ದಿನಭವಿಷ್ಯ| ಮನಸ್ಸನ್ನು ಮುಕ್ತವಾಗಿ ತೆರೆದಿಡಿ, ಇತರರ ಸಲಹೆ ಒಳ್ಳೆಯದನ್ನೇ ತರಬಹುದು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಬಹುಕಾಲದ ಆಕಾಂಕ್ಷೆ ಇಂದು ಈಡೇರುವುದು. ಎಲ್ಲರೊಂದಿಗೆ ಬೆರೆತು ಬಾಳುವುದು ಕಲಿಯಿರಿ. ಸಣ್ಣ ವಿಷಯಕ್ಕೂ ಜಗಳಕ್ಕೆ ಹೋಗುವುದು ಬೇಡ.

ವೃಷಭ
ನಿಮ್ಮ ಕೆಲಸ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಈ ಕುರಿತು ಯಾವುದೇ ಅನುಮಾನವಿದ್ದರೆ ಬಿಟ್ಟುಬಿಡಿ. ಅದರ ಫಲ ಸಿಗಲು ತುಸು ವಿಳಂವಾದೀತು ಅಷ್ಟೆ.

ಮಿಥುನ
ಬಿಡುವಿಲ್ಲದ ದಿನ. ನಿಮ್ಮ ಕಾರ್ಯ ಪೂರೈಸಲು ತುಸು ಶ್ರಮ ಪಡಬೇಕಾಗುವುದು. ಕೌಟುಂಬಿಕ ಸಹಕಾರ ನಿಮಗಿದೆ. ಹಿತಮಿತ ಆಹಾರ ಸೇವನೆಯಿರಲಿ.

ಕಟಕ
ನಿಮ್ಮ ನಿರೀಕ್ಷೆಯೊಂದು ಇಂದು ಈಡೇರದು. ನಿರಾಶೆ ಕಡಲಿದೆ. ನಿಮ್ಮ ಖಾಸಗಿ ವಿಷಯ ಇತರರಲ್ಲಿ ಹೇಳಿಕೊಳ್ಳಬೇಡಿ. ಖಾಸಗಿತನ ಕಾಪಾಡಿ.

ಸಿಂಹ
ನಿಮ್ಮ ಕಾರ್ಯಕ್ಕೆ ಶ್ಲಾಘನೆ ದೊರಕುವುದು. ಕುಟುಂಬಸ್ಥರ ಜತೆ ಹೆಚ್ಚು ಸಮಯ ಕಳೆಯುವ ಅವಕಾಶ. ಇಂದಿನ ಮಟ್ಟಿಗೆ ವೃತ್ತಿ ಒತ್ತಡ ಮರೆತು ವ್ಯವಹರಿಸಿ.

ಕನ್ಯಾ
ನಿಮಗೆ ಎದುರಾಗಿದ್ದ ಅಡ್ಡಿ ಒಂದೊಂದಾಗಿ ನಿವಾರಣೆ. ಅದರಿಂದ ನಿರಾಳತೆ.  ಕುಟುಂಬದಲ್ಲೂ ಸಾಮರಸ್ಯದ ವಾತಾವರಣ.

ತುಲಾ
ಸಂಘಟಿತ ಕಾರ್ಯದಿಂದ ಯಶಸ್ಸು. ಏಕಾಂಗಿಯಾಗಿ ಸಾಧಿಸಬಲ್ಲೆ ಎಂದು ಹೊರಟರೆ ಕಷ್ಟ ಪಡುವಿರಿ. ಅಹಂ ತೊರೆಯಿರಿ.

ವೃಶ್ಚಿಕ
ನೀವಿಂದು ಪ್ರಮುಖ ನಿರ್ಧಾರ ತಾಳಬೇಕಾದ ಅನಿವಾರ್ಯತೆ. ನಿಮ್ಮ ಮನಸ್ಸನ್ನು ಮುಕ್ತವಾಗಿ ತೆರೆದಿಡಿ. ಇತರರ ಸಲಹೆ ಒಳ್ಳೆಯದನ್ನೇ ತರಬಹುದು.

ಧನು
ಹಣಕಾಸು ಸಮಸ್ಯೆ ಬಾಧಿಸದು. ಆದರೂ ನಿಮ್ಮ ಖರ್ಚಿನ ಮೇಲೆ ನಿಗಾ ಇಡಬೇಕು. ಭಿನ್ನಾಭಿಪ್ರಾಯ ಉಂಟಾದಾಗ ವಾದ ಮಾಡಲು ಹೋಗಬೇಡಿ.

ಮಕರ
ಹೊಸ ಉದ್ಯೋಗದ ಆಕರ್ಷಣೆ ನಿಮಗೆ ಉಂಟಾದೀತು. ಆದರೆ ಎಲ್ಲವನ್ನು ಪರಾಮರ್ಶಿಸಿ ಮುಂದುವರಿಯಿರಿ. ದುಡುಕಿನ ನಿರ್ಧಾರ ಒಳ್ಳೆಯದಲ್ಲ.

ಕುಂಭ
ಸಂಬಂಧವು ಸುಲಲಿತವಾಗಿ ಮುಂದುವರಿಯಲು ನೀವು ತಾಳ್ಮೆ ಮತ್ತು ಅನುಕಂಪದಿಂದ ವ್ಯವಹರಿಸುವುದು ಅಗತ್ಯವಾಗಿದೆ.

ಮೀನ
ಕೈಹಿಡಿದ ಕಾರ್ಯ ಮೊದಲು ಪೂರೈಸಿ. ಆಮೇಲೆ ಹೊಸತಕ್ಕೆ ಹೊರಡಿ. ನಿಮ್ಮದಲ್ಲದ ವಿಷಯದಲ್ಲಿ  ಮೂಗು ತೂರಿಸಲು ಹೋಗಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!