Saturday, December 9, 2023

Latest Posts

ದಿನಭವಿಷ್ಯ| ಸಣ್ಣಪುಟ್ಟ ವಿಚಾರಗಳು ನಿಮ್ಮ ಸಂತೋಷ ಹಾಳುಗೆಡವುತ್ತವೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಆರ್ಥಿಕ ಪರಿಸ್ಥಿತಿ ಚಿಂತೆ ತರುತ್ತದೆ. ಸಣ್ಣಪುಟ್ಟ ವಿಚಾರಗಳು ನಿಮ್ಮ ಸಂತೋಷ ಹಾಳುಗೆಡವುತ್ತವೆ. ಏನಿದ್ದರೂ ನಿಮ್ಮ ವಿಶ್ವಾಸ ಕುಂದದಿರಲಿ.

ವೃಷಭ
ಕೆಲದಿನಗಳಿಂದ ಕಾಡುತ್ತಿದ್ದ ಆರ್ಥಿಕ ತೊಂದರೆಯು ಕೊನೆಗೂ ಪರಿಹಾರ ಕಾಣಲಿದೆ. ಇದರಿಂದ ಅವಶ್ಯ ಖರ್ಚುವೆಚ್ಚ ಸರಿದೂಗಿಸುವಿರಿ.

ಮಿಥುನ
ಬೇಗ ಕೆಲಸ ಮುಗಿಸಿ, ಸಂಜೆಯ ವೇಳಗೆ ವಿಶ್ರಾಂತಿ ಪಡೆಯು ವುದನ್ನು ಕಾಯುತ್ತೀರಿ. ಕೆಲಸದೊತ್ತಡ ಮನೆಯಲ್ಲೂ ಬೆಂಬಿಡದು.

ಕಟಕ
ಪ್ರಮುಖ ಸಾಧನೆ ಯೊಂದನ್ನು ಮಾಡುತ್ತೀರಿ. ಎಲ್ಲರಿಂದ ಮೆಚ್ಚುಗೆ. ಭಾವನಾ
ತ್ಮಕವಾಗಿ ಹೆಚ್ಚು ಸಂತೋಷದ ಬೆಳವಣಿಗೆ. ಆರ್ಥಿಕ ಉನ್ನತಿ.

ಸಿಂಹ
ಹಣಕಾಸು ವಿಚಾರಕ್ಕೆ ಸಂಬಂಧಿಸಿ  ಹೆಚ್ಚು ಕಾರ್ಯನಿರತ. ಕೆಲಸದಲ್ಲಿ ಕೆಲವು ಗೋಜಲು ಉಂಟಾಗ ಬಹುದು. ಅದನ್ನು ನಿವಾರಿಸುವಲ್ಲಿ ವ್ಯಸ್ತ.

ಕನ್ಯಾ
ಗತಕಾಲದ ಆಪ್ತರು ಭೇಟಿಯಾಗಬಹುದು. ಅವರ ಸಂಗದಲ್ಲಿ ಸಂತೋಷ ಪಡುವಿರಿ. ಯುವಕರಿಗೆ ಪ್ರೇಮದ ಆಕರ್ಷಣೆ. ಅಧ್ಯಯನ ಕಡೆಗಣಿಸದಿರಿ.

ತುಲಾ
ಲಾಭ -ನಷ್ಟಗಳಿಲ್ಲದ ಸಮತೋಲಿತ ದಿನ. ಕುಟುಂಬ ಸದಸ್ಯರು ನಿಮ್ಮಿಂದ ಕೆಲವನ್ನು ನಿರೀಕ್ಷಿಸುತ್ತಾರೆ.  ಅವರ ಬೇಡಿಕೆಗಳಿಗೆ ಸ್ಪಂದಿಸುವುದು ಒಳಿತು.

ವೃಶ್ಚಿಕ
ಕೆಲವು ವಿಚಾರಗಳಲ್ಲಿ ಇಂದು ನಿಮಗೆ ನಿರಾಶೆ ಕಾದಿದೆ. ಹಣಕಾಸು, ಕೌಟುಂಬಿಕ ವ್ಯವಹಾರ ಮತ್ತು ಸಂಬಂಧದಲ್ಲಿ ಹಿನ್ನಡೆ ಅನುಭವಿಸುವಿರಿ. ಸಹನೆಯಿರಲಿ.

ಧನು
ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ. ಗತದಿನಗಳ ಮೆಲುಕು. ಕೌಟುಂಬಿಕ ಹೊಣೆಗಾರಿಕೆಗಳು ಮಾನಸಿಕ ಒತ್ತಡ ಹೇರುತ್ತವೆ.

ಮಕರ
ನಿಮ್ಮ ಮನದಾಳದ ಭಾವವನ್ನು ಆಪ್ತರೊಂದಿಗೆ ಹಂಚಿಕೊಳ್ಳುವ ಪ್ರಸಂಗ ಉದ್ಭವಿಸಬಹುದು. ಅದರಿಂದ ಮನಸ್ಸಿಗೆ ನಿರಾಳತೆ.

ಕುಂಭ
ನಿಮ್ಮ ಕಾರ್ಯವೈಖರಿ ಕೆಲವರಿಂದ  ಪ್ರಶ್ನಿಸಲ್ಪಡುವುದು.  ಅದನ್ನು ನಿರ್ಲಕ್ಷಿಸದಿರಿ. ಅದರ ಕುರಿತು ಗಮನ ಹರಿಸಿ ಕ್ರಮ ತೆಗೆದುಕೊಳ್ಳಿ.

ಮೀನ
ಬಾಹ್ಯ ಸೌಂದರ್ಯಕ್ಕೆ ನೀವಿಂದು ವಿಶೇಷ  ಗಮನ ಕೊಡುವಿರಿ. ಯಾರನ್ನೋ ಮೆಚ್ಚಿಸುವ ಪ್ರಯತ್ನ ನಿಮ್ಮದು. ಒಟ್ಟಾಗಿ ಸಂತೋಷದ ದಿನ ಕಳೆಯುವಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!