ದಿನಭವಿಷ್ಯ| ಆಪ್ತರೊಡನೆ ಮಾತಿನ ಚಕಮಕಿ ನಡೆಯುವ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಹೊಸ ಸಂಬಂಧ ಬೆಳೆಸದಿರಿ. ನಿಮ್ಮನ್ನು ಪ್ರೀತಿಸುವವರನ್ನು ಕಡೆಗಣಿಸಬೇಡಿ. ಕೆಲವರು ನಿಮ್ಮ ಒಳ್ಳೆತನ ದುರ್ಬಳಕೆ ಮಾಡುವ ಸಾಧ್ಯತೆಯಿದೆ.

ವೃಷಭ
ಹೊಸ ವ್ಯವಹಾರದಲ್ಲಿ ಹಣ ಹೂಡುವುದು ಪ್ರತಿಕೂಲವಾದೀತು. ಆಪ್ತ ಬಂಧುಗಳ ಅಸಮಾಧಾನ ಎದುರಿಸುವಿರಿ. ತಾಳ್ಮೆಯಿಂದ ವ್ಯವಹರಿಸಿ.

ಮಿಥುನ
ಮನೆಯಲ್ಲಿ ಹಿರಿಯರ ಜತೆ ವಾಗ್ವಾದ ನಡೆದೀತು. ನೀವು ತಾಳ್ಮೆ ಕಳಕೊಳ್ಳದಿರಿ. ಸಮಾಧಾನದಿಂದ ಪರಿಸ್ಥಿತಿ ನಿಭಾಯಿಸಿ. ಖರ್ಚು ಅಧಿಕ.

ಕಟಕ
ಕುಟುಂಬದ ಹಿತಾಸಕ್ತಿ ಕಾಯುವಲ್ಲಿ ಹೆಚ್ಚು ಕಾಳಜಿ ವಹಿಸಿರಿ. ಅಸಮಾಧಾನ ಇದ್ದರೆ ನಿವಾರಿಸಲು ಪ್ರಯತ್ನಿಸಿ. ಎಲ್ಲವೂ ಸುಸೂತ್ರವಾಗುವುದು.

ಸಿಂಹ
ಉದ್ಯೋಗದಲ್ಲಿ ಸಫಲತೆ. ಆದರೂ ಹೊಸ ಸಮಸ್ಯೆ ನಿಮಗೆ ಎದುರಾಗುವುದು. ಆಪ್ತರೊಡನೆ ಮಾತಿನ ಚಕಮಕಿ ನಡೆಯಬಹುದು.

ಕನ್ಯಾ
ಸಂಬಂಧದಲ್ಲಿ ವಿನಾಕಾರಣ ಅನುಮಾನ ಪಡದಿರಿ. ಹಿರಿಯರ ಜತೆ ವಾಗ್ವಾದ ಮಾಡಲು ಹೋಗಬೇಡಿ. ವಾಗ್ವಾದಕ್ಕಿಂತ ಹೊಂದಾಣಿಕೆ ಒಳಿತು.

ತುಲಾ
ಮಾತು ಕಡಿಮೆ ಮಾಡಿ ಕಾರ್ಯ ಹೆಚ್ಚು ಮಾಡಬೇಕು. ಪ್ರೀತಿಪಾತ್ರರಲ್ಲಿ ಮನಸ್ಸು ಬಿಚ್ಚಿಡಿ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು.

ವೃಶ್ಚಿಕ
ಯಾವುದೇ ವಿಷಯದಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ಅಂದಾಜಿಸಿ ಬಳಿಕ ನಿರ್ಧಾರ ತಾಳಿರಿ. ದುಡುಕಿನ ನಿರ್ಧಾರ ಒಳಿತಲ್ಲ. ಕೌಟುಂಬಿಕ ಪರಿಸ್ಥಿತಿ ಶಾಂತಿಯುತ.

ಧನು
ನಿಮ್ಮ ಕಾರ್ಯಗಳೆಲ್ಲ ಉದ್ದೇಶಿತ ಕಾಲಮಿತಿಯಲ್ಲಿ ಮುಗಿಯುವವು. ಅದರಿಂದ ನಿರಾಳತೆ. ಪ್ರೀತಿಪಾತ್ರರ ಜತೆ ಒಡನಾಟ.

ಮಕರ
ವೃತ್ತಿ ಬದುಕಿನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಪ್ರಸಂಗ ಒದಗೀತು. ಕಾರ್ಯ ಸಿದ್ಧಿ. ಆತ್ಮೀಯರ ವರ್ತನೆ ನೋವು ತರಬಹುದು.

ಕುಂಭ
ಕೆಲವು ನಿರ್ಧಾರದ ಬಗ್ಗೆ ಮರುಚಿಂತನೆ ನಡೆಸಿರಿ. ಅದು ನಿಮಗೆ ಒಳಿತು ತರುವುದೆ ಎಂದು ಚಿಂತಿಸಿ. ಆದಾಯ ಮತ್ತು ವೆಚ್ಚದಲ್ಲಿ ಸಮತೋಲನ ಸಾಧಿಸಿರಿ.

ಮೀನ
ನಿಮ್ಮ ಯೋಚನೆ ನಿರೀಕ್ಷಿಸಿದಂತೆ ಸಫಲವಾಗದು. ಅದರ ಕುರಿತು ಹೆಚ್ಚು ಚಿಂತಿಸದಿರಿ. ಭಾವುಕ ಸನ್ನಿವೇಶಕ್ಕೆ ಸಿಲುಕುವ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!