Monday, September 25, 2023

Latest Posts

ದಿನಭವಿಷ್ಯ| ಸಂಬಂಧದಲ್ಲಿ ಏರುಪೇರು, ಮಾತಿನ ಚಕಮಕಿ ಉಂಟಾದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಮನೆಯಲ್ಲಿನ ಕೆಲಸಗಳು ಇಂದು ನಿಮ್ಮ ದಿನವನ್ನು ಆವರಿಸುತ್ತವೆ. ಸಣ್ಣಪುಟ್ಟ ವಿಷಯಗಳು ಕೌಟುಂಬಿಕ ಶಾಂತಿ ಕದಡಲು ಅವಕಾಶ ಕೊಡಬೇಡಿ.

ವೃಷಭ
ಕೆಲವು ಕಾರ್ಯ ಬೇಗನೆ ಮಾಡಿ ಮುಗಿಸಿ. ಇಲ್ಲವಾದರೆ ಆ ಕುರಿತಾದ ಅಸಂತೃಪ್ತಿ ಮನದಲ್ಲೇ ಉಳಿಯುವುದು. ಇತರರ ಸಹಕಾರ ಲಭ್ಯ.

ಮಿಥುನ
ಒತ್ತಡದ ದಿನ. ಹೆಚ್ಚಿನ ಹೊಣೆಗಾರಿಕೆ. ಕಾರ್ಯ ನಿರ್ವಹಿಸಲು ಅಡ್ಡಿಗಳು. ಕುಟುಂಬ ಸದಸ್ಯರ ಸಂಗದಲ್ಲಿ ಸಾಂತ್ವನ ಪಡೆಯುವಿರಿ. ಅಧಿಕ ಖರ್ಚು.

ಕಟಕ
ಪ್ರೀತಿಪಾತ್ರರ ಜತೆ ಅಹಂ ಬಿಟ್ಟು ವ್ಯವಹರಿಸಿ. ಕ್ಷುಲ್ಲಕ ವಿಷಯದಲ್ಲಿ ಜಗಳ ಕಾಯಬೇಡಿ. ಆರೋಗ್ಯ ಸ್ಥಿತಿ ಕಾಪಾಡಲು ಹೆಚ್ಚು ಗಮನ ಕೊಡಿ.

ಸಿಂಹ
ಸಂಬಂಧದಲ್ಲಿ ಏರುಪೇರು, ಮಾತಿನ ಚಕಮಕಿ ಉಂಟಾದೀತು. ಹಣದ ವಿಚಾರದಲ್ಲಿ ನಷ್ಟವಾದೀತು. ಆರೋಗ್ಯಕ್ಕೆ ಸಂಬಂಧಿಸಿ ಹೆಚ್ಚಿನ ಕಾಳಜಿಯಿರಲಿ.

ಕನ್ಯಾ
ಪ್ರಮುಖ ವಿಷಯ ವೊಂದು ಸಮಸ್ಯೆಯಾಗಿ ಕಾಡುವುದು. ಅದರಿಂದ ಹೊರಬರಲು ಪ್ರಯತ್ನ. ಆದರೆ ನಿಮ್ಮ ಪ್ರಯತ್ನಕ್ಕೆ ಇಂದು ಸೂಕ್ತ ಫಲ ಸಿಗುವುದಿಲ್ಲ.

ತುಲಾ
ನಿಮಗಿಂದು ಪೂರಕ ದಿನ. ಮನದ ಗೊಂದಲಗಳನ್ನು ಆಪ್ತರ ಜತೆ ಹಂಚಿಕೊಳ್ಳಿ. ಅವರಿಂದ ಪರಿಹಾರ ಸಿಗಬಹುದು. ಧ್ಯಾನದಿಂದ ನೆಮ್ಮದಿ.

ವೃಶ್ಚಿಕ
ಮನೆಯಲ್ಲಿನ ಬೆಳವಣಿಗೆ ಭಾವನಾತ್ಮಕ ಏರುಪೇರಿಗೆ ಕಾರಣವಾಗುವುದು. ಚಿಂತೆಗೆ ಕಾರಣವಾದ ವಿಷಯವನ್ನು ಜಾಣ್ಮೆಯಿಂದ ಪರಿಹರಿಸಲು ಯತ್ನಿಸಿ.

ಧನು
ನಿಮ್ಮ ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಉಂಟಾದೀತು. ಅದಕ್ಕೆ ಹೊಂದಿಕೊಳ್ಳಬೇಕು. ಹದತಪ್ಪಿದ ಮಾತು ಜಗಳಕ್ಕೆ ಕಾರಣವಾದೀತು.

ಮಕರ
ಹಣದ ವಿಚಾರದಲ್ಲಿ ಬಿಕ್ಕಟ್ಟು ಎದುರಿಸುವಿರಿ. ಅವಶ್ಯ ಕಾರ್ಯಕ್ಕೆ ಹಣದ ಕೊರತೆ ಉಂಟಾದೀತು. ಬೆನ್ನುನೋವಿನಂತಹ ಸಮಸ್ಯೆ ಸಂಭವ.

ಕುಂಭ
ಬಾಕಿ ಉಳಿದಿರುವ ಕಾರ್ಯ ಮುಗಿಸಲು ಆದ್ಯತೆ ಕೊಡಿ. ಅದರಿಂದ ದೊಡ್ಡ ಹೊಣೆಗಾರಿಕೆ ಹೆಗಲಿನಿಂದ ಇಳಿದಂತೆ. ಕುಟುಂಬಸ್ಥರ ಸಹಕಾರ ಸಿಗುವುದು.

ಮೀನ
ಕೌಟುಂಬಿಕ ಮುನಿಸು ದೂರ. ಸಂಬಂಧ ಸುಧಾರಣೆ. ಸ್ನೇಹಿತರ ಸಂಗದಲ್ಲಿ ವಿಚಾರವಿನಿಮಯ. ಖರೀದಿ ಹುಮ್ಮಸ್ಸಿನಲ್ಲಿ ಹಣ ವ್ಯಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!