Sunday, December 3, 2023

Latest Posts

ದಿನಭವಿಷ್ಯ| ವಿವಾಹಿತರಿಗೆ ಹಳೆಯ ಸಮಸ್ಯೆಯೊಂದು ಬಿಕ್ಕಟ್ಟು ಸೃಷ್ಟಿಸಬಹುದು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಇಂದು ನಿರಾಳತೆ ದೊರಕುವುದು. ವೃತ್ತಿಯಲ್ಲಿ ಹೊಸ ಔನ್ನತ್ಯ ಸಾಧಿಸುವಿರಿ. ಧನಾಗಮ.

ವೃಷಭ
ಕೆಲವು ಏರಿಳಿತಗಳನ್ನು ಇಂದು ಕಾಣುವಿರಿ. ಸಣ್ಣ ತಗಾದೆಗಳು ದೊಡ್ಡ ಪರಿಣಾಮ ಬೀರಬಹುದು. ಕೌಟುಂಬಿಕ ಹೊಣೆ ಹೆಚ್ಚಳ.

ಮಿಥುನ
ನಿಮ್ಮ ಏಕಾಗ್ರತೆ ಕೆಡಿಸಬಲ್ಲ ಹಲವಾರು ವಿಷಯಗಳು ಸುತ್ತಲಿರಬಹುದು. ಆದರೆ ಅದಕ್ಕೆ ಬಲಿಯಾಗದೆ ಉಳಿಯುವುದು ನಿಮಗೆ ಹಿತಕಾರಿ. ಕರ್ತವ್ಯಕ್ಕೆ ಆದ್ಯತೆ ಕೊಡಿ.

ಕಟಕ
ಆರೋಗ್ಯದಲ್ಲಿ ಸುಧಾರಣೆ. ಆಪ್ತರು ನಿಮ್ಮ ಭಾವನೆಗೆ ಸ್ಪಂದಿಸುವರು. ವೃತ್ತಿಯಲ್ಲಿ ಕೆಲವರ ವಿರೋಧ
ಕಟ್ಟಿಕೊಳ್ಳುವಿರಿ.ಚಿಂತಿಸದಿರಿ.

ಸಿಂಹ
ಸಂಬಂಧದಲ್ಲಿ ಮೂಡಿದ್ದ ಬಿಕ್ಕಟ್ಟು ನಿವಾರಣೆ. ಶಾಂತಿ, ಸಮರಸತೆ ನೆಲೆಸುವುದು. ಧನಲಾಭ. ಇತರರ ಸಫಲತೆ ಕಂಡು ಕರುಬದಿರಿ.

ಕನ್ಯಾ
ವ್ಯವಹಾರದಲ್ಲಿ
ತುಂಬಾ ರಿಸ್ಕ್ ತೆಗೆದುಕೊಳ್ಳಬೇಡಿ. ಅದು ಹೆಚ್ಚಿನ ಫಲ ನೀಡದು. ಇದ್ದುದರಲ್ಲೆ ತೃಪ್ತಿ ಪಡೆಯಿರಿ. ಆರ್ಥಿಕ ಸುಸ್ಥಿರತೆ.

ತುಲಾ
ವೃತ್ತಿಯಲ್ಲಿ ಉತ್ತಮ ಸಂವಹನ ಸಾಧಿಸುವಿರಿ. ಎಲ್ಲರೊಂದಿಗೆ ಉತ್ತಮ ಬಾಂಧವ್ಯ. ವಿವಾಹಿತರಿಗೆ ಹಳೆಯ ಸಮಸ್ಯೆಯೊಂದು ಬಿಕ್ಕಟ್ಟು ಸೃಷ್ಟಿಸಬಹುದು.

ವೃಶ್ಚಿಕ
ಆರೋಗ್ಯ ಸಮಸ್ಯೆ ಉಂಟಾದೀತು. ಅತಿಯಾದ ಒತ್ತಡಕ್ಕೆ ಸಿಲುಕಬೇಡಿ. ವೃತ್ತಿಯಲ್ಲಿ ಹೆಚ್ಚು ಕೆಲಸ ಮಾಡಬೇಕಾಗುವುದು. ಕೌಟುಂಬಿಕ ಸಮಸ್ಯೆ.

ಧನು
ನಿಮ್ಮ ಹೆಸರು ಕೆಡಿಸಲು ಕೆಲವರು ಯತ್ನಿಸುವರು. ಅದಕ್ಕೆ ಆಸ್ಪದ ಕೊಡಬೇಡಿ. ಹಣ ಗಳಿಕೆಗೆ ವಾಮಮಾರ್ಗ ಹಿಡಿಯದಿರಿ. ಕೌಟುಂಬಿಕ ಬಿಕ್ಕಟ್ಟು.

ಮಕರ
ಆರೋಗ್ಯ ಕೆಟ್ಟರೆ ಸುಮ್ಮಗೆ ಕೂರಬೇಡಿ. ವೈದ್ಯರನ್ನು ಕಾಣಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ಕೂರುವ ವಿದ್ಯಾರ್ಥಿಗಳಿಗೆ ಯಶಸ್ಸು. ವಿವಾಹಿತರಿಗೆ ಶುಭ ಬೆಳವಣಿಗೆ.

ಕುಂಭ
ವಾಹನ ಚಲಾವಣೆ ಯಲ್ಲಿ ಹೆಚ್ಚು ಎಚ್ಚರ ವಹಿಸಿ. ಸಂಬಂಧಿಗಳಲ್ಲಿ ಜಗಳ ಉಂಟಾದೀತು. ಖರ್ಚು ನಿಯಂತ್ರಣ ಅವಶ್ಯ. ಹೊಸ ವಸ್ತು ಖರೀದಿ ಮುಂದೂಡಿ.

ಮೀನ
ಹೊಸ ವ್ಯವಹಾರ, ಹೊಸ ವ್ಯಾಪಾರಕ್ಕೆ ಮನಸ್ಸು ಮಾಡಿದ್ದರೆ ಮತ್ತೊಮ್ಮೆ ಪರಾಮರ್ಶಿಸಿ. ಕಾಲ ತುಂಬ ಸೂಕ್ತವಾಗಿಲ್ಲ. ತುಸು ಕಾಲ ಕಾಯುವುದು ಒಳಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!