ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ: ಕೆಲವು ವಿಷಯಗಳಲ್ಲಿ ತುರ್ತಾಗಿ ಮತ್ತು ಕಠಿಣವಾಗಿ ಕ್ರಮ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಹಿಂಜರಿಕೆ ತೋರದಿರಿ. ಹೂಡಿಕೆಯಲ್ಲಿ ಲಾಭ.
ವೃಷಭ: ಹೊಸ ವ್ಯವಹಾರ ಆರಂಭಿಸಿದರೆ ಅದು ನಿಮ್ಮ ಕೈಹಿಡಿಯದು. ಉದ್ಯೋಗ ಬದಲಿಸುವ ಯೋಜನೆ ಫಲಿಸದು. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ.
ಮಿಥುನ: ಕಾರ್ಯದಲ್ಲಿ ವಿಫಲತೆ. ಕೆಲವರಿಂದ ಅಸಹಕಾರ. ದಿಟ್ಟ ನಿರ್ಧಾರ ತಾಳದಂತೆ ಕೌಟುಂಬಿಕ ಕಟ್ಟುಪಾಡು ನಿಮ್ಮನ್ನು ಬಂಧಿಸುವುದು. ಸಂಯಮ ಅವಶ್ಯ.
ಕಟಕ: ಶಾಂತತೆ ಮತ್ತು ಸಮಾಧಾನದಿಂದ ಯೋಚಿಸಬೇಕು. ಆಮೇಲಷ್ಟೆ ಯಾವುದೇ ನಿರ್ಧಾರ ತೆಗೆದುಕೊಳ್ಳಿ. ಅನವಶ್ಯ ವೆಚ್ಚ ಹೆಚ್ಚುವುದು.
ಸಿಂಹ: ಸವಾಲಿನ ದಿನ. ಖಾಸಗಿ ವ್ಯವಹಾರ ಮತ್ತು ವೃತ್ತಿಯ ನಡುವೆ ಸಮನ್ವಯತೆ ಸಾಧಿಸಿರಿ. ಮೆಚ್ಚಿದ ವ್ಯಕ್ತಿಯನ್ನು ಅನಿರೀಕ್ಷಿತವಾಗಿ ಭೇಟಿಯಾಗುವಿರಿ.
ಕನ್ಯಾ: ಎಂದಿನಂತೆ ಮಾಮೂಲಿ ದಿನ. ಯಾವುದೇ ವಿಶೇಷ ಘಟಿಸದು. ಕೌಟುಂಬಿಕ ವಿಷಯದಲ್ಲಿ ಅರಿತು ವ್ಯವಹರಿಸಿ. ಆತುರದ ಕ್ರಮ ಒಳಿತಲ್ಲ.
ತುಲಾ: ಇತರರ ಸಮಸ್ಯೆಯಲ್ಲಿ ನೀವು ಒಳಗೊಳ್ಳದಿರಿ. ಆ ಮೂಲಕ ನೀವಾಗಿ ಒತ್ತಡಕ್ಕೆ ಸಿಲುಕದಿರಿ. ಮನೆಯಲ್ಲಿ ಏಕಾಂಗಿ ಭಾವನೆ ಕಾಡಬಹುದು. ಆರೋಗ್ಯ ಸುಸ್ಥಿರ.
ವೃಶ್ಚಿಕ: ಕಾರ್ಯದಲ್ಲಿ ಆರಂಭಿಕ ತೊಡಕು ಮೂಡಿದರೂ ಅಂತ್ಯದಲ್ಲಿ ಸಫಲತೆ ಸಿಗುವುದು. ಅನಿರೀಕ್ಷಿತ ಧನಲಾಭ. ಬಂಧುಗಳಿಂದ ಉಪಕಾರವಾಗಲಿದೆ.
ಧನು:ನೀವು ಬಯಸಿದ ಕಾರ್ಯ ಈಡೇರಿಕೆ. ಬಂಧುಗಳಿಂದ ಉತ್ತಮ ಸಹಕಾರ. ವಿವಾಹಿತ ದಂಪತಿಗಳಿಗೆ ಶುಭ ಬೆಳವಣಿಗೆ. ಆರ್ಥಿಕ ಪರಿಸ್ಥಿತಿ ಉತ್ತಮ.
ಮಕರ:ಕೆಲಸದ ಮೇಲೆ ಹೆಚ್ಚು ಗಮನ ಕೊಡಿ. ಒತ್ತಡದಿಂದ ತಪ್ಪು ಸಂಭವಿಸಬಹುದು. ನಿಮಗಿಂದು ಅನವಶ್ಯ ಮಾನಸಿಕ ಚಿಂತೆ ಆವರಿಸಬಹುದು.
ಕುಂಭ:ಕೆಲಸದಲ್ಲಿ ತಪ್ಪು ಘಟಿಸಬಹುದು. ಹಾಗಾಗಿ ಶ್ರದ್ಧೆಯಿಂದ ಕಾರ್ಯವೆಸಗಿ. ಆಹಾರ ಸೇವನೆಯಲ್ಲಿ ಹಿತಮಿತ ತಪ್ಪದಿರಲಿ. ಆರೋಗ್ಯಕ್ಕೆ ಅದು ಮುಖ್ಯ.
ಮೀನ:ನಿಮ್ಮ ಕಾರ್ಯದಲ್ಲಿ ಇಂದು ಪದೇಪದೇ ಸಮಸ್ಯೆ ಎದುರಿಸುವಿರಿ. ಕಠಿಣ ಶ್ರಮದ ಬಳಿಕವಷ್ಟೇ ಅದು ಫಲಿಸುವುದು. ಕೌಟುಂಬಿಕ ಒತ್ತಡ.