ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ವೃತ್ತಿಯಲ್ಲಿ ಎಲ್ಲರ ಗಮನ ನಿಮ್ಮೆಡೆಗೆ. ಬಹುಶಃ ನಿಮ್ಮ ಕಾರ್ಯ ಸಾಮರ್ಥ್ಯ ಎಲ್ಲರ ಗಮನಕ್ಕೆ ಬರುತ್ತದೆ. ಕೆಲವರು ಅಸೂಯೆ ತೋರಬಹುದು.
ವೃಷಭ
ಆರೋಗ್ಯದ ಸಮಸ್ಯೆ ತುಸು ಕಾಡಬಹುದು. ಆದರೆ ಆ ಕುರಿತಂತೆ ಅನವಶ್ಯ ಭೀತಿ ಬೇಡ. ಆರ್ಥಿಕ ಬಿಕ್ಕಟ್ಟು ತಾನಾಗಿ ಪರಿಹಾರ ಕಾಣುವುದು. ಸಹನೆಯಿರಲಿ.
ಮಿಥುನ
ಸಂವಹನದ ಕೊರತೆಯಿಂದ ಕೆಲವರ ಜತೆ ತಪ್ಪಭಿಪ್ರಾಯ ಮೂಡಬಹುದು. ವಿರಾಮ ತೆಗೆದು ಕೊಂಡು ಮನೆಯಲ್ಲಿ ಕೂರಲು ಬಯಸುವಿರಿ.
ಕಟಕ
ಕೌಟುಂಬಿಕ ಉದ್ವಿಗ್ನತೆ. ಮನಸ್ಸಿನಲ್ಲಿ ಆತಂಕ, ತಲ್ಲಣ. ಹಲವಾರು ಕಾರ್ಯಗಳು ಅಪೂರ್ಣವಾಗಿ ಉಳಿಯುತ್ತವೆ. ಆರ್ಥಿಕ ಅಡಚಣೆ.
ಸಿಂಹ
ಕೆಲಸದ ಮೇಲೆ ಹೆಚ್ಚು ಗಮನ ಕೊಡುವುದು ಅಗತ್ಯ. ಇಲ್ಲವಾದರೆ ನಿಮ್ಮಿಂದ ಪ್ರಮಾದಗಳು ಆಗಬಹುದು. ಮನೆಯಲ್ಲಿ ತುಸು ಉದ್ವಿಗ್ನ ಪರಿಸ್ಥಿತಿ.
ಕನ್ಯಾ
ವೃತ್ತಿಯಲ್ಲಿ ಹೆಚ್ಚು ಒತ್ತಡ. ಕೆಲವರು ತಮ್ಮ ಹೊಣೆಗಾರಿಕೆಯನ್ನು ನಿಮ್ಮ ಮೇಲೆ ಜಾರಿಸುತ್ತಾರೆ. ಮನೆಯಲ್ಲಿ ಆರೋಗ್ಯ ಸಮಸ್ಯೆ ಕಾಡಬಹುದು.
ತುಲಾ
ಇತರರ ಒಳಿತಿಗೆ ನಿಮ್ಮ ಪ್ರಯತ್ನ ನಡೆಸುವಿರಿ. ಆಪ್ತರು ನಿಮ್ಮ ಜತೆ ಮುನಿಸಿಕೊಂಡಾರು. ಅವರೊಡನೆ ಹೊಂದಾಣಿಕೆ ಸಾಧಿಸಿ. ಸಂಘರ್ಷ ಬೇಡ.
ವೃಶ್ಚಿಕ
ವೃತ್ತಿ ಕಾರ್ಯಗಳಿಗೆ ಅದೃಷ್ಟ ಒದಗಲಿದೆ. ಜೊತೆಗೆ ಸಹೋದ್ಯೋಗಿ ಗಳ ಸಹಕಾರ. ಟೀಕೆ ಗಳನ್ನು ಸ್ಫೂರ್ತಿಯಿಂದ ಸ್ವೀಕರಿಸಿ. ತಪ್ಪುಗಳನ್ನು ತಿದ್ದಿಕೊಳ್ಳಿ.
ವೃಶ್ಚಿಕ
ವೃತ್ತಿ ಕಾರ್ಯಗಳಿಗೆ ಅದೃಷ್ಟ ಒದಗಲಿದೆ. ಜೊತೆಗೆ ಸಹೋದ್ಯೋಗಿ ಗಳ ಸಹಕಾರ. ಟೀಕೆ ಗಳನ್ನು ಸ್ಫೂರ್ತಿಯಿಂದ ಸ್ವೀಕರಿಸಿ. ತಪ್ಪುಗಳನ್ನು ತಿದ್ದಿಕೊಳ್ಳಿ.
ಧನು
ನಿಮ್ಮ ಕಠಿಣ ದುಡಿಮೆಗೆ ಸೂಕ್ತ ಪ್ರತಿಫಲ ದೊರಕುವ ದಿನವಿದು. ಸಂಗಾತಿ ಜತೆಗೆ ಆತ್ಮೀಯ ಕಾಲಕ್ಷೇಪ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಕೌಟುಂಬಿಕ ಶಾಂತಿ.
ಮಕರ
ಕ್ರಿಯಾತ್ಮಕ ಚಟುವಟಿಕೆ ಗಳಲ್ಲಿ ತೊಡಗಲು ಸಕಾಲ. ಧನಲಾಭ. ಉಳಿತಾಯಕ್ಕೆ ಆದ್ಯತೆ ಕೊಡಿ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು.
ಕುಂಭ
ಆರ್ಥಿಕ ಸಂಕಷ್ಟ ಕಾಡುವುದು. ಖರ್ಚಿನಲ್ಲಿ ಹಿತಮಿತ ಸಾಧಿಸಿ. ಉದ್ಯೋಗ ಬದಲಾವಣೆಗೆ ಕಾಲ ಪಕ್ವವಾಗಿಲ್ಲ. ಕೌಟುಂಬಿಕ ಒತ್ತಡ.
ಮೀನ
ಕುಟುಂಬದಲ್ಲಿ ಮೂಡಿರುವ ಭಿನ್ನಮತ ವನ್ನು ನಿರ್ಲಕ್ಷಿಸಬೇಡಿ. ಬೇಗನೆ ಅದನ್ನು ಶಮನಗೊಳಿಸಿ. ಉದ್ಯಮಿಗಳಿಗೆ ಆರ್ಥಿಕ ಲಾಭ ದೊರಕಲಿದೆ.