ದಿನಭವಿಷ್ಯ| ಉದ್ದೇಶ ಸಾಧನೆಯ ಹಾದಿಯಲ್ಲಿ ಸಹಕಾರ ನೀತಿ ಪಾಲನೆ ಉತ್ತಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಇತರರ ಕುರಿತು ಕಟುವಾಗಿ ವರ್ತಿಸುವುದರಿಂದ ಸಂಬಂಧ ಹಾಳು. ನಿಮ್ಮ ಉದ್ದೇಶ ಸಾಧನೆಯ ಹಾದಿಯಲ್ಲಿ ಸಹಕಾರ ನೀತಿ ಪಾಲಿಸಿ.

ವೃಷಭ
ನಿಮ್ಮ ಬಹುಕಾಲದ ಅಭೀಷ್ಟವೊಂದು ನೆರವೇರಲಿದೆ. ನಿಮ್ಮ ಜನಪ್ರಿಯತೆ ಹೆಚ್ಚಿಸುವ ಬೆಳವಣಿಗೆ. ಸಾಮಾಜಿಕ ಕಾರ್ಯದಲ್ಲಿ ಯಶಸ್ಸು ಸಿಗಲಿದೆ.

ಮಿಥುನ
ನಿಮ್ಮ ಕೆಲವು ನಿಲುವು ಬದಲಿಸುವ ಪ್ರಸಂಗ ಸಂಭವಿಸೀತು. ಅದನ್ನು ಸ್ಫೂರ್ತಿಯಿಂದ ಸ್ವೀಕರಿಸಿರಿ. ಇತರರ ಜತೆ ಸಂಘರ್ಷದ ಹಾದಿ ತುಳಿಯದಿರಿ.

ಕಟಕ
ವೃತ್ತಿಯಲ್ಲಿ ನೀವು ಬಯಸಿದ ಪುರಸ್ಕಾರ ಇಂದು ದೊರಕುವುದು.  ಆದರೆ ಯಶಸ್ಸಿನಿಂದ ಮೈಮರೆಯದಿರಿ. ಕೌಟುಂಬಿಕ ಸಹಕಾರ, ಸಾಮರಸ್ಯ.

ಸಿಂಹ
ವ್ಯವಹಾರದಲ್ಲಿ ನಿಮಗೆ ಪೂರಕ ಬೆಳವಣಿಗೆ. ನೀವು ನಿರೀಕ್ಷಿಸಿದಂತೆ ಕೆಲಸ ಸಾಗುವುದು. ಆದರೆ ಕೌಟುಂಬಿಕವಾಗಿ ಒತ್ತಡ ಹೆಚ್ಚಳ. ಮಾತಿನ ಚಕಮಕಿ ನಡೆದೀತು.

ಕನ್ಯಾ
ಹಣಕಾಸು ಪರಿಸ್ಥಿತಿಯ  ಕುರಿತಂತೆ ಇಂದು ಹೆಚ್ಚು ಚಿಂತಿಸುವಿರಿ. ಏಕೆಂದರೆ ಆರ್ಥಿಕ ಬಿಕ್ಕಟ್ಟು ಬಾಧಿಸುವುದು.  ಕೌಟುಂಬಿಕ ವೆಚ್ಚ ಕಡಿಮೆ ಮಾಡಬೇಕಾದೀತು.

ತುಲಾ
ಸರಿಯಾದ ಯೋಜನೆಯಿಲ್ಲದೆ ನಿಮ್ಮ ಕೆಲಸಗಳು ಕೆಡಬಹುದು. ತಪ್ಪು ಮುಚ್ಚುವ ಬದಲು ಅದನ್ನು ಸರಿಪಡಿಸುವುದರಲ್ಲೇ ನಿಮ್ಮ ಹಿತವಿದೆ.

ವೃಶ್ಚಿಕ
ಅಧಿಕ ಕೆಲಸ, ಅಧಿಕ ಒತ್ತಡ. ಇದರಿಂದ ಗೊಂದಲದ ಸ್ಥಿತಿಯೂ ನಿರ್ಮಾಣವಾದಿತು.  ಅಂತಿಮವಾಗಿ ಯಾವುದೇ ಕೆಲಸ ಸರಿಯಾಗಿ ನಡೆಯದು.

ಧನು
ಯಾವುದೇ ಹಿನ್ನಡೆ  ನಿಮ್ಮನ್ನಿಂದು ಬಾಧಿಸದು. ಪ್ರಮುಖ ಕಾರ್ಯಗಳಲ್ಲಿ ಯಶ ಸಾಧಿಸುವಿರಿ. ಆದರೆ ದಿನವಿಡಿ ನಿಮ್ಮ ಪಾಲಿಗೆ ನೀರಸವೆನಿಸುತ್ತದೆ.

ಮಕರ
ಮಾನಸಿಕ ಒತ್ತಡ ಕಳೆಯಲು ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಕಾಲ ಕಳೆಯುವ ಮನಸ್ಸು. ಆದರೂ ಮನಶ್ಯಾಂತಿ ದೂರವೇ ಉಳಿದೀತು.

ಕುಂಭ
ಕೆಲವರ ಕಾರ್ಯದ ಕುರಿತು ಶಂಕೆಗೊಳ್ಳುವ ಪ್ರಸಂಗ ಉದ್ಭವಿಸ ಬಹುದು. ವಿರೋಧಿಗಳನ್ನು ಸಂಧಾನದಿಂದ ಗೆಲ್ಲುವುದು ಒಳಿತು. ಸಂಘರ್ಷ ಬೇಡ.

ಮೀನ
ವೃತ್ತಿಯಲ್ಲಿ ಬಿಕ್ಕಟ್ಟು ಎದುರಿಸುವಿರಿ. ಆದರೆ ಇತರರ ಸಹಕಾರದಿಂದ ಅದನ್ನು ನಿಭಾಯಿಸುವಿರಿ. ಖಾಸಗಿ ಬದುಕಿನಲ್ಲಿ ಏರುಪೇರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!