Monday, March 27, 2023

Latest Posts

ದಿನಭವಿಷ್ಯ| ಸಕ್ಕರೆ ಹಚ್ಚಿದ ಮಾತುಗಳನ್ನು ನಂಬಬೇಡಿ ವಿವೇಚಿಸಿ, ನಿರ್ಧರಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ವಿಶೇಷವಾದುದನ್ನು ಸಾಧಿಸುವಿರಿ. ಎಲ್ಲರ ಗಮನ ಸೆಳೆಯುವಿರಿ. ಆಸ್ತಿಪಾಸ್ತಿಗೆ ಸಂಬಂಧಿಸಿ ಹಿನ್ನಡೆ ಉಂಟಾದೀತು. ವೃತ್ತಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಸಂಭವ.

ವೃಷಭ
ಎಂದಿನಂತಿಲ್ಲದ ದಿನ. ಅದಕ್ಕೆ ನಿಮ್ಮ ಮನೋಭಾವ ಕಾರಣ. ಉತ್ಸಾಹ ಕಡಿಮೆ. ಯಾವುದಕ್ಕೂ ಕ್ಷಿಪ್ರವಾಗಿ ಸ್ಪಂದಿಸಲಾರಿರಿ. ಕೆಲಸದಲ್ಲಿ ತಪ್ಪಾದೀತು.

ಮಿಥುನ
ಖರ್ಚು ಹೆಚ್ಚಬಹುದು. ಕಂಡದ್ದನ್ನೆಲ್ಲ ಖರೀದಿಸಬೇಕು ಎಂಬ ಮನೋಭಾವ ತ್ಯಜಿಸಿ. ತಿನ್ನುವುದರಲ್ಲೂ ಹಿತಮಿತ ಸಾಧಿಸಿ, ಹೊಟ್ಟೆಯ ಸಮಸ್ಯೆ ನಿವಾರಿಸಿ.

ಕಟಕ
ನಯವಂಚಕರ ಕುರಿತು ಎಚ್ಚರವಿರಲಿ. ಪರಿಸ್ಥಿತಿಯೂ ಹಠಾತ್ತನೆ ನಿಮಗೆ ವಿರುದ್ಧವಾಗಿ ತಿರುಗೀತು. ಹತಾಶೆ ಹೆಚ್ಚಳ. ಶಾಂತಚಿತ್ತ ಕಾಯ್ದುಕೊಳ್ಳಿ.

ಸಿಂಹ
ಕಾರ್ಯದಲ್ಲಿ ನಿರುತ್ಸಾಹ. ಪ್ರತಿಕೂಲ ಪರಿಸ್ಥಿತಿಗೆ ಬೇಗನೆ ಶರಣಾಗುವಿರಿ. ಅದನ್ನು ಎದುರಿಸಿ ನಿಲ್ಲುವ ತಾಕತ್ತು ಪ್ರದರ್ಶಿಸುವುದಿಲ್ಲ. ಈ ಮನಸ್ಥಿತಿ ಬದಲಿಸಿಕೊಳ್ಳಿ.

ಕನ್ಯಾ
ಹಣಕಾಸು ಸಮಸ್ಯೆ. ಇತರರು ಹೇಳಿದ್ದೆಲ್ಲ ನಂಬಬೇಡಿ. ನಿಮ್ಮ ಸುತ್ತಲಿರುವ ವಿರೋಧಿಗಳ ಕುರಿತು ಎಚ್ಚರವಿರಲಿ. ಅನುಕೂಲ ಕಾಲ ಬಂದೇ ಬರುವುದು.

ತುಲಾ
ಕೆಲವರು ನಿಮ್ಮನ್ನು ತಪ್ಪುದಾರಿಗೆ ಎಳೆಯಲು ಯತ್ನಿಸುವರು. ಅದಕ್ಕೆ ಮರುಳಾಗದಿರಿ.ಸಕ್ಕರೆ ಹಚ್ಚಿದ ಮಾತುಗಳನ್ನು ನಂಬಬೇಡಿ. ವಿವೇಚಿಸಿ ನಿರ್ಧರಿಸಿ.

ವೃಶ್ಚಿಕ
ಕೆಲಸದಲ್ಲಿ ಗಮನ ನೀಡಲಾಗುವುದಿಲ್ಲ. ಮನೆಯ ಮತ್ತು ಆಪ್ತರ ಕುರಿತಾದ ಚಿಂತೆಯಲ್ಲಿ ಮುಳುಗುವಿರಿ. ಸಮಸ್ಯೆ ಪರಿಹಾರಕ್ಕೆ ಮೊದಲು ಗಮನ ಕೊಡಿ.

ಧನು
ಸಮಸ್ಯೆ ಇದೆಯೆಂದು ನಿಮಗೆ ಗೊತ್ತು. ಅದನ್ನು ಪರಿಹರಿಸುವ ಬದಲು ಕೇವಲ ಚಿಂತೆ ಮಾಡುತ್ತಾ ಕೂತಿದ್ದೀರಿ. ಎದ್ದೇಳಿ, ಪರಿಹಾರದ ದಾರಿ ಕಂಡುಕೊಳ್ಳಿ.

ಮಕರ
ಯಾರಿಗೆ ಹೆಚ್ಚು ಸಮೀಪವಾಗಲು ಬಯಸುವಿರೋ ಅವರು ನಿಮ್ಮನ್ನು ದೂರ ಸರಿಸುತ್ತಾರೆ. ಇದರಿಂದ ಖೇದಗೊಳ್ಳದಿರಿ. ಶಾಂತ ಮನಸ್ಸು ಕಾಯ್ದುಕೊಳ್ಳಿ.

ಕುಂಭ
ಕೆಲಸದ ಕ್ಷೇತ್ರದಲ್ಲಿ ಪ್ರತಿಕೂಲ ಸನ್ನಿವೇಶ. ಅದನ್ನು ಸರಿಯಾಗಿ ನಿಭಾಯಿಸಿ. ಕೆಲವರ ವಿರೋಧ ಕಟ್ಟಿಕೊಳ್ಳುವಿರಿ. ಆಪ್ತರ ಬೆಂಬಲ ಸಿಗದು.

ಮೀನ
ಗೊಂದಲದ ಮನಸ್ಥಿತಿ. ಕೆಟ್ಟದು ಮತ್ತು ಒಳ್ಳೆಯದರ ನಡುವಿನ ಸಂಘರ್ಷ. ಪರಿಸ್ಥಿತಿ ನಿಭಾಯಿಸುವ ರೀತಿ ನಿಮಗೆ ಗೊತ್ತು. ಕಾರ್ಯಗತಗೊಳಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!