ದಿನಭವಿಷ್ಯ| ಕೆಲವರ ಜತೆ ಅನವಶ್ಯ ವಿಚಾರದಲ್ಲಿ ಜಗಳ ಕಾಯುವ ಸಂಭವವಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಅವ್ಯಕ್ತ ಗೊಂದಲ, ಅನಿಶ್ಚಿತತೆ ದಿನವಿಡೀ ಕಾಡ ಬಹುದು. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಬೇರೆ ವಿಚಾರಗಳಲ್ಲಿ ಮನಸ್ಸು ತೊಡಗಿಸಿ.

ವೃಷಭ
ವೃತ್ತಿಯ ಒತ್ತಡ ಮರೆಯಿರಿ. ಕುಟುಂಬಸ್ಥರ ಸಂಗದಲ್ಲಿ ಕಾಲ ಕಳೆಯಲು ಯೋಜಿಸಿ. ಕೆಲವುಅಗತ್ಯ ಕಾರ್ಯ ಪೂರೈಸಿ.

ಮಿಥುನ
ಉದ್ಯೋಗದಲ್ಲಿ ಹೊಸ ಪ್ರಯೋಗಗಳಿಗೆ ಯತ್ನಿಸದಿರಿ. ಅದರಿಂದ ಉತ್ತಮ ಫಲ ಸಿಗದು. ಸಾಂಸಾರಿಕ ಬಿಕ್ಕಟ್ಟು ಶಮನ. ಅದರಿಂದ ಮನಸ್ಸಿಗೆ ನಿರಾಳತೆ.

ಕಟಕ
ವೃತ್ತಿಕಾರ್ಯದಲ್ಲಿ ಕೆಲವು ಕಿರಿಕಿರಿ ಅನುಭವಿಸುವಿರಿ.  ಕೆಲವರ ವಿರೋಧ, ಅಸಹಕಾರ ಎದುರಿಸುವಿರಿ. ನಿಮ್ಮ ನಿಲುವಿನಲ್ಲಿ ಸಡಿಲತೆ ತೋರದಿರಿ.

ಸಿಂಹ
ಕೆಲವರ ಜತೆ ಅನವಶ್ಯ ವಿಚಾರದಲ್ಲಿ ಜಗಳ ಕಾಯುವ ಸಂಭವವಿದೆ. ಸಿಡುಕಿನಿಂದ ಕೆಡುಕು. ಸಹನೆಯನ್ನು ಕಾಯ್ದುಕೊಳ್ಳಿ. ಸಾಂಸಾರಿಕ ಒತ್ತಡ.

ಕನ್ಯಾ
ಒಳ್ಳೆಯ ಕೆಲಸ ಎಂದೂ ವ್ಯರ್ಥವಾಗದು. ಅದರ ಫಲ ಸಿಕ್ಕೇ ಸಿಗುವುದು. ಇದರ ಅನುಭವ ನಿಮಗೆ ಆಗಲಿದೆ. ಇತರರಿಗೆ ನೆರವು ನೀಡಲು ಹಿಂಜರಿಯದಿರಿ.

ತುಲಾ
ಹಳೆ ನೆನಪು ಕಾಡುವಂತಹ ವ್ಯಕ್ತಿಗಳ ಭೇಟಿ. ಪ್ರೀತಿಪಾತ್ರರು ನಿಮ್ಮ ದಿನವನ್ನು ಆನಂದಗೊಳಿಸುತ್ತಾರೆ. ವೃತ್ತಿಯಲ್ಲಿ ಹೆಚ್ಚು ಏರುಪೇರಿರದು.

ವೃಶ್ಚಿಕ
ಸಾಂಸಾರಿಕ ವಿರಸ ಸಂಭವ. ಸಣ್ಣ ವಿಷಯ ವಾಗ್ವಾದಕ್ಕೆ ಕಾರಣವಾದೀತು. ಸಹ್ಯವಾಗದ ವಿಚಾರದಲ್ಲಿ ಸಂಘರ್ಷಕ್ಕೆ ಇಳಿಯಬೇಡಿ.

ಧನು
ಕೆಲದಿನಗಳ ಕಠಿಣ ಶ್ರಮದ ಬಳಿಕ ಇಂದು ಅದರ ಫಲ ಉಣ್ಣಲು ತಯಾರಾಗಿರಿ. ನೀವು ಕುಶಿ ಪಡುವ ಬೆಳವಣಿಗೆ ಸಂಭವಿಸುವುದು. ನಿರೀಕ್ಷೆ ಈಡೇರಿಕೆ.

ಮಕರ
ಕಾಲ ಯಾರಿಗೂ ಕಾಯದು. ನೀವೂ ಅಷ್ಟೆ , ಸಮಯ ವ್ಯರ್ಥ ಮಾಡದೆ ಕಾರ್ಯದಲ್ಲಿ ತೊಡಗಬೇಕು. ಕೆಲಸ ಮುಂದೂಡುತ್ತಾ ಬರಬೇಡಿ.

ಕುಂಭ
ಹಣಕಾಸು ವಿಚಾರ ಗಳಲ್ಲಿ ಇಂದು ಎಚ್ಚರ ವಹಿಸಿ. ಆರ್ಥಿಕವಾಗಿ ಹಿನ್ನಡೆ ಉಂಟಾಗುವ ಸಾಧ್ಯತೆಗಳಿವೆ. ಕೌಟುಂಬಿಕ ನೆಮ್ಮದಿ ಕಲಕಬಹುದು.

ಮೀನ
ಇಂದು ಅದೃಷ್ಟ ನಿಮ್ಮ ಜತೆಗಿದೆ. ಕಾರ್ಯ ವಿಫಲಗೊಳ್ಳದು. ನೈತಿಕ ವಿಚಾರಗಳಲ್ಲಿ ನಿಮ್ಮ ನಿಲುವಿನೊಂದಿಗೆ ರಾಜಿ ಮಾಡಬೇಡಿ. ಒತ್ತಡಕ್ಕೆ ಸಿಲುಕದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!