ದಿನಭವಿಷ್ಯ| ಕುಟುಂಬಸ್ಥರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಕಾರ್ಯಾಚರಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಹಲವಾರು ಕಾರ್ಯಗಳಲ್ಲಿ ವ್ಯಸ್ತ. ಹಾಗಾಗಿ ಇನ್ನಿತರ ವಿಷಯಗಳಿಗೆ ಗಮನ ಹರಿಸಲು ಸಮಯ ಸಾಲದು. ಆರೋಗ್ಯ ಸಮಸ್ಯೆ ಕಾಡೀತು.

ವೃಷಭ
ಮುಖ್ಯ ವಿಷಯದಲ್ಲಿ  ತಾಳ್ಮೆ ಕಳೆದುಕೊಳ್ಳುವ ಪ್ರಸಂಗ ಉಂಟಾದೀತು. ಇದರಿಂದ ನಿಮ್ಮ ಕೆಲಸವೂ ಹಾಳಾದೀತು. ಭಾವನಾತ್ಮಕ ಏರುಪೇರು ಅನುಭವಿಸುವಿರಿ.

ಮಿಥುನ
ಕಾರ್ಯಸಿದ್ಧಿ. ಆತ್ಮವಿಶ್ವಾಸ ಹೆಚ್ಚಳ. ಸಂಗಾತಿ ಜತೆಗೆ ಉತ್ತಮ ಸಂಬಂಧ, ವೈಮನಸ್ಸು ನಿವಾರಣೆ. ದೈಹಿಕ ಸ್ವಾಸ್ಥ್ಯ ಉತ್ತಮಗೊಳ್ಳುವುದು.

ಕಟಕ
ಸಾಧಾರಣ ಯಶಸ್ಸಿನ ದಿನ. ಉದ್ದೇಶಿತ ಕಾರ್ಯದಲ್ಲಿ  ನೀವು ಬಯಸಿದ ಫಲ ದೊರಕದು. ಹಾಗೆಂದು ನಿರಾಶೆಯೂ ಆಗಲಾರದು.

ಸಿಂಹ
ನಿಮ್ಮ ಸ್ವಭಾವದಲ್ಲಿ ಹೊಂದಾಣಿಕೆಯನ್ನು ರೂಢಿಸಿಕೊಂಡರೆ ಎಲ್ಲ ಕೆಲಸ ಸಾಧಿಸುವಿರಿ. ಕಠಿಣ ನಿಲುವು ಅಪೇಕ್ಷಿತ ಫಲ ನೀಡದು. ಕೌಟುಂಬಿಕ ಅಶಾಂತಿ.

ಕನ್ಯಾ
ಹೆಚ್ಚಿನ ಹೊಣೆಗಾರಿಕೆ. ಅದನ್ನು ನಿಭಾಯಿಸಲು ಕಷ್ಟ ಪಡುವಿರಿ. ಅಸುರಕ್ಷೆಯ ಭಾವನೆ ಕಾಡುವುದು. ಹಣಕಾಸು ಬಿಕ್ಕಟ್ಟು. ಖಾಸಗಿ ಬದುಕಲ್ಲಿ ಬದಲಾವಣೆ.

ತುಲಾ
ಮನೆಗೆ ಸಂಬಂಧಿಸಿ ಹೆಚ್ಚಿನ ಹೊಣೆ ನಿಮ್ಮ ಮೇಲೆ ಬೀಳುವುದು. ಕುಟುಂಬಸ್ಥರ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಕಾರ್ಯಾಚರಿಸಿ.

ವೃಶ್ಚಿಕ
ಇಂದು ನೀವು ಲಾಭ ನಷ್ಟ ಎರಡನ್ನು ಅನುಭವಿಸುವಿರಿ. ಹಿರಿಯರ ಸಲಹೆ ಅಪಥ್ಯ ಎನಿಸಬಹುದು. ಖಾಸಗಿ ಸಂಬಂಧದಲ್ಲಿ ಫಲಪ್ರದ ಬೆಳವಣಿಗೆ.

ಧನು
ಹೆಚ್ಚು ತಾಳ್ಮೆಯಿಂದ ಕಾರ್ಯಾಚರಿಸಿ. ಯಾವುದೇ ವಿದ್ಯಮಾನಕ್ಕೆ ಆತುರದಿಂದ ಪ್ರತಿಕ್ರಿಯೆ ತೋರದಿರಿ. ಅದರಿಂದ ಪ್ರತಿಕೂಲ ಪರಿಣಾಮ.

ಮಕರ
ನಿಮ್ಮ ಕೆಲಸವು ಉದ್ದೇಶಿತ ಫಲ ನೀಡಲಾರದು. ಅದರಿಂದ ನಿರಾಶೆ ಅನುಭವಿಸುವಿರಿ. ಕೌಟುಂಬಿಕ ಸಂಬಂಧದಲ್ಲಿ ಅಪಸ್ವರ ಏಳಬಹುದು.

ಕುಂಭ
ಹಣಕ್ಕೆ ಸಂಬಂಧಿಸಿದ ಸಮಸ್ಯೆ ಪರಿಹಾರ. ಆರೋಗ್ಯದಲ್ಲಿ ತುಸು ಸಮಸ್ಯೆ ಕಾಣಿಸೀತು. ಆತ್ಮೀಯರ ಹಿತವಚನ ನಿಮಗೆ ಒಳಿತು ತರಬಲ್ಲುದು.

ಮೀನ
ಸಂಗಾತಿ ಜತೆಗಿನ ಧೋರಣೆ ಬದಲಿಸಿ. ಅವರ ಭಾವನೆಗೆ ಸೂಕ್ತವಾಗಿ ಸ್ಪಂದಿಸಿರಿ. ಹಣದ ಮುಗ್ಗಟ್ಟು ಎದುರಿಸುವಿರಿ. ಬಂಧು ಭೇಟಿ ಸಂಭವ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!