ದಿನಭವಿಷ್ಯ| ಉದ್ದೇಶಿಸಿದ ಕಾರ್ಯ ಸುಲಲಿತವಾಗಿ ನಡೆಯುವುದು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮನ್ನು ಮೆಚ್ಚದವರು ನಿಮ್ಮ ಅಧಃಪತನಕ್ಕೆ ಯತ್ನಿಸುತ್ತಾರೆ. ಎಚ್ಚರದಿಂದಿರಿ. ಕುಟುಂಬಸ್ಥರ ಹಿತಾಸಕ್ತಿ ಗಮನಿಸಿ. ಆರ್ಥಿಕ ಒತ್ತಡ ಹೆಚ್ಚುವುದು.

ವೃಷಭ
ಸಂಗಾತಿ ಜತೆಗೆ ಮನಸ್ತಾಪವಾದೀತು. ಭಿನ್ನಾಭಿಪ್ರಾಯ ನಿವಾರಿಸಲು ಆದ್ಯತೆ ಕೊಡಿ. ಅಧಿಕ ಖರ್ಚು ಚಿಂತೆಗೆ ಕಾರಣವಾಗುವುದು.

ಮಿಥುನ
ಕೆಲವರೊಂದಿಗೆ ಸಂಬಂಧ ನಿಭಾಯಿಸಲು ಕಷ್ಟ ಪಡುವಿರಿ. ಸಂಬಂಧ ಕಡಿಯುವ ಯೋಚನೆ ಉಂಟಾದೀತು. ಸರಿಯಾಗಿ ಯೋಚಿಸಿ ನಿರ್ಧಾರ ತಾಳಿರಿ.

ಕಟಕ
ಉತ್ಸಾಹದಿಂದ ದಿನ ಆರಂಭಗೊಂಡರೂ ಬಳಿಕ ಉತ್ಸಾಹ ಕುಂದಿಸುವ ಬೆಳವಣಿಗೆ ಉಂಟಾದೀತು. ಖಾಸಗಿ ಸಮಸ್ಯೆಗೆ ಚಿಂತೆಗೆ ಕಾರಣವಾಗುವುದು.

ಸಿಂಹ
ಇತರರ ಜತೆ ವ್ಯವಹಾರ ನಡೆಸುವಾಗ ಎಚ್ಚರ ವಹಿಸಿ. ನಿಮ್ಮ ನಡೆನುಡಿ ತಪ್ಪರ್ಥಕ್ಕೆ ಕಾರಣವಾಗದಂತೆ ನೋಡಿಕೊಳ್ಳಿ. ಬಂಧುಗಳ ಸಹಕಾರ.

ಕನ್ಯಾ
ಇತರರ ಸಮಸ್ಯೆ ಪರಿಹರಿಸುವಲ್ಲಿ ನೀವು ಆಸಕ್ತಿ ವಹಿಸುವಿರಿ. ಅನಿಯಂತ್ರಿತ  ಆಹಾರ ಸೇವನೆ ಅನಾರೋಗ್ಯಕ್ಕೆ ಕಾರಣವಾದೀತು. ಖರ್ಚು ಹೆಚ್ಚಳ.

ತುಲಾ
ಬಂಧುಗಳ ಆಗಮನ. ಇದರಿಂದ ನಿಮ್ಮ ಉತ್ಸಾಹ ಹೆಚ್ಚುವುದು. ಉದ್ದೇಶಿಸಿದ ಕಾರ್ಯ ಸುಲಲಿತವಾಗಿ  ನಡೆಯುವುದು.  ಚಿಂತೆ ಪರಿಹಾರ.

ವೃಶ್ಚಿಕ
ಆತ್ಮೀಯರೊಂದಿಗೆ ವ್ಯವಹರಿಸುವಾಗ ಎಚ್ಚರ ವಹಿಸಿ. ಅಚಾತುರ್ಯವು ಸಂಬಂಧ ಕೆಡಿಸಬಹುದು. ನಡೆನುಡಿಯಲ್ಲಿ ನಿಯಂತ್ರಣ ಅವಶ್ಯ. ಖರ್ಚು ಅಧಿಕ.

ಧನು
ನಿಮ್ಮ ವಿರೋಧಿಗಳು ಸಂಧಾನಕ್ಕೆ ಬರುವರು.  ನಿಮ್ಮ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆ ಗಳಿಸುವುದು. ಕೌಟುಂಬಿಕ ಪರಿಸ್ಥಿತಿ ತಿಳಿಯಾಗಲಿದೆ.

ಮಕರ
ಯಾರನ್ನೋ ಮೆಚ್ಚಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತೀರಿ. ಅದು ಫಲ ನೀಡದು. ಆರೋಗ್ಯ ಸ್ಥಿತಿ ಸ್ಥಿರ. ಆರ್ಥಿಕ ಬಿಕ್ಕಟ್ಟಿನ  ಆತಂಕ ನಿವಾರಣೆ.

ಕುಂಭ
ಹೊಣೆಗಾರಿಕೆ ಹೆಚ್ಚಿದರೂ ಅದನ್ನು ಚೆನ್ನಾಗಿ ನಿಭಾಯಿಸುವಿರಿ. ಇದರಿಂದ ಆತ್ಮತೃಪ್ತಿ ಪಡೆಯುವಿರಿ. ಆತ್ಮೀಯ ಬಂಧುಗಳ ಒಡನಾಟವು  ಉತ್ಸಾಹ ಹೆಚ್ಚಿಸುವುದು.

ಮೀನ
ಸಮಸ್ಯೆಗಳಿಗೆ ಅಂಜದಿರಿ. ಅವುಗಳು ತಾವಾಗಿ ಪರಿಹಾರ ಕಾಣುವವು. ನೀವು ಕೈಗೊಳ್ಳಬೇಕಾದ ಗುರುತರ ಕಾರ್ಯಕ್ಕೆ ಗಮನ ಕೊಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!