ದಿನಭವಿಷ್ಯ| ನಿಮ್ಮ ನಾಯಕತ್ವ ಗುಣ ನಿಮ್ಮನ್ನು ಉನ್ನತಿಗೆ ಕೊಂಡೊಯ್ಯುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೇಷ
ಆಸ್ತಿ ಅಥವಾ ಇನ್ನಿತರ ವ್ಯವಹಾರದಲ್ಲಿ ಹಣ ಹೂಡಲು ಕಾಲ ಪ್ರಶಸ್ತವಾಗಿದೆ. ದಂಪತಿ ನಡುವಿನ ಭಿನ್ನಮತ ಪರಿಹಾರ. ಚರ್ಮದ ಅಲರ್ಜಿ ಸಂಭವ.

ವೃಷಭ
ನಿಮ್ಮ ನಿರ್ಧಾರಕ್ಕೆ ಹಿರಿಯರ ಸಮ್ಮತಿ. ಇತರರನ್ನು ಮೆಚ್ಚಿಸಲು ಯತ್ನಿಸುವುದಕ್ಕಿಂತ ನಿಮಗೆ ಸಂತೋಷ ತರುವ ಕಾರ್ಯಕ್ಕೆ ಮುಂದಾಗಿರಿ.

ಮಿಥುನ
ವೃತ್ತಿಯಲ್ಲಿನ ಒತ್ತಡ ನಿವಾರಣೆ. ಹಾಗಾಗಿ ಮಾನಸಿಕ ನಿರಾಳತೆ. ಆರೋಗ್ಯ ಕಾಪಾಡಲು ದೇಹಾಭ್ಯಾಸ ಮುಖ್ಯ, ಆಲಸ್ಯ ಸಲ್ಲದು. ಇದು ನಿಮಗೆ ತಿಳಿದಿರಲಿ.

ಕಟಕ
ನಿಮ್ಮ ನಾಯಕತ್ವ ಗುಣ ನಿಮ್ಮನ್ನು ಉನ್ನತಿಗೆ ಕೊಂಡೊಯ್ಯುವುದು. ಸಮಸ್ಯೆಗಳನ್ನು ತಾರ್ಕಿಕವಾಗಿ ಬಗೆಹರಿಸಿ. ಭಾವುಕತೆಯಿಂದ ಪ್ರತಿಕ್ರಿಯಿಸಬೇಡಿ.

ಸಿಂಹ
ಕೆಲವು ಚಿಂತೆ ನಿಮ್ಮನ್ನು ಕಾಡುತ್ತಿದೆ. ಅದಕ್ಕೆ ಪರಿಹಾರವೂ ನಿಮ್ಮಲ್ಲೇ ಇದೆ. ಇಂದು ನಿಮಗೆ ಈ ಪರಿಹಾರದ ದಾರಿ ತೋರಬಹುದು. ಅವಕಾಶ ಬಳಸಿಕೊಳ್ಳಿ.

ಕನ್ಯಾ
ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಗಮನ ಕೊಡಿ. ಪ್ರೀತಿಪಾತ್ರರ ಜತೆ ವಾಗ್ವಾದಕ್ಕೆ ಇಳಿಯದಿರಿ. ಇತರರ ಮಾತು ಕೇಳಿರಿ.

ತುಲಾ
ಸಮಸ್ಯೆ ಕಾಡುವುದು. ನಿಮ್ಮ ಕುರಿತಂತೆ ಹಾಗೂ ಇತರರ ಕುರಿತಂತೆ ಸಮಾಧಾನದಿಂದ ವರ್ತಿಸಿರಿ. ಸಮಸ್ಯೆಗೆ ಪರಿಹಾರದ ದಾರಿ ತೋರುವುದು.

ವೃಶ್ಚಿಕ
ಪ್ರಮುಖವಲ್ಲದ ವಿಷಯವನ್ನು ದೊಡ್ಡದು ಮಾಡಬೇಡಿ. ಅದರಿಂದ ನೀವಾಗಿ ಸಮಸ್ಯೆ ಸೃಷ್ಟಿಸಿಕೊಳ್ಳುವಿರಿ. ಇತರರ ಮನಸನ್ನು ಅರ್ಥ ಮಾಡಿಕೊಳ್ಳಿರಿ.

ಧನು
ಗುರಿಯನ್ನು ಸಾಧಿಸಬೇಕಾದರೆ ಕೆಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕು. ಕೌಟುಂಬಿಕ ಒತ್ತಡ ಕಡಿಮೆಯಾಗಲಿದೆ. ವೃತ್ತಿಯಲ್ಲಿ ಉನ್ನತಿ.

ಮಕರ
ಕೆಟ್ಟ ಮತ್ತು ಸವಿ ನೆನಪುಗಳು ಒಟ್ಟಿಗೇ ಕಾಡಬಹುದು. ಯಾವುದೇ ವಿಷಯದಲ್ಲಿ ಆತುರದ ತೀರ್ಮಾನಕ್ಕೆ  ಬರಬೇಡಿ. ಆರೋಗ್ಯಕ್ಕೆ ಆದ್ಯ ಗಮನವಿರಲಿ.

ಕುಂಭ
ಬಹಳ ಸಮಯದ ಬಳಿಕ ಇಂದು ಕೆಲಸದ ಒತ್ತಡದಿಂದ ನಿರಾಳತೆ ಪಡೆಯುವಿರಿ. ಇತರ ವಿಷಯಗಳತ್ತ ಗಮನ ಹರಿಸಲು ಅವಕಾಶ ಸಿಗಲಿದೆ.

ಮೀನ
ನಿಮಗೆ ಸರಿಕಾಣದ ಕಾರ್ಯ ಮಾಡಲು ಹೋಗಬೇಡಿ. ಈ ನಿಟ್ಟಿನಲ್ಲಿ ಒತ್ತಡಕ್ಕೆ ಬಗ್ಗಬೇಡಿ. ಸ್ವಂತ ಅಭಿಪ್ರಾಯವನ್ನಷ್ಟೆ ನೆಚ್ಚಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!