ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಗೊಂದಲದ ಮನಸ್ಥಿತಿ. ಹಾಗಾಗಿ ಪ್ರಮುಖ ಕಾರ್ಯಕ್ಕೆ ಇಂದು ಕೈ ಹಾಕಬೇಡಿ. ತಾಳ್ಮೆ ವಹಿಸಿರಿ. ಚರ್ಮದ ಅಲರ್ಜಿಯಂತಹ ಬಾಧೆ ಕಾಣಿಸಿಕೊಳ್ಳಬಹುದು.
ವೃಷಭ
ಆಪ್ತರಿಂದ ಮನಸ್ಸು ಕೆಡಿಸುವ ವರ್ತನೆ ಕಂಡುಬಂದೀತು. ಆತುರದ ತೀರ್ಮಾನಕ್ಕೆ ಬರಬೇಡಿ. ಅವರ ವರ್ತನೆಗೆ ಸಕಾರಣ ಇರಬಹುದು.
ಮಿಥುನ
ಬಾಕಿ ಉಳಿದ ಕಾರ್ಯಗಳನ್ನು ಪೂರೈಸಲು ಸಕಾಲ. ಎಲ್ಲವೂ ನಿಮಗೆ ಅನುಕೂಲಕರವಾಗಿ ನಡೆಯುವುದು. ಕೌಟುಂಬಿಕ ಸಮ್ಮಿಲನ.
ಕಟಕ
ಅನಿರೀಕ್ಷಿತವಾಗಿ ಅತಿಥಿಗಳು ಬಂದಾರು. ಅವರಿಂದ ಶುಭ ಸುದ್ದಿ ಕೇಳಬಹುದು. ಆರ್ಥಿಕ ಉನ್ನತಿ ಸಾಧಿಸುವ ನಿಮ್ಮ ಗುರಿಗೆ ಕೆಲವಾರು ಅಡ್ಡಿಗಳು.
ಸಿಂಹ
ಕೆಲವು ದಿನಗಳಿಂದ ಕಾಡುತ್ತಿದ್ದ ಒತ್ತಡ ಇಂದು ನಿವಾರಣೆ. ಎಲ್ಲವೂ ಸುಸೂತ್ರಗೊಂಡ ನಿರಾಳ ಭಾವ. ಪ್ರೀತಿಯ ವಿಷಯದಲ್ಲಿ ಪೂರಕ ಬೆಳವಣಿಗೆ.
ಕನ್ಯಾ
ಇತರರು ಏನು ಹೇಳುತ್ತಾರೆಂದು ಚಿಂತಿಸುವುದನ್ನು ಬಿಡಿ. ನಿಮ್ಮನ್ನು ಭಾವನಾತ್ಮಕವಾಗಿ ಅವಲಂಬಿಸಿರುವವರ ಮನ ನೋಯಿಸದಿರಿ.
ತುಲಾ
ಪ್ರತಿಯೊಂದು ಬಾಂಧವ್ಯವೂ ನೀವು ಹೇಳಿದಂತೆಯೆ ನಡೆಯಬೇಕು ಎಂಬ ಧೋರಣೆ ಬಿಡಿ. ಇತರರ ಭಾವನೆಗೂ ಬೆಲೆ ಕೊಡುವುದು ಒಳಿತು.
ವೃಶ್ಚಿಕ
ಬಿಕ್ಕಟ್ಟಿಗೆ ಸಿಲುಕುವಿರಿ. ಅದೃಷ್ಟವೆಂದರೆ ನಿಮ್ಮನ್ನು ಬಿಕ್ಕಟ್ಟಿನಿಂದ ಪಾರು ಮಾಡಲು ಹಲವರು ಸಹಾಯ ಹಸ್ತ ಚಾಚುವರು. ದಿನದಂತ್ಯಕ್ಕೆ ನೆಮ್ಮದಿ.
ಧನು
ಇಂದು ಹೆಚ್ಚು ಹಣ ವ್ಯಯ. ಅವೆಲ್ಲವೂ ಅನಿವಾರ್ಯವಾದ ಖರ್ಚುಗಳು. ವಾಗ್ವಾದಕ್ಕೆ, ಸಂಘರ್ಷಕ್ಕೆ ಆಸ್ಪದ ಕೊಡದಿರಿ. ತಾಳ್ಮೆಯಿಂದ ವರ್ತಿಸಿ.
ಮಕರ
ಪ್ರಮುಖ ನಿರ್ಧಾರ ತಾಳುವ ಮುನ್ನ ಸರಿಯಾಗಿ ಆಲೋಚಿಸಿ. ಆತುರದ ತೀರ್ಮಾನ ಪ್ರತಿಕೂಲವಾದೀತು. ಕೌಟುಂಬಿಕ ಬಿಕ್ಕಟ್ಟು ಪರಿಹಾರ.
ಕುಂಭ
ಅನಿರೀಕ್ಷಿತ ಕೆಲಸದ ಒತ್ತಡ ಬೀಳಬಹುದು. ಅದನ್ನು ನಿಭಾಯಿಸುವಲ್ಲೆ ದಿನವು ಕಳೆಯುವುದು. ಇನ್ನಿತರ ವ್ಯವಹಾರಕ್ಕೆ ನಿಮಗೆ ಸಮಯ ಸಾಲದು.
ಮೀನ
ಸಂತೋಷದ ಮನಸ್ಥಿತಿ. ಉಲ್ಲಾಸದಿಂದ ದಿನ ಕಳೆಯುವಿರಿ. ಕುಟುಂಬ ಸದಸ್ಯರ ಸಾಧನೆಯೊಂದು ಇದಕ್ಕೆ ಕಾರಣ. ಆರ್ಥಿಕ ಉನ್ನತಿ.