Sunday, March 26, 2023

Latest Posts

ದಿನಭವಿಷ್ಯ| ನಿಮ್ಮ ಭಾವನೆಯನ್ನು ಆಪ್ತರ ಬಳಿ ಹಂಚಿಕೊಳ್ಳಲು ಮುಜುಗರ ಬೇಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಪ್ರಮುಖ ವಿಷಯಗಳಲ್ಲಿ ಅಜ್ಞಾನಿಯಾಗದಿರಿ. ನಿಮ್ಮ ಸುತ್ತುಮುತ್ತಲಿನ ಆಗುಹೋಗುಗಳ ಕುರಿತು ಎಚ್ಚರವಿರಲಿ. ಅವು ನಿಮ್ಮ ಮೇಲೆ ಪರಿಣಾಮ ಬೀರಲಿವೆ.

ವೃಷಭ
ಉದ್ಯೋಗದ ಜಾಗದಲ್ಲಿ  ಸಂಘರ್ಷಕ್ಕೆ ಹೋಗದಿರಿ. ಅದರಿಂದ ನಿಮಗೇ ಅನನುಕೂಲ. ಮನೆಯಲ್ಲೂ ಯಾರ ಜತೆಗೂ ವಾಗ್ವಾದಕ್ಕೆ ಇಳಿಯಬೇಡಿ.

ಮಿಥುನ
ಇತರರು ಸೃಷ್ಟಿಸಿದ ಸಮಸ್ಯೆಯಲ್ಲಿ ನೀವು ಸಿಕ್ಕಿಬೀಳುವ ಸಂಭವ. ನಿಮ್ಮದೇ ಪ್ರಯತ್ನದಿಂದ ಅದನ್ನು ನಿಭಾಯಿಸಲು ಶಕ್ತರಾಗುವಿರಿ. ಕೆಲವರ ಸಂಗ ಒಳಿತು ತಾರದು.

ಕಟಕ
ಮನೆಯಲ್ಲೂ , ಉದ್ಯೋಗದಲ್ಲೂ ಅತಿಯಾದ ಒತ್ತಡ. ಹಲವಾರು ಕೆಲಸ ಒಮ್ಮೆಗೆ ಹೆಗಲ ಮೇಲೆ ಬೀಳುವುದು. ಸಹನೆಯಿರಲಿ.

ಸಿಂಹ
ಸಣ್ಣ ವಿಷಯವನ್ನೂ ಸರಿಯಾಗಿ ಗಮನಿಸಿ. ಅವು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಅದಕ್ಕೆ ಸಿದ್ಧರಾಗಿರಿ. ಸೂಕ್ತ ಕ್ರಮ ತೆಗೆದುಕೊಳ್ಳಿ.

ಕನ್ಯಾ
ಮಹತ್ವವಾದುದು ಸಂಭವಿಸಬಹುದು. ನಿಮ್ಮ ಭಾವನೆಯನ್ನು  ಆಪ್ತರ ಬಳಿ ಹಂಚಿಕೊಳ್ಳಲು ಮುಜುಗರ ಬೇಡ.ಸೂಕ್ತ ಸ್ಪಂದನೆ ದೊರುವುದು.

ವೃಶ್ಚಿಕ
ಕೆಲವರದ್ದು ತೋರಿಕೆಯ ಸ್ನೇಹ ಎಂಬ ಅರಿವು ನಿಮಗಾಗಲಿದೆ. ಅದರಿಂದ ಖಿನ್ನರಾಗ ದಿರಿ. ಆಗುವುದೆಲ್ಲ ಒಳಿತಿಗೇ.ಎಲ್ಲ ಮರೆತು ಮುಂದುವರಿಯಿರಿ.

ಧನು
ಉದ್ಯೋಗದಲ್ಲಿ ಅಧಿಕ ಒತ್ತಡ. ಆದರೂ ಸಮಯಮಿತಿಯಲ್ಲಿ ಕೆಲಸ ಪೂರೈಸಿ ಸಂತುಷ್ಟರಾಗುವಿರಿ. ಆದರೆ ಕೌಟುಂಬಿಕ ಒತ್ತಡ ಅಸಹನೀಯ.

ಮಕರ
ಹಲವಾರು ಬಗೆಯ ಒತ್ತಡಗಳು. ಕೆಲವರ ವರ್ತನೆ ಅಸಹನೀಯವೆ ನಿಸುವುದು. ಕುಟುಂಬ ಸದಸ್ಯರ  ಸಂಗದಲ್ಲಿ ಮಾನಸಿಕ ಒತ್ತಡ ಕಡಿಮೆಯಾದೀತು.

ಮಕರ
ಹಲವಾರು ಬಗೆಯ ಒತ್ತಡಗಳು. ಕೆಲವರ ವರ್ತನೆ ಅಸಹನೀಯವೆ ನಿಸುವುದು. ಕುಟುಂಬ ಸದಸ್ಯರ  ಸಂಗದಲ್ಲಿ ಮಾನಸಿಕ ಒತ್ತಡ ಕಡಿಮೆಯಾದೀತು.

ಕುಂಭ
ಹಳೆಯದನ್ನು ಮರೆತುಬಿಡಿ, ತಪ್ಪು ಕಲ್ಪನೆ ನಿವಾರಿಸಿ. ಇದು ನೀವಿಂದು ಅನುಸರಿಸಬೇಕಾದ ವಿಧಾನ. ಅದರಿಂದ ಒಳಿತಾಗಲಿದೆ.

ಮೀನ
ತಪ್ಪುಗ್ರಹಿಕೆಯಿಂದ ಆತ್ಮೀಯ ಸಂಬಂಧ ಹಾಳಾಗಬಹುದು. ಆದಕ್ಕೆ ಆಸ್ಪದ ನೀಡದಿರಿ. ಮುಕ್ತ ಮಾತುಕತೆ ಇದಕ್ಕೆ ಪರಿಹಾರ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!