Friday, December 8, 2023

Latest Posts

ದಿನಭವಿಷ್ಯ| ಕೆಲವು ಬೆಳವಣಿಗೆಗಳ ಮಧ್ಯೆ ನೀವು ಕಳೆದುಹೋದ ಭಾವನೆ ಕಾಡಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಉದ್ಯೋಗದಲ್ಲಿ ಉನ್ನತಿ. ಕಾರ್ಯ ಸಫಲ. ಕುಟುಂಬ ಸದಸ್ಯರ ಜತೆ ಉತ್ತಮ ಹೊಂದಾಣಿಕೆ. ಆರೋಗ್ಯದ ಕುರಿತಾದ ಕಳವಳ ನಿವಾರಣೆ. ಆರ್ಥಿಕ ಪ್ರಗತಿ.

ವೃಷಭ
ಪ್ರತಿಯೊಂದು ಸಣ್ಣ ವಿಷಯಕ್ಕೂ ಹೆಚ್ಚಿನ ಗಮನ ಅಗತ್ಯ. ನಿಮ್ಮ ಸುತ್ತಲಿನ ಕೆಲವು ಬೆಳವಣಿಗೆಗಳ ಮಧ್ಯೆ ನೀವು ಕಳೆದುಹೋದ ಭಾವನೆ ಕಾಡಬಹುದು.

ಮಿಥುನ
ನಿರಾಳ ದಿನ.  ಕಾರ್ಯದೊತ್ತಡವಿಲ್ಲ. ಹಾಗಾಗಿ ಆಪ್ತರೊಂದಿಗೆ ದಿನ ಕಳೆಯಲು ಅವಕಾಶ ಸಿಗಲಿದೆ. ಆರ್ಥಿಕ ಅಡಚಣೆ ಇಂದು ಕಾಡಲಾರದು.

ಕಟಕ
ಮನೆಯಿರಲಿ, ಕಚೇರಿಯಿರಲಿ ನೀವೇ ಎಲ್ಲರ ಕೇಂದ್ರ ಬಿಂದುವಾಗುವಿರಿ. ಎಲ್ಲರ ಜತೆಗಿನ ಸೌಹಾರ್ದ ಸಂಬಂಧ ಉಳಿಸಿಕೊಳ್ಳಿ. ಆರ್ಥಿಕ ಉನ್ನತಿ.

ಸಿಂಹ
ಬಾಕಿ ಉಳಿದ ಕಾರ್ಯ ಮುಗಿಸುವ ಮೂಲಕ ನಿರಾಳತೆ ಅನುಭವಿಸುವಿರಿ. ಹಣಕಾಸಿನ ಒತ್ತಡ ಕಾಡುವುದು. ಕೌಟುಂಬಿಕ ಅಸಹಕಾರ.

ಕನ್ಯಾ
ವೃತ್ತಿಯಲ್ಲಿ ನಿಮ್ಮ ಬೆನ್ನ ಹಿಂದೆ ನಡೆಯುವ ಚಟುವಟಿಕೆಗಳ ಕುರಿತು ಎಚ್ಚರದಿಂದಿರಿ. ಉದ್ಯಮಿಗಳಿಗೆ ಇಂದು ಅತ್ಯಂತ ಯಶಸ್ವಿ ದಿನ. ಕೌಟುಂಬಿಕ ಅಶಾಂತಿ.

ತುಲಾ
ಕೆಲಸದೊತ್ತಡ ಹೆಚ್ಚು. ಮಾಡಿದಷ್ಟೂ ಮುಗಿಯದ ಕೆಲಸ. ಕೌಟುಂಬಿಕ ಕಲಹ. ವಯೋವೃದ್ಧರು ಅವಘಡದ ಕುರಿತು ಎಚ್ಚರದಿಂದಿರಿ.

ವೃಶ್ಚಿಕ
ಹೆಚ್ಚು ಹೊಣೆಗಾರಿಕೆ. ಒತ್ತಡವೂ ಹೆಚ್ಚು. ಪ್ರೀತಿಯ ವಿಷಯದಲ್ಲಿ ಏರುಪೇರು ಸಂಭವಿಸಬಹುದು. ನಿಮ್ಮ ಭಾವನೆ ವ್ಯಕ್ತಪಡಿಸಲು ಹಿಂಜರಿಕೆ ಬೇಡ.

ಧನು
ಹೆಚ್ಚುವರಿ ಜವಾಬ್ದಾರಿ ಬೀಳುವುದು. ಅದನ್ನು ಸರಿಯಾಗಿ ನಿಭಾಯಿಸಿ. ಕುಟುಂಬಸ್ಥರ ಇಚ್ಛಾನುಸಾರ ವರ್ತಿಸಿ. ಇಲ್ಲವಾದರೆ ಭಿನ್ನಮತ ಏರ್ಪಡಬಹುದು.

ಮಕರ
ಪ್ರೀತಿಪಾತ್ರರನ್ನು ಕಡೆಗಣಿಸಬೇಡಿ. ಅವರ ಭಾವನೆಗೂ ಬೆಲೆ ಕೊಡಿ.  ವೃತ್ತಿಯಲ್ಲಿ ಯಾವುದನ್ನೂ ಅದೃಷ್ಟಕ್ಕೆ ಬಿಡಬೇಡಿ. ಕಠಿಣ ಪ್ರಯತ್ನ ಅಗತ್ಯ.

ಕುಂಭ
ಖಾಸಗಿ ಬದುಕು ಇಂದು ಹೆಚ್ಚು ಮುಖ್ಯವಾಗಲಿದೆ. ಹಿತೈಷಿಗಳ ವಿರೋಧ ಕಟ್ಟಿಕೊಳ್ಳಬೇಡಿ. ಅವರ ಭಿನ್ನಮತವನ್ನು ಸ್ಫೂರ್ತಿಯಿಂದ ಸ್ವೀಕರಿಸಿರಿ.

ಮೀನ
ನಿಮ್ಮ ಭಾವನೆಯನ್ನು ಇತರರು ಗೌರವಿಸುತ್ತಿಲ್ಲ ಎಂಬ ಭಾವನೆ ಕಾಡುವುದು. ಆ ಕುರಿತು ಹೆಚ್ಚು ಚಿಂತಿಸದಿರಿ. ನಿಮ್ಮ ಕಾರ್ಯ ಮಾಡುತ್ತಾ ಹೋಗಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!