ದಿನಭವಿಷ್ಯ| ಆಪ್ತ ಸಂಬಂಧ ಕಾಯುವಲ್ಲಿ ನಿಮ್ಮ ಅಹಂ ಅಡ್ಡಿ ಬರದಂತೆ ನೋಡಿಕೊಳ್ಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಖಾಸಗಿ ವಿಷಯದಲ್ಲಿ ಪೂರಕ ಬೆಳವಣಿಗೆ. ಪ್ರೀತಿಯಲ್ಲಿ ಯಶಸ್ಸು. ನಿಮ್ಮ ಭಾವನೆಗೆ ಸೂಕ್ತ ಸ್ಪಂದನೆ ಪಡೆಯುವಿರಿ. ವಾದವಿವಾದಕ್ಕೆ ಆಸ್ಪದ ನೀಡದಿರಿ.

ವೃಷಭ
ನಿಮಗಿಂದು ಪೂರಕ ದಿನ. ನಿಮ್ಮ ಕಾರ್ಯ ಸಫಲ. ಆತ್ಮೀಯರಿಂದ ಭಾವನಾತ್ಮಕ ಬೆಂಬಲ ಪಡೆಯುವಿರಿ. ಕೌಟುಂಬಿಕ ಉದ್ವಿಗ್ನತೆ ಶಮನಗೊಳ್ಳುವುದು.

ಮಿಥುನ
ಮನೆಯ ಕಾರ್ಯ ಮತ್ತು ವೃತ್ತಿ ಕಾರ್ಯದ ಮಧ್ಯೆ ಅಸಮತೋಲನ ಕಂಡುಬಂದೀತು. ಇದರಿಂದ ಎಲ್ಲವೂ ಅಸ್ತವ್ಯಸ್ತವಾದೀತು. ಸಹನೆಯಿರಲಿ.

ಕಟಕ
ನಿಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಎಚ್ಚರಿಕೆ ವಹಿಸಿ. ನಿರ್ಲಕ್ಷ್ಯವು ಹಾನಿ ತರಬಹುದು. ಇತರರ ಮೇಲೆ ಜವಾಬ್ದಾರಿ ದಾಟಿಸಬೇಡಿ.

ಸಿಂಹ
ವೃತ್ತಿಯಲ್ಲಿ ಯಶಸ್ಸು. ಆದಾಯದಲ್ಲಿ ಹೆಚ್ಚಳ. ಸಮಸ್ಯೆಯೊಂದು ಪರಿಹಾರ ಕಂಡು ಮನಸ್ಸಿಗೆ ನಿರಾಳತೆ. ಕುಟುಂಬ ಸದಸ್ಯರ ಸಹಕಾರ, ಬೆಂಬಲ.

ಕನ್ಯಾ
ಚಿಂತೆಗೆ ಕಾರಣವಾದ ವಿಷಯಗಳೆಲ್ಲ ಇತ್ಯರ್ಥ ಕಂಡು ನಿರಾಳತೆ. ಮುನಿಸಿಕೊಂಡವರು ಸಮೀಪವಾಗುತ್ತಾರೆ. ಕೌಟುಂಬಿಕ ಜಗಳ ಪರಿಹಾರ.

ತುಲಾ
ವೃತ್ತಿಯಲ್ಲಿ ಕೆಲವು ಮಹತ್ವದ ಬೆಳವಣಿಗೆ ಉಂಟಾದೀತು. ಅದೃಷ್ಟವನ್ನೆ ನಂಬಿ ಕೂರಬೇಡಿ. ನಿಮ್ಮ ಪ್ರಯತ್ನವೂ ಅಗತ್ಯವಾಗಿದೆ.

ವೃಶ್ಚಿಕ
ನಿಮ್ಮ ಕರ್ತವ್ಯ ಕ್ಷಿಪ್ರವಾಗಿ ನಿಭಾಯಿಸುವಿರಿ. ಮೆಚ್ಚುಗೆ ಪಡೆಯುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಬಂಧುಗಳಿಂದ ಪ್ರೀತಿ, ಆದರ ಪಡೆಯುವಿರಿ.

ಧನು
ಪ್ರೀತಿಪಾತ್ರರ ಜತೆ ಸಂಬಂಧ ಕೆಡಬಹುದು. ನಿಮ್ಮ ಕೋಪತಾಪ ಬಿಟ್ಟು ವ್ಯವಹರಿಸಬೇಕು. ಇತರರ ಭಾವನೆಗೆ ಸ್ಪಂದಿಸಿರಿ. ವೃತ್ತಿಯಲ್ಲಿ ಒತ್ತಡ ಹೆಚ್ಚಳ.

ಮಕರ
ಸಹೋದ್ಯೋಗಿಗಳು ಸಮಸ್ಯೆ ಸೃಷ್ಟಿಸುವರು. ಮನಶ್ಯಾಂತಿ ಕಾಪಾಡಲು ನೀವೇ ಹೊಂದಾಣಿಕೆ ಮಾಡಿಕೊಳ್ಳಬೇಕು. ಸಂಬಂಧದಲ್ಲಿ ಮುಕ್ತ ಮಾತುಕತೆ ಮುಖ್ಯ.

ಕುಂಭ
ಆಪ್ತ ಸಂಬಂಧ ಕಾಯುವಲ್ಲಿ ನಿಮ್ಮ ಅಹಂ ಅಡ್ಡಿ ಬರದಂತೆ ನೋಡಿಕೊಳ್ಳಿ. ಖರ್ಚಿನ ದಾರಿ ಹೆಚ್ಚುವುದು. ಆದಾಯ ಗಳಿಕೆಯ ಸಾಧ್ಯತೆ ಕಡಿಮೆ.

ಮೀನ
ಮಾನಸಿಕ ಒತ್ತಡ ಹೆಚ್ಚು. ಇದರಿಂದ ನಿಮ್ಮ ಕೆಲಸದ ಮೇಲೆ ಗಮನ ಕಡಿಮೆಯಾಗುವುದು. ಸಂಗಾತಿ ಜತೆಗೆ ಭಿನ್ನಮತ ಸಂಭವ. ಅನವಶ್ಯ ಖರ್ಚು ಹೆಚ್ಚಳ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!