ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಇಂದು ನಿಮ್ಮ ಮನಸ್ಸು ಲೌಕಿಕದಲ್ಲಿರುವುದಿಲ್ಲ. ಬೇರೆಯೆ ಲೋಕದಲ್ಲಿ ವಿಹರಿಸುವಿರಿ. ಭಾವನಾತ್ಮಕ ಸಂತೋಷ ಇದಕ್ಕೆ ಕಾರಣವಾಗುತ್ತದೆ.
ವೃಷಭ
ಭೌತಿಕ ವಿಷಯಗಳತ್ತ ಹೆಚ್ಚು ಮನಸ್ಸು ತುಡಿಯುವುದು. ಸಾಮಾನ್ಯವಾಗಿ ಇದು ನಿಮ್ಮ ಸ್ವಭಾವವಲ್ಲ. ಇವತ್ತು ಮಾತ್ರ ಈ ರೀತಿ ವರ್ತಿಸುವಿರಿ.
ಮಿಥುನ
ಹೆಚ್ಚಾಗಿ ಪ್ರಾಕ್ಟಿಕಲ್ ಆಗಿ ಯೋಚಿಸುವ ನೀವು ಇಂದು ಮಾತ್ರ ಉದಾಸೀನ ಮನಸ್ಥಿತಿ ಪ್ರದರ್ಶಿಸುವಿರಿ. ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಗುವಿರಿ.
ಕಟಕ
ನಿಮ್ಮ ಸುತ್ತ ವೈರಿಗಳಿದ್ದಾರೆ. ಅವರನ್ನು ಮೊದಲು ಗುರುತಿಸಿಕೊಳ್ಳಿ. ಅವರ ಮರುಳು ಮಾತಿಗೆ ಬಲಿಯಾಗದಿರಿ. ವಿವೇಚನೆಯಿರಲಿ.
ಸಿಂಹ
ಸಂವಹನದ ಕೊರತೆ, ಇದರಿಂದಾಗಿ ಆಪ್ತರ ಜತೆಗೇ ತಪ್ಪು ಅಭಿಪ್ರಾಯ ಮೂಡಬಹುದು. ಮುಕ್ತ ಮಾತುಕತೆಯಿಂದ ಸಮಸ್ಯೆ ಪರಿಹಾರ.
ಕನ್ಯಾ
ಮಾನಸಿಕವಾಗಿ ಬಳಲುವಿರಿ.ಇದು ನಿಮ್ಮ ದೇಹದ ಮೇಲೂ ಪರಿಣಾಮ ಬೀರುವುದು. ಕೆಲಸಗಳೆಲ್ಲ ನಿಧಾನ. ವಿರಾಮ ಅವಶ್ಯ.
ತುಲಾ
ನಿಮ್ಮ ಸುತ್ತಲಿನವರು ನಿಮ್ಮ ವಿರುದ್ಧ ಮಸಲತ್ತು ನಡೆಸುತ್ತಾರೆ. ಈ ಬಗ್ಗೆ ಎಚ್ಚರದಿಂದಿರಿ. ಅವರ ಪಿತೂರಿಗೆ ಬಲಿಯಾಗದಿರಿ. ಆಪ್ತರ ನೆರವು ಪಡೆಯಿರಿ.
ವೃಶ್ಚಿಕ
ದಿನವಿಂದು ನಿಮಗೆ ಪೂರಕವಾಗಿದೆ. ಬಯಸಿದ ಕಾರ್ಯ ನೆರವೇರುವುದು. ಆರ್ಥಿಕ ಸ್ಥಿತಿ ಚೇತರಿಕೆ. ಪ್ರೀತಿಯ ವಿಷಯದಲ್ಲಿ ಯಶಸ್ಸು.
ಧನು
ಸಂಬಂಧಗಳ ವಿಚಾರದಲ್ಲಿ ಎಚ್ಚರದಿಂದ ವರ್ತಿಸಿ. ಬಾಂಧವ್ಯ ಕೆಡುವಂಥ ಮಾತು, ವರ್ತನೆ ತೋರದಿರಿ. ಹೊಂದಾಣಿಕೆ ಮುಖ್ಯ.
ಮಕರ
ಒಳಿತು- ಕೆಡುಕಿನ ಸಂಘರ್ಷದಲ್ಲಿ ಸಿಲುಕುವಿರಿ. ಕೆಡುಕಿನ ಜತೆ ರಾಜಿ ಬೇಡ. ಕೆಟ್ಟವರ ಪ್ರಭಾವಕ್ಕೆ ಸಿಲುಕದಿರಿ. ಕೌಟುಂಬಿಕ ಒತ್ತಡ.
ಕುಂಭ
ಮನೆ ಮತ್ತು ವೃತ್ತಿ ಕ್ಷೇತ್ರದಲ್ಲಿ ಉದ್ವಿಗ್ನ ಸ್ಥಿತಿ ಎದುರಿಸುವಿರಿ. ಇದರಿಂದ ಮಾನಸಿಕ ಒತ್ತಡ. ಸಮಾಧಾನದಿಂದ ಯೋಚಿಸಿ, ವರ್ತಿಸಿ.
ಮೀನ
ಇತರರನ್ನು ಅತಿಯಾಗಿ ಟೀಕಿಸಬೇಡಿ. ಅದರಿಂದ ಅವರ ವಿರೋಧ ಕಟ್ಟಿಕೊಳ್ಳುವಿರಿ. ಕೌಟುಂಬಿಕ ಒತ್ತಡ ಹೆಚ್ಚು. ಸಮಾಧಾನದಿಂದ ವರ್ತಿಸಿರಿ.