ದಿನಭವಿಷ್ಯ| ನಿಮ್ಮ ಮಾತು, ವರ್ತನೆ ಇತರರಿಗೆ ಸಹನೀಯ ಆಗಿರಲಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಮನೆಯಲ್ಲಿ ವಾಗ್ವಾದಕ್ಕೆ ಇಳಿಯಬೇಡಿ. ಅದನ್ನು ತಪ್ಪಿಸಲು ಯತ್ನಿಸಿ. ವೃತ್ತಿಯ ಕೆಲವು ವಿಷಯಗಳು ಉದ್ವಿಗ್ನತೆ ಸೃಷ್ಟಿಸುತ್ತವೆ. ತಾಳ್ಮೆಯಿಂದ ವ್ಯವಹರಿಸಿ.

ವೃಷಭ
ವಿಶೇಷಗಳಿಲ್ಲದ ದಿನ. ಕೌಟುಂಬಿಕ ಮತ್ತು ವೃತ್ತಿಯ ಹೊಣೆ ಸರಿಯಾಗಿ ನಿಭಾಯಿಸುವಿರಿ. ಕುಟುಂಬದ ಆರೋಗ್ಯಕ್ಕೆ ಗಮನ ಕೊಡಿ.

ಮಿಥುನ
ನಿಮ್ಮ ಮಾತು, ವರ್ತನೆ ಇತರರಿಗೆ ಸಹನೀಯ ಆಗಿರಲಿ. ಇಲ್ಲವಾದರೆ ಇತರರ ವಿರೋಧ ಎದುರಿಸುವಿರಿ. ಕೌಟುಂಬಿಕ ಒತ್ತಡ, ಹೊಣೆ ಹೆಚ್ಚಳ.

ಕಟಕ
ನೀವು ನಿರೀಕ್ಷಿಸಿದ್ದು ಆಗದಿದ್ದರೆ ನಿರಾಶರಾಗದಿರಿ. ಹೊಸ ಅವಕಾಶಗಳು ನಿಮಗೆ ಕಾದಿವೆ. ವೃತ್ತಿಯಲ್ಲಿ ತಪ್ಪು ಉಂಟಾಗದಂತೆ ಎಚ್ಚರ ವಹಿಸಿರಿ.

ಸಿಂಹ
ನಿಮ್ಮನ್ನು ಗೌರವಿಸದ ವ್ಯಕ್ತಿಯ ಮೇಲೆ ಅತಿಯಾದ ಕಾಳಜಿ ತೋರುವ ಅಗತ್ಯವಿಲ್ಲ. ಆರೋಗ್ಯ ಸುಸ್ಥಿರ. ಆರ್ಥಿಕ ಪರಿಸ್ಥಿತಿ ಸಮಾಧಾನಕರ.

ಕನ್ಯಾ
ಕೆಲವು ಬೆಳವಣಿಗೆ ಮನಸ್ಸಿನ ನೆಮ್ಮದಿ ಕಲಕುವುದು. ಸಮಸ್ಯೆಯಿಂದ ದೂರ ಓಡದೆ ಅದನ್ನು ಪರಿಹರಿಸಲು ಗಮನ ಕೊಡುವುದು ಒಳಿತು.

ತುಲಾ
ಉತ್ಸಾಹದ ದಿನ. ವೈಯಕ್ತಿಕ  ಸಮಸ್ಯೆಗಳ ಪರಿಹಾರ. ಕಾರ್ಯಗಳೆಲ್ಲ ಸಲೀಸು. ಭಾವನಾತ್ಮಕ ವಿಷಯವೊಂದು ಸುಖಾಂತ್ಯ ಕಾಣುವುದು.

ವೃಶ್ಚಿಕ
ಇತರರ ಸಮಸ್ಯೆ ಪರಿಹರಿಸುವಲ್ಲಿ ಮುತುವರ್ಜಿ ವಹಿಸುವಿರಿ. ಅತಿಯಾದ ಆಹಾರ ಸೇವನೆ ಆರೋಗ್ಯಕ್ಕೆ ಪ್ರತಿಕೂಲ ಆದೀತು, ಎಚ್ಚರ.

ಧನು
ಸವಾಲು ಹೆಚ್ಚುವುದು. ಅದಕ್ಕೆ ಎದೆಗುಂದದಿರಿ.  ಅನುಭವದಿಂದ ಪಾಠ ಕಲಿಯಿರಿ. ಸಂಗಾತಿಯ ಹುಡುಕಾಟದಲ್ಲಿ ಇರುವವರಿಗೆ ಸಫಲತೆ ಸಿಗಲಿದೆ.

ಮಕರ
ಹಲವು ಅವಕಾಶ ಲಭ್ಯ ಸೂಕ್ತವಾದುದನ್ನು ಆಯ್ಕೆ ಮಾಡಿ ಮುಂದುವರಿಯಿರಿ. ದೂರ ಪ್ರಯಾಣದ ಸಾಧ್ಯತೆಯಿದೆ. ಕೌಟುಂಬಿಕ ಸಮ್ಮಿಲನ.

ಕುಂಭ
ಈ ದಿನ ನಿಮ್ಮ ಪಾಲಿಗೆ ಏರುಪೇರು ಸೃಷ್ಟಿಸಲಿದೆ. ಕುಟುಂಬದಲ್ಲಿ ಸಣ್ಣ ಅಸಮಾಧಾನ. ಕರ್ತವ್ಯಬದ್ಧತೆಯಿಂದ ಕಾರ್ಯ ನಿರ್ವಹಿಸಿ. ಎಲ್ಲ ಸರಿಯಾಗುವುದು.

ಮೀನ
ಇಂದು ಪ್ರತಿ ಕ್ಷಣವೂ ಎಚ್ಚರದಿಂದ ಕಾರ್ಯ ನಿರ್ವಹಿಸಿ. ಸ್ವಲ್ಪವೇ ಗಮನ ತಪ್ಪಿದರೂ ಪ್ರತಿಕೂಲ ಪರಿಣಾಮ ಉಂಟಾದೀತು. ಭಾವುಕ ಸನ್ನಿವೇಶ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!