ದಿನಭವಿಷ್ಯ| ಗ್ರಹಗತಿ ಇಂದು ನಿಮ್ಮ ಭಾವನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಯಾವುದೇ ವ್ಯವಹಾರ ಗಂಭೀರವಾಗಿ ಪರಿಗಣಿಸಿ. ನಿರ್ಲಕ್ಷ್ಯದ ಧೋರಣೆ  ಹಾನಿ ತಂದೀತು. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಸಮಸ್ಯೆ.

ವೃಷಭ
ಕೌಟುಂಬಿಕ ಭಿನ್ನಮತ ನಿವಾರಣೆ. ಸೌಹಾರ್ದ ನೆಲೆಸುವುದು. ಮುಖ್ಯ ವ್ಯವಹಾರಕ್ಕೆ ಹಣಕಾಸು ಹೊಂದಿಕೆ ಕಷ್ಟವಾದೀತು. ಇತರರ ನೆರವು ನಿರೀಕ್ಷಿಸದಿರಿ.

ಮಿಥುನ
ನಿಮ್ಮ ಜತೆಗೇ ಇರುವ ವ್ಯಕ್ತಿಯಿಂದ ಸಮಸ್ಯೆ ಉದ್ಭವವಾದೀತು. ಜಾಣತನದಿಂದ ನಿಭಾಯಿಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶ.

ಕಟಕ
ಉತ್ಸಾಹದ ದಿನ. ನಿಮ್ಮ ಕಾರ್ಯವನ್ನು ಸುಗಮವಾಗಿ ನೆರವೇರಿಸಲು ಸೂಕ್ತ ಪರಿಸ್ಥಿತಿ ನಿರ್ಮಾಣ. ಅಡ್ಡಿಗಳು ನಿವಾರಣೆ. ಖರ್ಚು ಹೆಚ್ಚಳ.

ಸಿಂಹ
ಬಾಂಧವ್ಯಕ್ಕೆ ಸಂಬಂಧಿಸಿದ ವಿಚಾರವೊಂದು ಮನಸ್ಸಿನ ಶಾಂತಿ ಕದಡುವುದು. ಅದಕ್ಕೆ ಸೌಹಾರ್ದ ಪರಿಹಾರವೇ ಸೂಕ್ತ. ಕಠಿಣ ನಿಲುವು ತಳೆಯಬೇಡಿ.

ಕನ್ಯಾ
ಹಲವಾರು ವಿವಾದಗಳು ನಿಮ್ಮನ್ನು ಸುತ್ತುವರಿಯಬಹುದು. ಅದರಿಂದ ಹೊರಬರಲು ಸಹನೆಯಿಂದ ಮತ್ತು ಕೌಶಲ್ಯದಿಂದ ವರ್ತಿಸಿ. ಸಂಘರ್ಷ ಒಳಿತಲ್ಲ.

ತುಲಾ
ಇತರರ ವ್ಯವಹಾರದಲ್ಲಿ ಮೂಗು ತೂರಿಸದಿರಿ. ಅದು ನಿಮ್ಮನ್ನೇ ಇಕ್ಕಟ್ಟಿಗೆ ಸಿಲುಕಿಸಬಹುದು. ಇತರರ ಕುರಿತಾದ ಅಸೂಯೆ ನಿಮ್ಮ ಮನಸ್ಸನ್ನೆ ಕೆಡಿಸುವುದು.

ವೃಶ್ಚಿಕ
ನಿಮ್ಮ ಬಹುಕಾಲದ ಅಭಿಪ್ರಾಯ ಬದಲಿಸುವ ಪ್ರಸಂಗ ಒದಗೀತು. ಯಾರನ್ನೂ ಕಡೆಗಣಿಸದಿರಿ. ಅನಿರೀಕ್ಷಿತ ವಲಯದಿಂದ ನೆರವು ಪಡೆಯುವಿರಿ.

ಧನು
ಕುಟುಂಬ ಸದಸ್ಯರಿಂದ ಮನೆಯ ಶಾಂತಿ ಕೆಡಬಹುದು. ಅವರ ವರ್ತನೆಗೆ ಕಡಿವಾಣ ಹಾಕಲು ಯತ್ನಿಸಿ. ವಿದ್ಯಾರ್ಥಿಗಳಿಗೆ ಕಠಿಣ ದಿನ ಕಾದಿದೆ.

ಮಕರ
ದಿನವಿಡೀ ಹಲವಾರು ಕಾರ್ಯಗಳ ಒತ್ತಡ. ಅದರ ಜತೆಗೇ ವ್ಯಕ್ತಿಯೊಬ್ಬರು ನಿಮಗೆ ಸಮಸ್ಯೆ ಸೃಷ್ಟಿಸುತ್ತಾರೆ. ಸಂಯಮ ಕಳಕೊಳ್ಳದಿರಿ.

ಕುಂಭ
ಹಣದ ಸಮಸ್ಯೆ ಪರಿಹರಿಸಲು ಹೊಸ ಹಾದಿ ಹಿಡಿಯುವ ತುಡಿತ ಮೂಡಬಹುದು ಆದರೆ ಯಾವುದಕ್ಕೂ ಎಚ್ಚರದಿಂದ  ಹೆಜ್ಜೆಯಿಡಿ.

ಮೀನ
ಗ್ರಹಗತಿ ಇಂದು ನಿಮ್ಮ ಭಾವನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಪ್ರೀತಿ, ದ್ವೇಷ ಎರಡನ್ನೂ ಅತಿಯಾಗಿ ಅನುಭವಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!