ದಿನಭವಿಷ್ಯ| ಖಾಸಗಿ ಬದುಕಿನ ಒತ್ತಡವು ನಿಮ್ಮ ವೃತ್ತಿಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ವೃತ್ತಿ ಅಥವಾ ಖಾಸಗಿ ವಿಷಯಕ್ಕೆ ಸಂಬಂಧಿಸಿದ ಬಿಕ್ಕಟ್ಟು ಇತ್ಯರ್ಥ ಆಗಲಿದೆ.  ಭಿನ್ನಮತ ನಿವಾರಣೆ ಕಾಣುವುದು. ಆರ್ಥಿಕ ಸುಧಾರಣೆ.

ವೃಷಭ
ಖಾಸಗಿ ಬದುಕಿನ ಒತ್ತಡವು ನಿಮ್ಮ ವೃತ್ತಿಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಆಪ್ತರ ಜತೆಗಿನ ಸಂಬಂಧದಲ್ಲಿ ಏರುಪೇರು.

ಮಿಥುನ
ನೆಗೆಟಿವ್ ಚಿಂತನೆ ಹೆಚ್ಚಬಹುದು. ಮೊದಲು ಅಂತಹ ಚಿಂತನೆ ದೂರಗೊಳಿಸಿ. ಆತ್ಮೀಯರ ಜತೆ ಮಾತಿನ ಚಕಮಕಿ ನಡೆದೀತು. ಸಂಯಮವಿರಲಿ.

ಕಟಕ
ಜೀವನದಲ್ಲಿ ಹೊಸತನ, ಹುರುಪು ತುಂಬಲಿದೆ. ಬಯಸಿದ ಕಾರ್ಯ ಈಡೇರುವುದು. ದೀರ್ಘಕಾಲೀನ ಸಂಬಂಧವು ಗಟ್ಟಿಯಾಗಲಿದೆ.

ಸಿಂಹ
ನಿಮ್ಮ ಕಾರ್ಯದಲ್ಲಿ ಉತ್ತಮ ಸಾಧನೆ ಮಾಡುವಿರಿ. ಎಲ್ಲರ ಗಮನ ಸೆಳೆಯುವಿರಿ. ಆದರೂ ಮನದಲ್ಲಿ ಏನೋ ಕೊರತೆ. ಯಾವುದೋ ಬೇಸರ.

ಕನ್ಯಾ
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಪರಿಸ್ಥಿತಿ. ಎಲ್ಲವೂ ಸುಗಮವಾಗಿ ಸಾಗುವುದು. ಕೌಟುಂಬಿಕ ವ್ಯವಹಾರಗಳು ಸುಲಲಿತ. ಬಂಧುಗಳಿಂದ ಸೂಕ್ತ ನೆರವು, ಸಹಕಾರ.

ತುಲಾ
ಇತರರ ಮನಸ್ಥಿತಿ ಅರ್ಥ ಮಾಡಿಕೊಳ್ಳುವಲ್ಲಿ ನೀವು ಸಫಲರಾಗುವಿರಿ. ಇದರಿಂದ ಎಲ್ಲರ ಜತೆ ಸೌಹಾರ್ದ ಸಂಬಂಧ. ಇತರರ ಸಮಸ್ಯೆ ಪರಿಹರಿಸುವಿರಿ.

ವೃಶ್ಚಿಕ
ನಿಮ್ಮ ಕೆಲಸ ಸುಗಮ ವಾಗಿ ಸಾಗಬೇಕಾದರೆ ಇತರರ ಜತೆ ನಿಮ್ಮ ಸ್ಪಂದನೆಯೂ ಸೂಕ್ತವಾಗಿರಲಿ. ನಯವಿನಯದಿಂದ ಕಾರ್ಯ ಸಾಧನೆ.

ಧನು
ವೃತ್ತಿಯಲ್ಲಿ ಇಂದು ಹಲವು ಅಡ್ಡಿ ಎದುರಿಸುವಿರಿ. ದುಡುಕಿನ ವರ್ತನೆ ಬೇಡ. ಆಪ್ತರ ಸಂಗದಲ್ಲಿ ನೋವು ಮರೆಯುವಿರಿ. ಕೌಟುಂಬಿಕ ಸಹಕಾರ.

ಮಕರ
ಕೌಟುಂಬಿಕ ಸಮಸ್ಯೆಯು ನಿಮ್ಮ ಮನಸ್ಸಿನ ಮೇಲೆ ಒತ್ತಡ ಹೇರಬಹುದು. ಇದರಿಂದ ನೀವು ಮಾಡುವ ಕೆಲಸವು ಹಾಳಾದೀತು. ಎಚ್ಚರ ವಹಿಸಿರಿ.

ಕುಂಭ
ಸಂಗಾತಿ ಜತೆಗೆ ಭಾವನಾತ್ಮಕ ಸಂಘರ್ಷ. ಅತಿರೇಕದ ಪ್ರತಿಕ್ರಿಯೆ ತೋರಬೇಡಿ. ಹಣದ ವಿಚಾರದಲ್ಲಿ ವಿವೇಚನೆಯಿಂದ ವರ್ತಿಸಿರಿ.

ಮೀನ
ಇತರರ ಜತೆಗಿನ ಪೈಪೋಟಿಯಲ್ಲಿ ನೀವೇ ಮೇಲುಗೈ ಸಾಧಿಸುವಿರಿ. ನಿಮ್ಮ ಸಾಧನೆ ಎಲ್ಲರ ಗಮನ ಸೆಳೆಯುವುದು. ಕೌಟುಂಬಿಕ ಒತ್ತಡಗಳ ನಿವಾರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!