ದಿನಭವಿಷ್ಯ| ಮಹತ್ವದ ನಿರ್ಧಾರ ತಾಳಲು ಹೋಗದಿರಿ, ನಿರೀಕ್ಷಿತ ಫಲ ನೀಡದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಇಂದು ಅದೃಷ್ಟ ನಿಮ್ಮ ಜತೆಗಿದೆ. ಹಾಗಾಗಿ ಎಲ್ಲ ಕಾರ್ಯಗಳು ಸಫಲ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ವೃತ್ತಿಯಲ್ಲಿ ಹೊಸ ಚಿಂತನೆ ಅಳವಡಿಸಲು ಸಕಾಲ.

ವೃಷಭ
ದಿನವಿಡೀ ಕಾರ್ಯದ ಒತ್ತಡ. ಹೆಚ್ಚಿನ ಹೊಣೆಗಾರಿಕೆ. ನಿಮ್ಮ ಯೋಜನೆ ಸಫಲತೆ ಕಾಣುವುದು. ಕುಟುಂಬದ ಜತೆ ಹೆಚ್ಚು ಕಾಲ ಕಳೆಯುವಿರಿ.

ಮಿಥುನ
ಪ್ರೀತಿಪಾತ್ರರ ಜತೆ ವಾಗ್ವಾದ ನಡೆದೀತು. ಅವರ ಅಭಿಪ್ರಾಯಕ್ಕೂ ಮನ್ನಣೆ ನೀಡಲು ಕಲಿತರೆ ಇಂತಹ ಸಂಘರ್ಷ ನಿವಾರಿಸಬಹುದು.

ಕಟಕ
ಇಂದು ಮಹತ್ವದ ನಿರ್ಧಾರ ತಾಳಲು ಹೋಗದಿರಿ. ಅದು ನಿರೀಕ್ಷಿತ ಫಲ ನೀಡದು. ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಮೂಡುವುದು.

ಸಿಂಹ
ಪ್ರೀತಿಯ ವಿಷಯದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಬೆಳವಣಿಗೆ ನಡೆದೀತು. ಪರಿಸ್ಥಿತಿಯನ್ನು ಸಂಯಮದಿಂದ ನಿಭಾಯಿಸಿ. ಆವೇಶ ಪಡದಿರಿ.

ಕನ್ಯಾ
ಖರೀದಿಯ ಹುಮ್ಮಸ್ಸಿನಿಂದ ಜೇಬಿಗೆ ಕತ್ತರಿ ಬೀಳಬಹುದು. ಉಳಿತಾಯಕ್ಕೂ ಗಮನ ಕೊಡಿ. ವೃತ್ತಿಯಲ್ಲಿ ಶಾಂತ ಮನಸ್ಸಿನಿಂದ ವರ್ತಿಸಿರಿ. ಜಗಳಕ್ಕೆ ಹೋಗದಿರಿ.

ತುಲಾ
ಖಾಸಗಿ ಬದುಕಿನಲ್ಲಿ ಕೆಲವು ಸವಾಲು ಎದುರಿಸುವಿರಿ. ಕೆಲವರ ಅಸಹಕಾರ ನಿಮ್ಮ ಸಮಸ್ಯೆ ಹೆಚ್ಚಿಸುವುದು. ಸಮಾಧಾನಚಿತ್ತರಾಗಿ ಪರಿಸ್ಥಿತಿ ನಿಭಾಯಿಸಿ.

ವೃಶ್ಚಿಕ
ಹೆಚ್ಚು ಹೊಣೆಗಾರಿಕೆ. ಇತರರ ಕೆಲಸವನ್ನೂ ನೀವೇ ಮಾಡಬೇಕಾದ ಪ್ರಸಂಗ. ಆರ್ಥಿಕ ವ್ಯವಹಾರದಲ್ಲಿ ಲಾಭ. ಬಂಧುಗಳಿಂದ ಉತ್ತಮ ಸಹಕಾರ.

ಧನು
ಕುಟುಂಬಕ್ಕೆ ಇಂದು ಆದ್ಯತೆ ಕೊಡಬೇಕಾದ ಸನ್ನಿವೇಶ. ಬಂಧುಗಳ ಸಹಕಾರ. ಕಠಿಣ ಕಾರ್ಯಗಳೂ ಸುಲಭವಾಗಿ ನೆರವೇರುತ್ತವೆ.

ಮಕರ
ಆಪ್ತರ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಅನಿರೀಕ್ಷಿತ ಧನಲಾಭ. ಕಾರ್ಯ ಸಾಫಲ್ಯ.

ಕುಂಭ
ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ಯಶಸ್ವಿ ದಿನ.  ಉದ್ದೇಶ ಈಡೇರಿಕೆ. ಪ್ರೀತಿಪಾತ್ರರ ಮನಸ್ಸು ಗೆಲ್ಲುವಿರಿ. ಆರ್ಥಿಕವಾಗಿ ಲಾಭಕರ ಬೆಳವಣಿಗೆ.

ಮೀನ
ಕೆಲಸದಲ್ಲಿ ಸವಾಲು ಎದುರಿಸುವಿರಿ. ಆದರೆ ಆತ್ಮವಿಶ್ವಾಕ ಕಳಕೊಳ್ಳದಿರಿ. ಅಂತಿಮವಾಗಿ ಎಲ್ಲವೂ ನಿಮ್ಮ ಪರವಾಗಿ ನಡೆಯುವುದು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!