ದಿನಭವಿಷ್ಯ| ವ್ಯಾಜ್ಯಗಳ ಪರಿಹಾರ, ನಿಮ್ಮ ನಿಲುವಿನಲ್ಲೂ ಹೊಂದಾಣಿಕೆ ಅವಶ್ಯ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಇಂದು ದೊಡ್ಡ ಮಟ್ಟದ ಖರ್ಚುವೆಚ್ಚಗಳು ಉಂಟಾದೀತು. ಅದಕ್ಕೆ ಸಿದ್ಧರಾಗಿ. ಕೌಟುಂಬಿಕ ಸಂಘರ್ಷ, ವಿವಾದ  ತಪ್ಪಿಸಿ. ಅದರಿಂದ  ನೆಮ್ಮದಿ ಹಾಳು.

ವೃಷಭ
ನಿಮ್ಮ ಬದುಕಲ್ಲಿ ಪ್ರಮುಖ ಬೆಳವಣಿಗೆ ಸಂಭವಿಸಬಹುದು. ಎಲ್ಲರೊಡನೆ ಹೊಂದಿಕೊಂಡು ಹೋಗಬೇಕಾದ ಅಗತ್ಯವಿದೆ.

ಮಿಥುನ
ನಿಮ್ಮ ಕುರಿತಂತೆ ಬೇರೆಯವರು ಏನು ಹೇಳುತ್ತಾರೆ, ಏನು ತಿಳ
ಕೊಳ್ಳುತ್ತಾರೆ ಎಂದುಚಿಂತಿಸುತ್ತಾ ಕೂರದಿರಿ. ನಿಮ್ಮ ಕೆಲಸ ನಿಶ್ಚಿಂತೆಯಿಂದ ಮಾಡಿರಿ.

ಕಟಕ
ಮಹತ್ವದ ಕೆಲಸಗಳನ್ನು ಮುಂಜಾನೆಯೆ ಪೂರೈಸಲು ಯತ್ನಿಸಿ. ಕಾಲ ಪೂರಕವಾಗಿದೆ. ಅಪರಾಹ್ನ ಅಡ್ಡಿಗಳು ಬರಬಹುದು. ನೆಮ್ಮದಿ ಹಾಳಾಗಬಹುದು.

ಸಿಂಹ
ನಿಮ್ಮ ಕಷ್ಟಕ್ಕೆ ನೆರ ವಾಗಲು ಸಾಕಷ್ಟು ಮಂದಿ ಮುಂದೆ ಬರುತ್ತಾರೆ. ಈ ವಿಷಯದಲ್ಲಿ ನೀವು ಅದೃಷ್ಟಶಾಲಿಗಳು. ಹಾಗಾಗಿ ಧೃತಿಗೆಡಬೇಡಿ.

ಕನ್ಯಾ
ಸಂಬಂಧಿಗಳೊಂದಿಗೆ ಪ್ರಮುಖ ವಿಚಾರ ವಿನಿಮಯ ನಡೆಯಬಹುದು. ವ್ಯಾಜ್ಯಗಳ ಪರಿಹಾರ. ನಿಮ್ಮ ನಿಲುವಿನಲ್ಲೂ ಹೊಂದಾಣಿಕೆ ಅವಶ್ಯ.

ತುಲಾ
ಹಣಕಾಸು ಸ್ಥಿತಿ ಉತ್ತಮಗೊಳ್ಳುವ ಹಾದಿಯಲ್ಲಿದ್ದೀರಿ. ಎಲ್ಲವನ್ನೂ ಜಾಣತನದಿಂದ ನಿಭಾಯಿಸಿ. ದುಡುಕಿನ ನಿರ್ಧಾರ ಬೇಡ.

ವೃಶ್ಚಿಕ
ಸಂತೋಷದ ಮನಸ್ಥಿತಿ. ಕ್ಷುಲ್ಲಕ ಕಾರಣಕ್ಕೆ ಅದನ್ನು ಕಳಕೊಳ್ಳಬೇಡಿ. ಇತರರ ಕೆಟ್ಟ ವರ್ತನೆಯನ್ನು ಕಡೆಗಣಿಸುವುದು ಉತ್ತಮ. ಪ್ರತ್ಯುತ್ತರ ನೀಡದಿರಿ.

ಧನು
ನಿಮ್ಮ ಖಾಸಗಿ ಬದುಕು ಮತ್ತು ಆರೋಗ್ಯದಲ್ಲಿ  ಸಮತೋಲನ ಕಾಪಾಡಲು ಯತ್ನಿಸಿ. ಮನಸ್ಸು ಕೆಡಿಸುವ ಚಿಂತನೆಗಳನ್ನು ದೂರ ಸರಿಸಿರಿ.

ಮಕರ
ಗೊಂದಲದ ಮನಸ್ಥಿತಿ. ಪ್ರಮುಖ ನಿರ್ಧಾರ ತಾಳದಿರಿ. ಕಾದು ನೋಡುವುದು ಒಳಿತು. ವೃತ್ತಿ ವ್ಯವಹಾರದಲ್ಲಿ ಪೂರಕ ಬೆಳವಣಿಗೆ ಸಂಭವಿಸುವುದು.

ಕುಂಭ
ವೃತ್ತಿ ಅಥವಾ ಮನೆಯಲ್ಲಿ ಎದುರಾಗುವ ಸಮಸ್ಯೆ ಸುಲಭದಲ್ಲಿ ಪರಿಹರಿಸಲು ಸಾಧ್ಯವಾಗದು. ಇತರರ ನೆರವು ನಿಮಗೆ ಅಗತ್ಯ ಬೀಳುವುದು.

ಮೀನ
ತೆಗೆದುಕೊಂಡ  ನಿರ್ಧಾರ  ಕಾರ್ಯಗತ ಗೊಳಿಸಲು ಸಕಾಲ. ಇನ್ನಷ್ಟು ಕಾಲ ಕಾಯುವುದು ಬೇಡ. ಆತ್ಮೀಯರ  ಸಹಕಾರ ಪಡೆಯಿರಿ.  ಧನವ್ಯಯ ಹೆಚ್ಚಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!