥಿತಿ ಎದುರಿಸಿರಿ. ಯಾವುದನ್ನೂ ಬದಲಿಸಲು ಹೋಗದಿರಿ. ನಿಮ್ಮ ಕಾರ್ಯಕ್ಕೆ ಶ್ಲಾಘನೆ ಸಿಗದಿದ್ದರೆ ಕೊರಗುವುದು ಬೇಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!