ದಿನಭವಿಷ್ಯ| ಹಣಕಾಸು ವಿಚಾರದಲ್ಲಿ ಇಂದು ತಲೆಕೆಡಿಸಿಕೊಳ್ಳುವ ಪ್ರಸಂಗ ಉಂಟಾದೀತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಕ್ರಿಯಾಶೀಲತೆಗೆ ಫಲ ದೊರಕುವುದು. ಕಾರ್ಯ ಸಂಪೂರ್ಣ. ಸಹೋದ್ಯೋಗಿಗಳ ಜತೆ ಮಾತಿನ ಚಕಮಕಿ ಸಂಭವ. ಸಹನೆ ಕಾಯ್ದುಕೊಳ್ಳಿ.

ವೃಷಭ
ಕುಟುಂಬದ  ವಿಷಯಕ್ಕೆ ಹೆಚ್ಚು ಗಮನ ಕೊಡಬೇಕಾಗಿ ಬರುವುದು. ಮಾನಸಿಕ ಅಶಾಂತಿಗೆ  ಕಾರಣವಾಗುವ ಬೆಳವಣಿಗೆ.

ಮಿಥುನ
ಹೊಣೆಗಾರಿಕೆ ಕಡಿಮೆ. ಒತ್ತಡಗಳ ನಿವಾರಣೆ. ವಿವಾಹಾಕಾಂಕ್ಷಿಗಳಿಗೆ ಪೂರಕ ಬೆಳವಣಿಗೆ. ವ್ಯವಹಾರದಲ್ಲಿ ಮಹತ್ವದ ಸಾಧನೆ ದಾಖಲಿಸುವಿರಿ.

ಕಟಕ
ಕೆಲವರ ಮಾತಿನಿಂದ ಬೇಗ ಘಾಸಿಗೊಳ್ಳುತ್ತೀರಿ.  ದೃಢ ಮನಸ್ಸು ಅವಶ್ಯ.  ಅತಿಯಾದ ಭಾವುಕತೆ ಒಳಿತು ತಾರದು. ಪ್ರತಿಯೊಂದನ್ನು ತಾರ್ಕಿಕವಾಗಿ ಚಿಂತಿಸಿ.

ಸಿಂಹ
ಕೆಲಸದಲ್ಲಿ ಕಠಿಣ ದಿನ. ಯಾವುದೂ ಸುಗಮವಾಗಿ ಸಾಗದು. ಕಾರ್ಯಗಳೆಲ್ಲ ಅಪೂರ್ಣ. ಕುಟುಂಬಸ್ಥರಿಂದ ಕಿರಿಕಿರಿ ಸಂಭವ.

ಕನ್ಯಾ
ಕೆರಿಯರ್‌ನಲ್ಲಿ ಪ್ರಗತಿ ಕಾಣುವಿರಿ. ಆದರೆ ಪ್ರೀತಿಯ ವಿಷಯದಲ್ಲಿ ಹಿನ್ನಡೆ ಕಾಣುವಿರಿ. ಕೌಟುಂಬಿಕ ಅಸಮಾಧಾನ, ಮಾತಿನ ಚಕಮಕಿ ಸಂಭವ.

ತುಲಾ
ಒತ್ತಡದ ದಿನ. ಹಾಗಾಗಿ ಅಸಹನೆ ಹೆಚ್ಚು. ಆಪ್ತರ ಮೇಲೂ ರೇಗುವ ಸಂಭವವಿದೆ. ಸಂಯಮ ಕಾಯ್ದುಕೊಳ್ಳುವುದು ಅವಶ್ಯ. ಖರ್ಚು ಹೆಚ್ಚುವ ಸಾಧ್ಯತೆ.

ವೃಶ್ಚಿಕ
ಹಣಕಾಸು ವಿಚಾರದಲ್ಲಿ ಇಂದು ತಲೆಕೆಡಿಸಿಕೊಳ್ಳುವ ಪ್ರಸಂಗ ಉಂಟಾದೀತು. ಅಗತ್ಯಕ್ಕೆ ಬೇಕಷ್ಟು  ಹಣ ಸಿಗದೆ  ಪರದಾಟ. ಸ್ನೇಹಿತರಿಂದ ನೆರವು ಸಿಗಲಾರದು.

ಧನು
ಕೌಟುಂಬಿಕ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾದೀತು. ಹೊಂದಾಣಿಕೆ ಮಾಡಿ ಮುನ್ನಡೆಯಿರಿ.  ಹಿರಿಯರ ಆರೋಗ್ಯಕ್ಕೆ ಗಮನ ಕೊಡಬೇಕು.

ಮಕರ
ಇತರರ ವಿಷಯದಲ್ಲಿ ಹಸ್ತಕ್ಷೇಪ ಮಾಡದೆ ಕೆಲಸ ಮಾಡುವುದು ಒಳಿತು. ಇಲ್ಲವಾದರೆ ಎಲ್ಲರ ವಿರೋಧ ಕಟ್ಟಿಕೊಳ್ಳುವಿರಿ. ಕೌಟುಂಬಿಕ ಅಸಂತೋಷ.

ಕುಂಭ
ಉದ್ಯಮದಲ್ಲಿ ಯಶಸ್ಸು. ಧನಲಾಭ. ಅಪೂರ್ಣ ಕಾರ್ಯವು ಸಫಲವಾಗಿ ಕೊನೆಗೊಳ್ಳುವುದು. ಸಾಂಸಾರಿಕ ಸಮಸ್ಯೆ ನೀಗಿ,  ಸೌಹಾರ್ದ ನೆಲೆಸುವುದು.

ಮೀನ
ಕಠಿಣ ದಿನ. ಕೆಲಸದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಸಣ್ಣ ವಿಷಯಕ್ಕೂ ರೇಗಲು ಹೋಗದಿರಿ. ಆಪ್ತರ ಸಂಗದಲ್ಲಿ ನಿರಾಳತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!