ಮೇಷ
ನಿಮ್ಮ ಆಪ್ತರ ಭಾವನೆಗಳನ್ನು ಗೌರವಿಸಿ. ಅವರ ನೋವಿನ ಕಾರಣ ಅರಿಯಿರಿ. ನಿಮ್ಮ ಅಭಿಪ್ರಾಯ ಇತರರ ಮನ ನೋಯಿಸದಿರಲಿ.
ವೃಷಭ
ಹೊಸ ಅವಕಾಶ ಒದಗಿಬರಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಭವಿಷ್ಯದ ಕುರಿತಾದ ಅನಿಶ್ಚಿತತೆ ಇಂದು ಕೊನೆಗೊಂಡೀತು.
ಮಿಥುನ
ಮನೆಯಲ್ಲಿ ಕಾರ್ಯದೊತ್ತಡ. ಬಂಧುಗಳಿಂದ ಕಿರಿಕಿರಿ. ಅವರು ಕೌಟುಂಬಿಕ ಸಮಸ್ಯೆಗೆ ಕಾರಣರಾಗುತ್ತಾರೆ. ಅವರನ್ನು ದೂರವಿಡಿ.
ಕಟಕ
ನಿಮ್ಮ ವರ್ತನೆ ಕೆಲವರ ಮನ ನೋಯಿಸಬಹುದು. ಇದರಿಂದ ಸಂಬಂಧದಲ್ಲಿ ಏರುಪೇರು. ಆರೋಗ್ಯ ಸಮಸ್ಯೆ ಉಂಟಾದೀತು. ಹಣದ ಕೊರತೆ.
ಸಿಂಹ
ನಿಮ್ಮ ಸಾಮರ್ಥ್ಯಕ್ಕೆ ನಿಲುಕದ ವಿಷಯದತ್ತ ಕೈಚಾಚದಿರಿ. ನಿರಾಶೆಯಾದೀತು. ಆಪ್ತರೆನಿಸಿದವರೇ ಇಂದು ನಿಮ್ಮಿಂದ ದೂರ ಸರಿಯಬಹುದು.
ಕನ್ಯಾ
ಇಂದು ಖರ್ಚು ಅಧಿಕ. ಆಪ್ತರ ಜತೆ ಭಾವನೆ ಹಂಚಿಕೊಳ್ಳುವಾಗ ಎಚ್ಚರ ವಹಿಸಿ. ಕೆಲ ವಿಷಯ ಮುಚ್ಚಿಡುವುದು ನಿಮಗೇ ಒಳ್ಳೆಯದು.
ತುಲಾ
ಕೌಟುಂಬಿಕ ಸಂಭ್ರಮಾಚರಣೆ. ಆದರೆ ವೃತ್ತಿಯಲ್ಲಿ ಒತ್ತಡ ಅನುಭವಿಸುತ್ತೀರಿ. ಸಹೋದ್ಯೋಗಿಗಳ ಅಸಹಕಾರ. ಆರೋಗ್ಯ ಸಮಸ್ಯೆ.
ವೃಶ್ಚಿಕ
ದೂರವಾಗಿದ್ದ ಆಪ್ತರೊಂದಿಗೆ ಮತ್ತೆ ಸೇರಿಕೊಳ್ಳುತ್ತೀರಿ. ಅವರ ಸಂಗದಲ್ಲಿ ಸಂತೋಷ. ವದಂತಿ ಹರಡುವ ಜನರಿಂದ ದೂರವಿರಿ. ಆರ್ಥಿಕ ಒತ್ತಡ.
ಧನು
ಕಾಲಮಿತಿಯಲ್ಲಿ ಕಾರ್ಯ ಪೂರೈಸಬೇಕಾದ ಒತ್ತಡ. ಮಿತ್ರರೇ ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ಕೌಟುಂಬಿಕ ಒತ್ತಡ ಹೆಚ್ಚುವುದು.
ಮಕರ
ನಿಮ್ಮ ಆಪ್ತರ ಖಾಸಗಿ ಬದುಕಿನಲ್ಲಿ ಹೊಸ ವ್ಯಕ್ತಿಯ ಪ್ರವೇಶ. ಇದರಿಂದ ನಿಮಗೆ ಭಾವನಾತ್ಮಕ ಏರುಪೇರು. ಸಹನೆ ಕಾಯ್ದುಕೊಳ್ಳಿ.
ಕುಂಭ
ಖಾಸಗಿ ಬದುಕಲ್ಲಿ ಸಮಸ್ಯೆಗಳು. ಬಳಿಕ ತಾನೇತಾನಾಗಿ ಪರಿಹಾರ. ಇತರರಿಗೆ ನೆರವು ನೀಡಲು ಮನ ಮಾಡುತ್ತೀರಿ. ಆರ್ಥಿಕ ಸುಧಾರಣೆ.
ಮೀನ
ವೈಯಕ್ತಿಕ ಹಿತಾಸಕ್ತಿ ಗಳನ್ನು ಈಡೇರಿಸಲು ಆದ್ಯತೆ ಕೊಡುತ್ತೀರಿ. ಕುಟುಂಬಸ್ಥರ ಹಿತಾಸಕ್ತಿಯನ್ನೂ ನೋಡಿಕೊಳ್ಳಿ. ವೃತ್ತಿಯಲ್ಲಿ ಪೈಪೋಟಿ.