ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಕುಟುಂಬ ಸದಸ್ಯರ ವರ್ತನೆಯಿಂದ ಸಮಸ್ಯೆ ಉಂಟಾದೀತು. ನಾಜೂಕಿನಿಂದ ವ್ಯವಹರಿಸಿ. ಪ್ರಯಾಣದ ಲೆಕ್ಕಾಚಾರ ತಪ್ಪಾಗಬಹುದು.
ವೃಷಭ
ಅಂಕಿಅಂಶಗಳ ಜತೆ ವ್ಯವಹರಿಸುವಾಗ ಎಚ್ಚರವಿರಲಿ. ತಪ್ಪುಗಳು ಉಂಟಾದೀತು. ವ್ಯವಹಾರಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ ಮುಂದೂಡಿರಿ.
ಮಿಥುನ
ಹಣಕಾಸು ಸಮಸ್ಯೆ ಉಂಟಾದೀತು. ಕೇಳಿದ್ದೆಲ್ಲ ನಂಬಬೇಡಿ. ಯಾವುದೇ ವ್ಯಕ್ತಿಯನ್ನು ಅವಶ್ಯಕತೆಗಿಂತ ಹೆಚ್ಚು ನಂಬಬೇಡಿ. ವಿವೇಚನೆಯಿರಲಿ.
ಕಟಕ
ನಿಮ್ಮ ಕಾರ್ಯ ಚಟುವಟಿಕೆಗಳು ಕೆಲವರ ಅಸಮಾಧಾನಕ್ಕೆ ಕಾರಣವಾದೀತು. ಅವರಿಂದ ವಿರೋಧ ಎದುರಿಸುವಿರಿ. ತಾಳ್ಮೆಯಿಂದ ವರ್ತಿಸಿ.
ಸಿಂಹ
ವೃತ್ತಿ ಕಾರ್ಯದಲ್ಲಿ ನಿರಾಸಕ್ತಿ. ಆತ್ಮೀಯ ಬಂಧುಗಳ ಹಿತಾಸಕ್ತಿ ಕುರಿತಂತೆ ಹೆಚ್ಚು ಗಮನ ಹರಿಸುವಿರಿ. ದೂರದ ಬಂಧುವಿನಿಂದ ಶುಭ ಸುದ್ದಿ ಕೇಳುವಿರಿ.
ಕನ್ಯಾ
ಕೆಲವು ವಿಷಯಗಳಲ್ಲಿ ಅಹಂ ತ್ಯಜಿಸಿ ವ್ಯವಹರಿಸಿ. ಎಲ್ಲರೂ ನಿಮ್ಮ ವಿರುದ್ಧವಾಗಿ ವರ್ತಿಸುತ್ತಾರೆ ಎಂಬ ಭಾವನೆ ತೊಡೆಯಿರಿ. ಆರ್ಥಿಕ ಸಂಕಷ್ಟ.
ತುಲಾ
ವೃತ್ತಿಯಲ್ಲಿ ಅಥವಾ ಮನೆಯಲ್ಲಿ ಸಂಘರ್ಷದ ವಾತಾವರಣ ಎದುರಿಸುವಿರಿ. ನಿಮ್ಮ ಇಚ್ಛೆಗೆ ವಿರುದ್ಧವಾಗಿ ಕೆಲವರು ನಡಕೊಳ್ಳುವರು.
ವೃಶ್ಚಿಕ
ಯಾವುದಾದರೂ ಬಿಕ್ಕಟ್ಟು, ಸಮಸ್ಯೆ ಪರಿಹಾರಕ್ಕೆ ಯೋಜಿಸಿದ್ದರೆ ನಿಮಗೆ ಇಂದು ದಾರಿ ತೋರುವುದು. ಸೂಕ್ತ ನೆರವು ಲಭ್ಯ.
ಧನು
ಕೆಲಸದಲ್ಲಿ ಉದಾಸೀನತೆ ಬಾಧಿಸುವುದು. ಆಸಕ್ತಿಯ ವಿಷಯಗಳೂ ಇಂದು ನಿರಾಸಕ್ತಿ ಮೂಡಿಸುವುದು. ಜಡತ್ವ ಬಿಟ್ಟು ಉತ್ಸಾಹ ತುಂಬಿಕೊಳ್ಳಿ.
ಮಕರ
ನಿಮ್ಮ ಕಾರ್ಯಕ್ಕೆ ಇಂದು ಅದೃಷ್ಟ ಜತೆಗಿರಲಾರದು. ಹಾಗಾಗಿ ಅಡ್ಡಿ ಆತಂಕ ಎದುರಿಸುವಿರಿ. ಆತ್ಮೀಯರು ಮುನಿಸು ತೋರುವರು. ಖರ್ಚು ಮಿತಿ ಮೀರಲಿದೆ.
ಕುಂಭ
ಸಂಬಂಧದಲ್ಲಿ ಅಪಸ್ವರ. ಎಚ್ಚರ ವಹಿಸದಿದ್ದರೆ ಬಿಕ್ಕಟ್ಟು ಉಲ್ಬಣವಾದೀತು. ಇತರರ ವ್ಯವಹಾರದಲ್ಲಿ ಮೂಗು ತೂರಿಸಲು ಹೋಗಬೇಡಿ.
ಮೀನ
ಮಾನಸಿಕ ಒತ್ತಡ. ಇದರಿಂದ ದೇಹದ ಮೇಲೂ ಪರಿಣಾಮ ಉಂಟಾಗಲಿದೆ. ಹಿತಶತ್ರುಗಳ ಕುರಿತು ಎಚ್ಚರ ವಹಿಸಿ. ಎಲ್ಲರನ್ನು ನಂಬಬೇಡಿ.