ದಿನಭವಿಷ್ಯ| ಕೆಲವರ ವರ್ತನೆಗೆ ಅತಿರೇಕದ ಸ್ಪಂದನೆ ತೋರಬೇಕೆಂದೇನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಇಂದು ಭಾವುಕರಾಗಿ ವರ್ತಿಸುವಿರಿ. ಅನಿಶ್ಚಿತ ವರ್ತನೆ ತೋರುವಿರಿ. ಕೆಲ ವಿಚಾರಗಳಲ್ಲಿ ಗೊಂದಲದ ಮನಸ್ಥಿತಿ. ಆದ್ದರಿಂದ ಪ್ರಮುಖ ನಿರ್ಧಾರ ಮುಂದೂಡಿ.

ವೃಷಭ
ಹೆಚ್ಚು ದೃಢತೆಯಿಂದ ಕಾರ್ಯಾಚರಿಸುವಿರಿ. ಇದರಿಂದ ಅಸಾಧ್ಯ ಕೆಲಸವನ್ನೂ ಸಾಧಿಸುವಿರಿ. ಪ್ರೀತಿಪಾತ್ರರ ಜತೆ ಹೆಚ್ಚು ಹೊಂದಾಣಿಕೆ ಮತ್ತು ಸೌಹಾರ್ದ.

ಮಿಥುನ
ಕುಟುಂಬಸ್ಥರ ಸಮಸ್ಯೆ ನಿವಾರಿಸಲು ಆದ್ಯತೆ ಕೊಡಿ. ಅವರಿಗೆ ನಿಮ್ಮ ಮಾರ್ಗದರ್ಶನದ ಅಗತ್ಯ ಬೀಳುವುದು. ವೃತ್ತಿಯಲ್ಲಿ ನಿಮಗೆ ಅನುಕೂಲ ಬೆಳವಣಿಗೆ.

ಕಟಕ
ನಿಮಗಿಂದು ನಿರಾಳ ದಿನ. ಕೌಟುಂಬಿಕ ಮತ್ತು ವೃತ್ತಿ ಸಮಸ್ಯೆ ನಿವಾರಣೆ. ಬೆನ್ನು – ಕೀಲು ನೋವು ಇದ್ದವರಿಗೆ ಅದರಿಂದ ಮುಕ್ತಿ. ಆರ್ಥಿಕ ಸುಧಾರಣೆ.

ಸಿಂಹ
ಆತ್ಮೀಯರ ಸಂಬಂಧ ಕಡಿದುಕೊಂಡಿದ್ದರೆ ಅವರೊಂದಿಗೆ ಮಾತುಕತೆ ನಡೆಸಿ. ನಿಮ್ಮ ಭಾವನೆಯನ್ನು ಮುಕ್ತವಾಗಿ ವ್ಯಕ್ತಪಡಿಸಿ. ಎಲ್ಲ ಸರಿಯಾಗುವುದು.

ಕನ್ಯಾ
ಪ್ರಮುಖ ಕಾರ್ಯ ಇಂದು ಈಡೇರುವುದು. ಅಡ್ಡಿಗಳು ನಿವಾರಣೆ. ಬಾಕಿ ಉಳಿದಿದ್ದ ಕೌಟುಂಬಿಕ ಕಾರ್ಯ ಮುಗಿಸಲು ಪ್ರಯತ್ನಿಸಿ. ಆರೋಗ್ಯ ಸುಧಾರಣೆ.

ತುಲಾ
ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಮನಸ್ಸಿನ ಮೇಲೆ ನಿಯಂತ್ರಣ ಇರಲಿ. ಕೆಲವರ ವರ್ತನೆಗೆ ಅತಿರೇಕದ ಸ್ಪಂದನೆ ತೋರಬೇಕೆಂದಿಲ್ಲ.

ವೃಶ್ಚಿಕ
ನಿಮ್ಮ ಗುರಿ ಸಾಧನೆಗೆ ಸೂಕ್ತವಾದ ದಿನ. ಎಲ್ಲವೂ ಅನುಕೂಲಕರ. ಆತಂಕಕ್ಕೆ ಕಾರಣವಾಗಿದ್ದ ಪ್ರಸಂಗವು ನಿರಾತಂಕವಾಗಿ ಇತ್ಯರ್ಥ ಆಗುವುದು. ಆರ್ಥಿಕ ನೆರವು ಲಭ್ಯ.

ಧನು
ಇತರರು ತಮ್ಮ ಸಮಸ್ಯೆ ಹೇಳಿಕೊಂಡು ನಿಮ್ಮ ಬಳಿ ಬರುತ್ತಾರೆ. ನಿಮ್ಮಿಂದ ನೆರವು ಕೋರುತ್ತಾರೆ.  ಪ್ರಾಮಾಣಿಕವಾಗಿ ಮಾರ್ಗದರ್ಶನ ಮಾಡಿರಿ.

ಮಕರ
ಅರೆಮನಸ್ಸಿನಿಂದ ಕೆಲಸ ಮಾಡಬೇಡಿ. ಯಾವುದೇ ಕೆಲಸ ವಾದರೂ ಪೂರ್ಣ ತೊಡಗಿಸಿಕೊಳ್ಳಿ. ಕೆಲವರಿಂದ ಟೀಕೆ ಎದುರಿಸುವಿರಿ.

ಕುಂಭ
ಭಾವನೆ ಕೆದಕುವ ವ್ಯಕ್ತಿಗಳ ಜತೆ ಒಡನಾಟ. ಮೆಚ್ಚಿನ ಜಾಗಕ್ಕೆ ಭೇಟಿ ನೀಡುವ ಅವಕಾಶ. ನಿಮ್ಮ ಉದ್ದೇಶ, ಕಾರ್ಯದಲ್ಲಿ ಪ್ರಾಮಾಣಿಕತೆ ಮುಖ್ಯ.

ಮೀನ
ಪ್ರೀತಿಪಾತ್ರರ ಕುರಿತು ನಿಮ್ಮ ಭಾವನೆ ವ್ಯಕ್ತಪಡಿಸಲು ಸಕಾಲ. ಎಲ್ಲವೂ ಸುಗಮವಾಗಿ ಸಾಗುವುದು. ಭಿನ್ನಮತ ನಿವಾರಣೆ.  ಆರ್ಥಿಕ ಸ್ಥಿತಿ ಸುಧಾರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!