ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ನಿಮ್ಮ ಗುರಿ ಸಾಧಿಸುವ ಕಾರ್ಯದಲ್ಲಿ ಹಿಂಜರಿಕೆ ಬೇಡ. ಇತರರ ವಿರೋಧವನ್ನು ಲೆಕ್ಕಿಸಬೇಕಾಗಿಲ್ಲ. ಕೌಟುಂಬಿಕ ಸಹಕಾರ ಕಾಯ್ದುಕೊಳ್ಳಿ.
ವೃಷಭ
ನಿಮ್ಮ ಕೆಲಸ ಇತರರಿಗೆ ಪ್ರೇರಣೆ. ಸಾಮಾಜಿಕ ಕಾರ್ಯದಲ್ಲಿ ಮೆಚ್ಚುಗೆ ಪಡೆಯುವಿರಿ. ಹಾಗೆಂದು ಕೌಟುಂಬಿಕ ಸಮಸ್ಯೆ, ಬದ್ಧತೆ ಕಡೆಗಣಿಸಬೇಡಿ.
ಮಿಥುನ
ವೃತ್ತಿ ಕ್ಷೇತ್ರದಲ್ಲಿ ಇತರರ ಜಗಳದಲ್ಲಿ ನೀವು ಬಲಿಪಶು ಆಗಬಹುದು.ಅದಕ್ಕೆ ಅವಕಾಶ ಕೊಡಬೇಡಿ. ದೂರ ಉಳಿಯಿರಿ. ಕೌಟುಂಬಿಕ ಒತ್ತಡ ಹೆಚ್ಚಳ.
ಕಟಕ
ಮನಸ್ಸಿಗೆ ತೋಚಿದ್ದನ್ನೆಲ್ಲ ಮಾತನಾಡಬೇಡಿ. ಕೆಲವರಿಗೆ ಅದು ನೋವು ತಂದೀತು. ಮನಸ್ತಾಪಕ್ಕೆ ಕಾರಣವಾದೀತು. ಭಿನ್ನಾಭಿಪ್ರಾಯ ನಿವಾರಣೆ ಮುಖ್ಯ.
ಸಿಂಹ
ಇತರರ ಸಮಸ್ಯೆ ಪರಿಹರಿಸುವ ಹೊಣೆ ನಿಮ್ಮ ಮೇಲೆ ಬೀಳಬಹುದು. ನೀವೇ ಆ ಸಮಸ್ಯೆಯಲ್ಲಿ ಸಿಲುಕದಂತೆ ಎಚ್ಚರ ವಹಿಸಿರಿ.
ಕನ್ಯಾ
ದಿನವಿಡೀ ಆಲಸ್ಯ ಕಾಡುವುದು. ಪ್ರಮುಖ ಕಾರ್ಯ ಬಾಕಿ ಉಳಿದೀತು. ಕೌಟುಂಬಿಕ ಸಾಮರಸ್ಯಕೆಡಿಸುವ ಕಾರ್ಯಕ್ಕೆ ಕೈ ಹಾಕದಿರಿ. ಸಹನೆ ಮುಖ್ಯ.
ತುಲಾ
ಸಂಬಂಧದಲ್ಲಿ ಕೆಲವು ವಿಷಯಗಳು ಗೌಪ್ಯವಾಗಿಯೇ ಇರಬೇಕು. ಆ ಕುರಿತು ಬಹಿರಂಗ ಮಾತು ತರವಲ್ಲ. ಸಂಯಮ ಅತಿ ಮುಖ್ಯ.
ವೃಶ್ಚಿಕ
ನಿಮ್ಮ ಸಹನೆ ಕೆಣಕುವ ಪ್ರಸಂಗ ಸಂಭವಿಸೀತು. ಮಾನಸಿಕ ದೃಢತೆ ಕಾಯ್ದುಕೊಳ್ಳಿ. ಮನೆಯವರ ಹಿತಾಸಕ್ತಿ ಕಾಯುವುದು ನಿಮ್ಮ ಇಂದಿನ ಆದ್ಯತೆ.
ಧನು
ಅನುಚಿತ ಆಹಾರ ಸೇವನೆ ಉದರ ಸಂಬಂಧಿ ಅಸೌಖ್ಯಕ್ಕೆ ಕಾರಣವಾದೀತು. ಎಚ್ಚರಿಕೆ ತೆಗೆದುಕೊಳ್ಳಿ. ಕರ್ತವ್ಯದಲ್ಲಿ ಉದಾಸೀನತೆ ಒಳಿತಲ್ಲ.
ಮಕರ
ಸಂವಹನದ ಕೊರತೆಯಿಂದ ಆಪ್ತರಲ್ಲಿ ಭಿನ್ನಮತ ಹುಟ್ಟಿಕೊಳ್ಳಬಹುದು. ಮಾತುಕತೆಯಿಂದ ಪರಿಹರಿಸಿ. ಕೌಟುಂಬಿಕ ಅಸಹಕಾರ.
ಕುಂಭ
ಕರ್ತವ್ಯದಲ್ಲಿ ವಿಫಲತೆ ಉಂಟಾಗಬಹುದು. ಇದರಿಂದ ಟೀಕೆಗೆ ಗುರಿಯಾಗುವಿರಿ. ಆರೋಗ್ಯದತ್ತ ಗಮನ ಕೊಡಿ. ಪಥ್ಯಾಹಾರ ಒಳಿತು.
ಮೀನ
ಅನವಶ್ಯ ಖರ್ಚು ಒದಗಿ ಬರಬಹುದು. ಅದನ್ನು ನಿವಾರಿಸಲು ಯತ್ನಿಸಿ. ನಿಮ್ಮ ಆರೋಗ್ಯದ ಕುರಿತಂತೆ ಎಚ್ಚರಿಕೆ ವಹಿಸಬೇಕು. ಮಿತಾಹಾರ ಮುಖ್ಯ.