ದಿನಭವಿಷ್ಯ| ಆತ್ಮೀಯರ ಹೃದಯದ ಭಾವನೆಗೆ ಸೂಕ್ತವಾಗಿ ಸ್ಪಂದಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ತಮ್ಮ ಸಮಸ್ಯೆ ಪರಿಹರಿಸಲು ನಿಮ್ಮನ್ನು  ಕೋರಬಹುದು. ಅದರಿಂದ ನೀವೇ ಸಮಸ್ಯೆಯಲ್ಲಿ ಸಿಲುಕಿಕೊಳ್ಳದಂತೆ ನೋಡಿಕೊಳ್ಳಿ.

ವೃಷಭ
ನಿಮ್ಮ ಏಕಾಗ್ರಚಿತ್ತತೆ ಕೆಡಿಸಲು ಹಲವಾರು ವಿಷಯಗಳಿವೆ. ಅತ್ತ ಗಮನ ಹರಿಸದಿರಿ. ಆತ್ಮೀಯರ ಜತೆಗಿನ ಮನಸ್ತಾಪವನ್ನು ಸರಿಪಡಿಸಿರಿ.

ಮಿಥುನ
ನಿಮ್ಮ ಕಾರ್ಯದಿಂದ ಎಲ್ಲರ ಮೆಚ್ಚುಗೆ ಗಳಿಸುತ್ತೀರಿ. ಹೊಸ ವ್ಯಕ್ತಿ ನಿಮ್ಮ ಜೀವನ ಪ್ರವೇಶಿಸುವರು. ಅವರೊಂದಿಗೆ ಸಂಬಂಧ ಗಾಢಗೊಳ್ಳಬಹುದು.

ಕಟಕ
ನಿಮ್ಮ ಮೆದು ಧೋರಣೆ ನಿಮ್ಮನ್ನು ಇತರರು ಬಳಸಿಕೊಳ್ಳಲು ಕಾರಣವಾಗಲಿದೆ. ಆದ್ದರಿಂದ ಕೆಲವು ವಿಷಯಗಳಲ್ಲಿ ಕಠಿಣ ನಿಲುವು ಒಳ್ಳೆಯದು.

ಸಿಂಹ
ವಹಿವಾಟಿನಲ್ಲಿ ಉತ್ತಮ ದಿನ.  ಧನಲಾಭ. ಸಮಸ್ಯೆ ನಿವಾರಣೆ. ಕೌಟುಂಬಿಕ ವಿಷಯದಲ್ಲಿ ಭಾವನಾತ್ಮಕ ಸ್ಥಿರತೆ
ಸಾಧಿಸುವಿರಿ.

ಕನ್ಯಾ
ಕೆಲಸದ ಒತ್ತಡ ಹೆಚ್ಚು. ಆದರೂ ಸಂಜೆ ವೇಳೆಗೆ ಎಲ್ಲವನ್ನು ಪೂರೈಸುವಿರಿ.  ಆರೋಗ್ಯ  ಸಮಸ್ಯೆ ಹೊಂದಿರುವವರು ಅದರಿಂದ ನಿರಾಳತೆ ಪಡೆಯುವಿರಿ.

ತುಲಾ
ಆರ್ಥಿಕವಾಗಿ ಕೆಲವು ಉತ್ತಮ ನಿರ್ಧಾರ ತಾಳುವಿರಿ. ಇದರಿಂದ ಹಣಕಾಸು ಪರಿಸ್ಥಿತಿ ದೃಢಗೊಳ್ಳಲಿದೆ. ಸಹೋದ್ಯೋಗಿಗಳ ಸಹಕಾರ.

ವೃಶ್ಚಿಕ
ಕೆಲಸದ ಒತ್ತಡ ಹೆಚ್ಚು. ಕೌಟುಂಬಿಕವಾಗಿ ಪ್ರೀತಿಪಾತ್ರರನ್ನು ಕಾಳಜಿಯಿಂದ ನೋಡಿಕೊಳ್ಳಿ. ಕಡೆಗಣಿಸಿದ ಭಾವ ಅವರಿಗೆ ಬಾರದಿರಲಿ.

ಧನು
ಮನೆ ಮತ್ತು ಕೆಲಸದ ಕ್ಷೇತ್ರದಲ್ಲಿ ಹೆಚ್ಚಿನ ಹೊಣೆಗಾರಿಕೆ. ಸೂಕ್ತ ಸಹಕಾರವೂ ದೊರಕುವುದಿಲ್ಲ. ನೀವೊಬ್ಬರೇ ಕಷ್ಟ ಪಡಬೇಕಾಗುವುದು.

ಮಕರ
ಆತ್ಮೀಯರ ಹೃದಯದ ಭಾವನೆಗೆ ಸೂಕ್ತವಾಗಿ ಸ್ಪಂದಿಸಿ.  ಇಲ್ಲದಿದ್ದರೆ ನೋವುಣ್ಣುತ್ತೀರಿ. ಆಹಾರ ಸೇವನೆಯಲ್ಲಿ ಇತಿಮಿತಿಯಿರಲಿ. ಹೊಟ್ಟೆ ಕೆಡಬಹುದು.

ಕುಂಭ
ಕೆಲಸದ ಹೊಣೆ ಹೆಚ್ಚು. ಆದರೆ ನಿರೀಕ್ಷಿತ ಫಲ ಸಿಗುವುದಿಲ್ಲ. ಆರೋಗ್ಯ ಸಮಸ್ಯೆಯೂ ಕಾಡಬಹುದು. ವಿವಾಹಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ.

ಮೀನ
ಏರುಪೇರುಗಳಿಲ್ಲದ ಸಹಜ ದಿನ. ಮನೆ ಮತ್ತು ವೃತ್ತಿಯಲ್ಲಿ ಕೆಲಸದ ಹೊರೆ ಕಡಿಮೆ. ಆತ್ಮೀಯ ಸಂಬಂಧವೊಂದು ಗಟ್ಟಿಗೊಳ್ಳುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!