Friday, September 29, 2023

Latest Posts

ದಿನಭವಿಷ್ಯ| ಸಾಮಾಜಿಕ, ಆರ್ಥಿಕ ಮತ್ತು ಖಾಸಗಿ ಬಾಧ್ಯತೆಗಳನ್ನು ಇಂದು ನೆರವೇರಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಮನೆ, ಕಚೇರಿ ಎಲ್ಲ ಕಡೆ ನಿಮ್ಮನ್ನಿಂದು ಅದುಮುವ ಪ್ರಯತ್ನ ನಡೆಯುತ್ತದೆ. ನಿಮ್ಮ ಭಾವನೆಗೆ ಪ್ರಹಾರ ಬೀಳಬಹುದು. ಆದಾಯ ಹೆಚ್ಚಿಸುವ ದಾರಿ ತೋಚುವುದು.

ವೃಷಭ
ನಿಮ್ಮ ಕಾರ್ಯ ಟೀಕಿಸಿದರೆ ಬೇಸರ ಪಡಬೇಡಿ. ಅದನ್ನು ಸ್ಫೂರ್ತಿಯಿಂದ ಸ್ವೀಕರಿಸಿ. ವ್ಯಕ್ತಿಯೊಬ್ಬರ ಆಕರ್ಷಣೆಗೆ ಒಳಗಾಗುವ ಸಂಭವ.

ಮಿಥುನ
ಇತರರು ನಿಮ್ಮ ಮೇಲೆ ದಬ್ಬಾಳಿಕೆ ನಡೆಸಲು ಅವಕಾಶ ಕೊಡಬೇಡಿ. ಪ್ರತಿಭಟಿಸದೆ ತುಂಬಾ ಮೃದುವಾಗುವುದು ನಿಮಗೇ ಪ್ರತಿಕೂಲ. ಎದುರಿಸಿ ನಿಲ್ಲಿ.

ಕಟಕ
ಕೆಲವಾರು ಬಿಕ್ಕಟ್ಟಿನ ವಿಷಯ ನೀವು ಶಾಂತಿಯಿಂದ ಪರಿಹರಿಸಬೇಕು. ಇಲ್ಲವಾದರೆ ಸಂಘರ್ಷ. ಅಜೀರ್ಣದಂತಹ ಸಮಸ್ಯೆ ಸಂಭವ.

ಸಿಂಹ
ಬದಲಾವಣೆಯನ್ನು ಸ್ವಾಗತಿಸಬೇಕು. ಅದನ್ನು ನಿರಾಕರಿಸುವುದು ಸಲ್ಲದು. ಇದನ್ನು ನೀವಿಂದು ಅರಿಯುವಿರಿ. ಬಂಧುಗಳ ಸಹಕಾರ.

ಕನ್ಯಾ
ತಾರ್ಕಿಕವಾಗಿ ಯೋಚಿಸುವ  ಶಕ್ತಿ ಕುಂಠಿತವಾಗಲಿದೆ. ಅದಕ್ಕೆ ಕಾರಣ ನಿಮ್ಮದೇ ಆದ ಖಾಸಗಿ ಸಮಸ್ಯೆಗಳು. ಸಹನೆಯಿರಲಿ.

ತುಲಾ
ಸಾಮಾಜಿಕ, ಆರ್ಥಿಕ ಮತ್ತು ಖಾಸಗಿ ಬಾಧ್ಯತೆಗಳನ್ನು ಇಂದು ನೆರವೇರಿಸಿ. ಅತಿಯಾದ ಒತ್ತಡದಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು.

ವೃಶ್ಚಿಕ
ವೃತ್ತಿ ಕಾರ್ಯದಲ್ಲಿಯೆ ಕಳೆದುಹೋಗಬೇಡಿ. ಖಾಸಗಿ ಬದುಕಿಗೆ, ಕುಟುಂಬದ ಕಡೆಗೂ ಗಮನ ಕೊಡಿ. ಹಣಕಾಸು ಸ್ಥಿತಿ ತುಸು ಚಿಂತೆಗೆ ಕಾರಣವಾದೀತು.

ಧನು
ಕೌಟುಂಬಿಕವಾಗಿ ಸಂತೋಷದ ದಿನ. ಎಲ್ಲರ ಸಹಕಾರ. ಆರ್ಥಿಕವಾಗಿಯೂ ನಿಮಗೆ ಪೂರಕ ಬೆಳವಣಿಗೆ. ಕಾರ್ಯಸಾಧನೆ.

ಮಕರ
ಹೃದಯದ ಮಾತು ಕೇಳಿರಿ. ಭಾವನೆಗಳನ್ನು ಅದುಮಿಡಬೇಡಿ. ಎಲ್ಲವೂ ನಿಮಗೆ ಪೂರಕವಾಗಿ ಸಾಗುವುದು. ಆರೋಗ್ಯ ಕ್ಕೆ ಗಮನ ಕೊಡಿ.

ಕುಂಭ
ಆರೋಗ್ಯಸಮಸ್ಯೆ ಇದ್ದರೆ ಅದನ್ನು ಕಡೆಗಣಿಸದಿರಿ. ನಿಮ್ಮದೇ ಮದ್ದು ಮಾಡಲು ಹೋಗಬೇಡಿ. ವ್ಯವಹಾರದಲ್ಲಿ ಹಣದ ಅಡಚಣೆ ಎದುರಿಸುವಿರಿ.

ಮೀನ
ಉದ್ದೇಶಿಸಿದ ಕಾರ್ಯವು ಸುಲಭದಲ್ಲಿ ಈಡೇರದೆ ಸಂಕಷ್ಟ ನೀಡುವುದು. ಯೋಜನೆಯಲ್ಲಿ ಬದಲಾವಣೆ ಮಾಡಬೇಕಾದೀತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!