Wednesday, September 27, 2023

Latest Posts

ದಿನಭವಿಷ್ಯ| ಹೆತ್ತವರ ಜತೆ ವಾಗ್ವಾದಕ್ಕೆ ಇಳಿಯದೆ ಕೌಟುಂಬಿಕ ಶಾಂತಿಗೆ ಗಮನ ಕೊಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಕಾರ್ಯವೆಸಗುವ ಮುನ್ನ ಸಾಧಕ ಬಾಧಕ ಯೋಚಿಸಿರಿ. ಕಾರ್ಯ ಎಸಗಿದ ಬಳಿಕ ಪಶ್ಚಾತ್ತಾಪ ಪಡದಿರಿ.ಆಪ್ತರಿಂದ ಟೀಕೆ ಕೇಳಬಹುದು.

ವೃಷಭ
ಯಶಸ್ವೀ ದಿನ. ವೃತ್ತಿ ಬದುಕಿನಲ್ಲಿ ಮಹತ್ತರ ಸಾಧನೆ ಮಾಡುವಿರಿ.ನಿಮ್ಮ ಇಷ್ಟದ ವ್ಯಕ್ತಿಯಿಂದ ಹೊಗಳಿಕೆ ಕೇಳುವಿರಿ. ಆರ್ಥಿಕ ಉನ್ನತಿ.

ಮಿಥುನ
ಕಾರ್ಯದ ಒತ್ತಡ ಹೆಚ್ಚು.ವಿವಾಹಿತರ ಮಧ್ಯೆ ಮಾತಿನ ಚಕಮಕಿ ಸಂಭವ.ಅನವಶ್ಯಸಂಘರ್ಷ ತಪ್ಪಿಸಿರಿ. ಸಹನೆ ಕಾಯ್ದುಕೊಳ್ಳಿ.

ಕಟಕ
ಹೆತ್ತವರ ಜತೆ ವಾಗ್ವಾದಕ್ಕೆ ಇಳಿಯದಿರಿ. ಕೌಟುಂಬಿಕ ಶಾಂತಿಗೆ ಗಮನ ಕೊಡಿ. ಸಂಯಮವಿರಲಿ. ಆರ್ಥಿಕವಾಗಿ ಫಲಪ್ರದ ದಿನ. ಕಾರ್ಯ ಸಾಧನೆ.

ಸಿಂಹ
ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವ ಬೆಳವಣಿಗೆ. ಪಾಲುದಾರಿಕೆಯಲ್ಲಿ ಯಶಸ್ಸು. ಧನಲಾಭ. ಕೌಟುಂಬಿಕ ಬಿಕ್ಕಟ್ಟು ಪರಿಹಾರದ ಸಂಕೇತ ತೋರುವುದು.

ಕನ್ಯಾ
ನಿಮ್ಮ ಪ್ರಗತಿಗೆ ಅಡ್ಡಿಗಳು ಒದಗುವವು. ಅದನ್ನು ನಿವಾರಿಸಲು ಪ್ರಯತ್ನಿಸಿ.  ಬೆನ್ನು ನೋವಿನಂತಹ ದೈಹಿಕ ಸಮಸ್ಯೆ ಕಾಣಿಸಿಕೊಂಡೀತು.ಕೌಟುಂಬಿಕ ಸಹಕಾರ.

ತುಲಾ
ಆಪ್ತೇಷ್ಟರ ಜತೆ ಅಥವಾ ಸಹೋದ್ಯೋಗಿಗಳ ಜತೆ ತಪ್ಪಭಿಪ್ರಾಯ ಉಂಟಾದೀತು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಆರ್ಥಿಕ ಬಿಕ್ಕಟ್ಟು ನಿವಾರಣೆ.

ವೃಶ್ಚಿಕ
ಸಹನೆಯಿಂದ ವರ್ತಿಸಿ. ನಿಮ್ಮ ನಡೆನುಡಿ ಆತ್ಮೀಯರ ಮನಸ್ಸು ನೋಯಿಸಬಹುದು. ಆರೋಗ್ಯ ಸಮಸ್ಯೆಯಿಂದಾಗಿ ಚಿಂತಿತರಾಗುವಿರಿ.

ಧನು
ಸಾಮಾಜಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವಿರಿ. ದೈಹಿಕ ನೋವು ನಿವಾರಣೆ.

ಮಕರ
ವೃತ್ತಿಯಲ್ಲಿ  ಒತ್ತಡ ಹೆಚ್ಚು. ಸಹೋದ್ಯೋಗಿಗಳ ಅಸಹಕಾರ. ನಿರ್ಲಕ್ಷ್ಯದಿಂದ ಧನನಷ್ಟ ಸಂಭವಿಸಬಹುದು. ಕೌಟುಂಬಿಕ ಸಾಂತ್ವನ.

ಕುಂಭ
ಎಷ್ಟೇ ಹೊಂದಾಣಿಕೆ ಮಾಡಿಕೊಂಡರೂ ಕೆಲವರು ನಿಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇದರಿಂದ ಬೇಸರ. ಆಪ್ತರ ಬೆಂಬಲ.

ಮೀನ
ಇತರರ ಜತೆ ಹೊಂದಾಣಿಕೆಯಿಂದ ವ್ಯವಹರಿಸಿ. ಇಲ್ಲವಾದರೆ ಅಸಹನೀಯ ಪರಿಸ್ಥಿತಿ ಎದುರಿಸುವಿರಿ. ಇತರರ ಸಣ್ಣ ಮಾತಿಗೂ ಕೋಪ ಮಾಡದಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!