ದಿನಭವಿಷ್ಯ| ಕರ್ತವ್ಯ ನೆರವೇರಿಸಲು ಅಡ್ಡಿ ಒದಗಿದರೂ ಸಮರ್ಥವಾಗಿ ನಿಭಾಯಿಸುವಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಮೇಷ
ವೃತ್ತಿಯಲ್ಲಿ  ಪ್ರಗತಿ ಕಾಣುವಿರಿ. ಕೌಟುಂಬಿಕ ಕಾರ್ಯಸಿದ್ಧಿ. ಪ್ರೀತಿಪಾತ್ರರ ಭೇಟಿ. ನಿಮ್ಮ ಪಾಸಿಟಿವ್ ಧೋರಣೆ ಉತ್ತಮ ಫಲ ನೀಡುವುದು.
ವೃಷಭ

ದೈನಂದಿನ ಕರ್ತವ್ಯ ನೆರವೇರಿಸಲು ಅಡ್ಡಿ ಒದಗಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ.  ವಿರೋಧಗಳು ಕೊನೆಗೊಳ್ಳುತ್ತವೆ.

ಮಿಥುನ
ಉದ್ದೇಶಿತ ಕಾರ್ಯ ಈಡೇರದು. ವಿವಾಹ ಸಂಬಂಧ ಕುದುರಿಸುವ ಕಾರ್ಯದಲ್ಲಿ ಅಡ್ಡಿಗಳು ಬರಲಿವೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಸಹನೆಯಿಂದ ವರ್ತಿಸಿ.

ಕಟಕ
ಮಾನಸಿಕ ಒತ್ತಡವು ದೈನಂದಿನ ಕಾರ್ಯ ನೆರವೇರಿಸಲು ಅಡ್ಡಿ ತರುವುದು. ಏಕಾಗ್ರತೆ ಕಷ್ಟವಾಗುವುದು. ಸಂಬಂಧದಲ್ಲಿ ಬಿರುಕು ಉಂಟಾದೀತು.

ಸಿಂಹ
ಯೋಚಿಸಿ, ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ನಿಮ್ಮ  ಕಾರ್ಯವು ಅರ್ಧದಲ್ಲೆ ನಿಂತೀತು. ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ.

ಕನ್ಯಾ
ಆರ್ಥಿಕ ಒತ್ತಡ ಹೆಚ್ಚು. ಇದರಿಂದ ಮಾನಸಿಕ ಕಿರಿಕಿರಿ. ಇದು ನಿಮ್ಮ ನಡೆನುಡಿಯಲ್ಲಿ ಪ್ರತಿಫಲಿಸುವುದು. ಆಪ್ತರೊಂದಿಗೆ ಸಹನೆಯಿಂದ ವರ್ತಿಸಿ.

ತುಲಾ
ಕೌಟುಂಬಿಕ ವಿಷಯದಲ್ಲಿ  ಕೆಲವು ಸಂಕಷ್ಟಗಳು ಬರಬಹುದು. ಇದರಿಂದ ಮನಸ್ಸು ದೇವರು, ಅಧ್ಯಾತ್ಮದತ್ತ ವಾಲಬಹುದು.

ವೃಶ್ಚಿಕ
ವಿಶೇಷಗಳಿಲ್ಲದ ಸಾಮಾನ್ಯ ದಿನ. ಕೌಟುಂಬಿಕ ಹೊಣೆಗಾರಿಕೆ ಸಮರ್ಥವಾಗಿ ನಿಭಾಯಿಸಿರಿ. ಟೀಕಾಕಾರರ ಬಾಯಿಗೆ ಸಿಲುಕದಿರಿ.

ಧನು
ಕೆಲವು ವಿಚಾರಗಳಲ್ಲಿ ನಿಮ್ಮ ಕ್ಷಿಪ್ರ ಪ್ರತಿಕ್ರಿಯೆ ಅವಶ್ಯ.ಪ್ರಮುಖ ವಿಷಯ ನನೆಗುದಿಯಲ್ಲಿ ಇಡುವುದು ತರವಲ್ಲ.  ಕೌಟುಂಬಿಕ  ಬಿಕ್ಕಟ್ಟು ಪರಿಹಾರ ಕಂಡೀತು.

ಮಕರ
ಕೌಟುಂಬಿಕ ಬಿಕ್ಕಟ್ಟು ಪರಿಹರಿಸಲು ಮುಖ್ಯ ಗಮನ ಕೊಡಿ. ಅದನ್ನು ದೀರ್ಘ ಎಳೆಯಲು ಬಿಡಬೇಡಿ. ಆರ್ಥಿಕ ಪ್ರಗತಿ, ಜತೆಗೇ ಖರ್ಚೂ ಹೆಚ್ಚಳ.

ಕುಂಭ
ಕಾಡುವ ದೈಹಿಕ ನೋವಿನಿಂದ ಶಮನ ಪಡೆಯುವಿರಿ. ಮನೆಯಲ್ಲಿ ಹೆಚ್ಚಿನ ಹೊಣೆಗಾರಿಕೆಯಿಂದ ಮುಕ್ತಿ. ಕೌಟುಂಬಿಕ ಸಹಕಾರ.

ಮೀನ
ಮನೆಯಲ್ಲಿನ ಒತ್ತಡ, ಸಮಸ್ಯೆ ನಿವಾರಣೆ ಕಾಣುವ ಹಂತ ಬರಲಿದೆ. ಆರ್ಥಿಕ ಪರಿಸ್ಥಿತಿ ಸಮಾಧಾನಕರ. ಉಳಿತಾಯಕ್ಕೆ ಆದ್ಯತೆ ಕೊಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!