ದಿನಭವಿಷ್ಯ| ವಾಹನ ಖರೀದಿಯ ಬಯಕೆ ಕೈಗೂಡಬಹುದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಅನಿರೀಕ್ಷಿತಗಳ ದಿನ. ಅವೆಲ್ಲವೂ ನಿಮಗೆ ಪೂರಕವಾಗಲಿದೆ.  ಕಾಡುತ್ತಿದ್ದ ಸಮಸ್ಯೆ ಪರಿಹಾರ ಕಾಣಲಿದೆ. ಕೌಟುಂಬಿಕ ಬಿಕ್ಕಟ್ಟು ನಿವಾರಣೆ.

ವೃಷಭ
ಖಾಸಗಿ ಬದುಕಿನಲ್ಲಿ ಸಮಸ್ಯೆ ಎದುರಿಸುವಿರಿ. ಕುಟುಂಬ ಸದಸ್ಯರಲ್ಲಿ ಅನಾರೋಗ್ಯ. ಹಣದ ಕೊರತೆ. ಇದೆಲ್ಲ ತಾತ್ಕಾಲಿಕ, ಹೆಚ್ಚು
ಚಿಂತೆ ಮಾಡದಿರಿ.

ಮಿಥುನ
ಕನಸು ನನಸಾಗಲಿದೆ. ವಾಹನ ಖರೀದಿಯ ಬಯಕೆ ಕೈಗೂಡ ಬಹುದು. ಆರ್ಥಿಕ ಸಮಸ್ಯೆ ಪರಿಹಾರ. ಆಪ್ತ ರೊಬ್ಬರಿಂದ ನೆರವು ದೊರಕುವುದು.

ಕಟಕ
ಕೆಲಸದಲ್ಲಿ ಕೆಲವು ತೊಡಕುಗಳನ್ನು ಎದುರಿಸುವಿರಿ. ಇತರರು ಬೇಕೆಂದೇ ನಿಮಗೆ ಕಿರುಕುಳವನ್ನೂ ನೀಡುವರು. ಮಾನಸಿಕ ಶಾಂತಿ ದೂರ.

ಸಿಂಹ
ಕೆಲವರ ನೇರ ಮಾತುಗಳು ನಿಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಬಹುದು. ಆದರೆ ನಿಮ್ಮ ಕೊರತೆ ಎತ್ತಿ ತೋರಿದರೆ ಅದನ್ನು ಸರಿಪಡಿಸಿಕೊಳ್ಳಿ.

ಕನ್ಯಾ
ಇಂದು ನಿಮ್ಮ ದಿನ. ನಿಮ್ಮ ಮಾತು ಎಲ್ಲೆಡೆ ನಡೆಯುವುದು. ಎಲ್ಲರೂ ನಿಮ್ಮನ್ನು ಅನುಸರಿಸುವರು. ಕೌಟುಂಬಿಕವಾಗಿ ಹಬ್ಬದ ವಾತಾವರಣ.

ತುಲಾ
ಮುಂಜಾನೆ ಎಲ್ಲವೂ ಮಾಮೂಲಿನಂತೆ ಸಾಗುವುದು. ಆದರೆ ಅಪರಾಹ್ನ ನೀವು ನಿರೀಕ್ಷಿಸಿರದ ಬೆಳವಣಿಗೆ ಸಂಭವಿಸುವುದು. ಆರ್ಥಿಕ ಕೊರತೆ.

ವೃಶ್ಚಿಕ
ಸಂಬಂಧವೊಂದನ್ನು ಮರುಸ್ಥಾಪಿಸಲು ನೀವು ಯತ್ನಿಸುವಿರಿ. ಅವರ ಸಂಪರ್ಕ ಸಾಧಿಸಲು ಯತ್ನಿಸುವಿರಿ. ಆದರೆ ನಿಮ್ಮ ಪ್ರಯತ್ನ ಪೂರ್ಣ ಫಲ ಕಾಣದು.

ಧನು
ಇತ್ತೀಚಿನ ನಿಮ್ಮ ಕೆಲವು ಸಮಸ್ಯೆಗಳಿಗೆ ನಿಮ್ಮ ಭಾವುಕತೆಯೇ ಕಾರಣ. ಆದ್ದರಿಂದ ಮಾನಸಿಕ ದಾರ್ಢ್ಯತೆ ಬೆಳೆಸಿಕೊಳ್ಳಿ. ಕುಟುಂಬಸ್ಥರ ಸಂಗದಲ್ಲಿ ಸಮಾಧಾನ.

ಮಕರ
ನಿಮ್ಮ ದಾರಿಯಲ್ಲಿ ಇಂದು ಅನಿರೀಕ್ಷಿತ ತಿರುವುಗಳು. ನಿಮ್ಮ ಪ್ರಬುದ್ಧತೆಯಿಂದ ಸರಿಯಾಗಿ ನಿಭಾಯಿಸು ವಿರಿ. ದೀರ್ಘಕಾಲೀನ ಸಮಸ್ಯೆ ಇತ್ಯರ್ಥ.

ಕುಂಭ
ಹಣದ ಕೊರತೆಯಿಂದ  ಪ್ರಮುಖ ವ್ಯವಹಾರಕ್ಕೆ ಅಡ್ಡಿ. ಸಂಜೆ ವೇಳೆಗೆ ಸಮಸ್ಯೆಯಿಂದ ಹೊರಬರುವಿರಿ. ಕೌಟುಂಬಿಕವಾಗಿ ಸಮಾಧಾನ.

ಮೀನ
ಮನಸ್ಸಿನಲ್ಲಿ ತೀವ್ರ ಆಕ್ರೋಶ. ಸಣ್ಣಪುಟ್ಟ ಕಾರಣಕ್ಕೂ ರೇಗುವಿರಿ. ರೋಷ ಕಾರುವುದರಿಂದ ಪ್ರಯೋಜನವಾಗದು. ಸಹನೆಯಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!