Wednesday, September 27, 2023

Latest Posts

ದಿನಭವಿಷ್ಯ| ವೃತ್ತಿ ಮತ್ತು ಖಾಸಗಿ ಬದುಕು ಎರಡರಲ್ಲೂ ನಿಮಗೆ ಪೂರಕ ಬೆಳವಣಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಇತರರ ಜತೆಗಿನ ನಿಮ್ಮ ಭಾವನೆ ವ್ಯಕ್ತಪಡಿಸಲು ಮುಜುಗರ ಬೇಡ. ಸೂಕ್ತ ಸ್ಪಂದನೆ ದೊರಕಲಿದೆ. ಖಾಸಗಿ ಬದುಕಿನ ಸಮಸ್ಯೆ ಪರಿಹಾರ ಕಾಣುವುದು.

ವೃಷಭ
ವೃತ್ತಿಯಲ್ಲಿ ಸಮಸ್ಯೆ ಉಂಟಾದೀತು.ಅದನ್ನು ಪರಿಹರಿಸಲು ವಿವೇಕ ಬೇಕು. ದುಡುಕಿನ ಪ್ರತಿಕ್ರಿಯೆ ತೋರಬೇಡಿ. ಎಲ್ಲರ ಜತೆ ಹೊಂದಾಣಿಕೆಯಿರಲಿ.

ಮಿಥುನ
ವೃತ್ತಿ ಮತ್ತು ಖಾಸಗಿ ಬದುಕು ಎರಡರಲ್ಲೂ ನಿಮಗೆ ಪೂರಕ ಬೆಳವಣಿಗೆ. ಇತರರು ನಿಮ್ಮನ್ನು ಸರಿಯಾಗಿ ಅರಿತುಕೊಳ್ಳುವರು. ಗೊಂದಲ ನಿವಾರಣೆ.

ಕಟಕ
ಇಂದು ಯಶಸ್ಸು ನಿಮಗೆ ಸುಲಭವಾಗಿ ದೊರಕಲಿದೆ. ಹೆಚ್ಚು ಕಷ್ಟ ಪಡುವ ಅಗತ್ಯವಿಲ್ಲ. ಇತರರು ನಿಮ್ಮ ಮಾತು ಪಾಲಿಸುವರು. ಕೌಟುಂಬಿಕ ಸೌಹಾರ್ದ.

ಸಿಂಹ
ಕೆಲಸದ ಒತ್ತಡ ಅಧಿಕ. ನೀವು ಶಾಂತವಾಗಿ, ತಾಳ್ಮೆಯಿಂದ ವರ್ತಿಸಬೇಕು. ಇಲ್ಲವಾದರೆ ಸಂಘರ್ಷದ ಸ್ಥಿತಿ ನಿರ್ಮಾಣವಾದೀತು.

ಕನ್ಯಾ
ಬಾಕಿಯಿದ್ದ ಕೆಲವು ಕಾರ್ಯ ಇಂದು ಪೂರೈಸುವ ಅವಕಾಶ.  ಮೊದಲಾಗಿ ನಿಮ್ಮ ಉದಾಸೀನತೆ ತೊಡೆಯಬೇಕು. ಕಾರ್ಯಶೀಲರಾಗಿ.

ತುಲಾ
ಸಮಸ್ಯೆ ಪರಿಹರಿಸುವ ಮನೋಭಾವ ಇಂದು ನಿಮ್ಮದು. ಅಂತಹ ಪ್ರಯತ್ನ ಸಫಲ. ಸಂಬಂಧದಲ್ಲಿ ಪ್ರಾಮಾಣಿಕತೆ ಇರಲಿ. ವಂಚನೆ ಬೇಡ.

ವೃಶ್ಚಿಕ
ವೃತ್ತಿ ಬದುಕಿನಲ್ಲಿ ಉನ್ನತಿ ಕಾಣುವಿರಿ. ಆರ್ಥಿಕ ಅಭಿವೃದ್ಧಿ. ಹೊಸ ವಿಷಯಗಳನ್ನು ಕಲಿಯುವ ಉತ್ಸಾಹ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ಧನು
ಕಾರ್ಯದಲ್ಲಿ ಹೆಚ್ಚು ಆಸ್ಥೆ ವಹಿಸಿ. ತಪ್ಪುಗಳಾಗುವ ಸಾಧ್ಯತೆಯಿದೆ. ಅದನ್ನು ನಿವಾರಿಸಿ. ಅವಶ್ಯ ವಿಷಯದಲ್ಲಿ ಇತರರ ಸಲಹೆ ಪಡೆಯಲು ಹಿಂಜರಿಯದಿರಿ.

ಮಕರ
ಇಂದು ನಾಯಕರಂತೆ ವರ್ತಿಸಿ, ನಿರ್ಧಾರ ತಳೆಯುವಲ್ಲಿ ಮುಂಚೂಣಿ ವಹಿಸಿ. ನಿಮ್ಮ ಮಾತನ್ನು ಇತರರು ವಿಧೇಯರಾಗಿ ಕೇಳುವ ದಿನವಿದು.

ಕುಂಭ
ನಿಮಗೆ ಪೂರಕ ದಿನ. ಆದರೆ ನಿಮ್ಮ ನಿರ್ಧಾರ ಅಹಿತಕರ ಫಲಿತಾಂಶ ನೀಡದಂತೆ ಎಚ್ಚರ ವಹಿಸಿ.ಇತರರ ಜತೆ ಸಂವೇದನಾಶೀಲರಾಗಿ ವರ್ತಿಸಿರಿ.

ಮೀನ
ನಿಮ್ಮ ಪ್ರೀತಿಗೆ ಪುನರುಜ್ಜೀವ ನೀಡಲು ಸಕಾಲ. ಕೆಟ್ಟಿರುವ ಸಂಬಂಧ ಮತ್ತೆ ಸರಿಪಡಿಸಿ. ಇತರರ ಒತ್ತಡಕ್ಕೆ ಮಣಿಯದಿರಿ. ಎಲ್ಲ ಸರಿಯಾಗುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!