ದಿನಭವಿಷ್ಯ| ದಿನದ ಬಹುತೇಕ ನಿಮ್ಮದೇ ಆದ ಸಂತೋಷದಲ್ಲಿ ಕಳೆಯುವಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಮೇಷ
ಇಂದು ಮಹತ್ವದ್ದೇನೂ ಘಟಿಸಲಾರದು. ದಿನದ ಬಹುತೇಕ ನಿಮ್ಮದೇ ಆದ ಸಂತೋಷದಲ್ಲಿ ಕಳೆಯುವಿರಿ. ಪ್ರೀತಿಯ ವ್ಯಕ್ತಿಗಳನ್ನು ಭೇಟಿಯಾಗುವಿರಿ.

ವೃಷಭ
ಅತೀ ಸಣ್ಣ ವಿಷಯಕ್ಕೂ ಗಮನ ಕೊಡಿ. ಪ್ರಮುಖ ವಿಷಯಗಳಲ್ಲಿ ನಿಮ್ಮ ಅಜ್ಞಾನವೇ ನಿಮಗೆ ಸಮಸ್ಯೆಯಾಗುವುದು. ಎಲ್ಲರನ್ನು ಮೆಚ್ಚಿಸುವ ಪ್ರಯತ್ನ ಮಾಡದಿರಿ.

ಮಿಥುನ
ಹಳೆಯ ವೈರ ಮರೆಯಿರಿ. ತಪ್ಪು ಕಲ್ಪನೆ ಸರಿಪಡಿಸಿಕೊಳ್ಳಿ. ಕಷ್ಟದಲ್ಲೂ ನಗುವುದನ್ನು ಮರೆಯದಿರಿ. ಅನಿರೀಕ್ಷಿತ ನೆರವು ಒದಗಿಬರಲಿದೆ.

ಕಟಕ
ಸಂಬಂಧದಲ್ಲಿ ಏರುಪೇರು ಸಂಭವಿಸೀತು. ವೈರವನ್ನು ಮನದಲ್ಲಿಟ್ಟು ಕೊರಗಬೇಡಿ. ಮುಕ್ತ ಮಾತುಕತೆಯಿಂದ ವೈಮನಸ್ಸು ಪರಿಹಾರ.

ಸಿಂಹ
ಸಹದ್ಯೋಗಿಗಳ ಜತೆ ಸಂಘರ್ಷ ತಪ್ಪಿಸಿ. ಅವರ ಕೆಲವು ವರ್ತನೆ ನಿಮಗೆ ಸರಿ ಕಾಣದಿರಬಹುದು. ಆದರೆ ಹೊಂದಿಕೊಂಡು ಹೋಗುವುದು ನಿಮಗಿಂದು ಮುಖ್ಯ.

ಕನ್ಯಾ
ಉದ್ಯಮಿಗಳಿಗೆ, ವ್ಯವಹಾರಸ್ಥರಿಗೆ ಇಂದು ಸುದಿನ. ಆರ್ಥಿಕ ಲಾಭ. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಒಟ್ಟಿನಲ್ಲಿ ಹೆಚ್ಚು ಸಂತೋಷದ ಮತ್ತು ನೆಮ್ಮದಿಯ ದಿನ.

ತುಲಾ
ವೃತ್ತಿಯ ಒತ್ತಡವನ್ನು ಮನೆಯ ಪರಿಸರದಲ್ಲಿ ಮರೆಯಲು ಯತ್ನಿಸುವಿರಿ. ಕೆಲವು ಸಾಂಸಾರಿಕ ಸಮಸ್ಯೆ ಕಾಡಿದರೂ ಬೇಗ ಪರಿಹಾರ.

ವೃಶ್ಚಿಕ
ನಿಮ್ಮ ಆತ್ಮೀಯ ಭಾವನೆ ಹಂಚಿಕೊಳ್ಳುವ ತುಡಿತ. ಸೂಕ್ತ ವ್ಯಕ್ತಿಗಳ ಜತೆಗೆ ಮಾತ್ರ ಅದನ್ನು ಹಂಚಿಕೊಳ್ಳಿ. ವೃಥಾ ವದಂತಿ ಹುಟ್ಟು ಹಾಕದಿರಿ. ಆರ್ಥಿಕ ಒತ್ತಡ.

ಧನು
ಬುದ್ಧಿವಂತಿಕೆಯಿಂದ ನಿಮ್ಮ ನಿರ್ಧಾರ ತಳೆಯಿರಿ. ಇಲ್ಲವಾದರೆ ಅದು ಪ್ರತಿಕೂಲ ಆದೀತು. ಕೌಟುಂಬಿಕ ಪರಿಸ್ಥಿತಿ ತೃಪ್ತಿದಾಯಕ.  ಪರಸ್ಪರ ಸಹಕಾರ.

ಮಕರ
ಭಾವನಾತ್ಮಕ ಸವಾಲು ಎದುರಿಸುವಿರಿ. ಭಾವುಕ ಪ್ರಸಂಗವನ್ನು ಹೇಗೆ ನಿಭಾಯಿಸಬೇಕು ಎಂದು ಅರಿಯದೆ ಗೊಂದಲ.ಇತರರ ಸಲಹೆ ಪಡೆಯಿರಿ.

ಕುಂಭ
ಕೌಟುಂಬಿಕ ವಿಚಾರಗಳು ಆದ್ಯತೆ ಪಡೆಯುತ್ತವೆ. ಕೆಲವು ಬೆಳವಣಿಗೆ ಮನಸ್ಸಿಗೆ ಕಿರಿಕಿರಿ ಎನಿಸಬಹುದು. ಅದನ್ನು ಸಮಾಧಾನದಿಂದ ನಿಭಾಯಿಸಿ.

ಮೀನ
ಎಲ್ಲವೂ ತೋರಿಕೆಯ ವರ್ತನೆಗಳು, ಯಾರೂ ಪ್ರಾಮಾಣಿಕರಲ್ಲ ಎಂಬಂತಹ ಭಾವನೆ ನಿಮ್ಮನ್ನು ಕಾಡಬಹುದು. ಮನದಲ್ಲಿ ನಿರಾಶೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!