ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಕೆಲ ವಿಷಯ ಚಿಂತೆಗೆ ಕಾರಣವಾಗುವುದು. ಅವಶ್ಯವಾದ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುವಿರಿ. ಇತರರಿಗೆ ನೋವಾಗುವ ಭೀತಿ ಕಾಡುವುದು.
ವೃಷಭ
ವೃತ್ತಿಯಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಿಸುವಿರಿ. ಇತರರ ಅಸಹಕಾರ. ಸುಗಮ ಕೆಲಸವೂ ಕಷ್ಟವಾಗುವುದು. ಮನೆಯಲ್ಲಿ ಸಮಾಧಾನ ಪಡೆಯುವಿರಿ.
ಮಿಥುನ
ಪ್ರಮುಖ ವಿಚಾರದಲ್ಲಿ ಕಠಿಣ ನಿಲುವು ಬೇಡ. ಹೊಂದಾಣಿಕೆ ಮುಖ್ಯ. ಮನೆ ಖರ್ಚು ಹೆಚ್ಚುವುದು. ಮಿತವ್ಯಯಕ್ಕೆ ಮನಸ್ಸು ಮಾಡುವಿರಿ.
ಕಟಕ
ನಿಮ್ಮ ಕೆಲಸದಲ್ಲಿ ತಪ್ಪು ಉಂಟಾದೀತು. ಅದನ್ನು ಕೂಡಲೇ ಸರಿಪಡಿಸಿ. ಕೆಲಸದಲ್ಲಿ ಏಕಾಗ್ರಚಿತ್ತತೆ ಮುಖ್ಯ. ಮನಸ್ಸು ಎತ್ತೆತ್ತಲೋ ಹರಿದಾಡಲು ಬಿಡದಿರಿ.
ಸಿಂಹ
ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು. ಧನಲಾಭ. ಸಾಲ ಕೊಟ್ಟಿದ್ದರೆ ವಾಪಸ್ ಸಿಗುವುದು. ಬಹುಕಾಲದ ಬಳಿಕ ಆತ್ಮೀಯರ ಭೇಟಿ.
ಕನ್ಯಾ
ಕೆಲಸದಲ್ಲಿ ನಿರ್ಲಕ್ಷ್ಯ ತೋರದಿರಿ. ಮೇಲಿನ ಅಧಿಕಾರಿಗಳ ಅವಕೃಪೆಗೆ ಪಾತ್ರರಾಗುವಿರಿ. ಮನೆಯಲ್ಲೂ ಹೆಚ್ಚುವರಿ ಕೆಲಸದ ಹೊರೆ. ಒಟ್ಟಿನಲ್ಲಿ ಒತ್ತಡದ ದಿನ.
ತುಲಾ
ಆರ್ಥಿಕವಾಗಿ ಉತ್ತಮ ದಿನವಲ್ಲ. ನಿರೀಕ್ಷಿಸಿದ ಧನಲಾಭ ಉಂಟಾಗದು. ಉದ್ಯೋಗದಲ್ಲಿ ಅನಿಶ್ಚಿತತೆಯ ಭೀತಿ ಉಂಟಾಗುವುದು.
ವೃಶ್ಚಿಕ
ನಿಮ್ಮ ಪಾಲಿಗಿಂದು ಉತ್ತಮ ದಿನ. ಆರೋಗ್ಯ ಸುಧಾರಣೆ. ಆರ್ಥಿಕ ಸಮಸ್ಯೆ ನಿವಾರಣೆ. ಕೌಟುಂಬಿಕ ಬಿಕ್ಕಟ್ಟು ಕೂಡಾ ಪರಿಹಾರ. ಒಟ್ಟಿನಲ್ಲಿ ಹರ್ಷದ ದಿನ.
ಧನು
ಎಂದಿನಂತೆ ಸಹಜ ದಿನ. ವಿಶೇಷವೇನೂ ಘಟಿಸದು. ನಿಮ್ಮ ಕೆಲಸಕ್ಕೆ ಆದ್ಯತೆ ಕೊಡಿ. ಇತರರ ಖಾಸಗಿ ವಿಷಯದಲ್ಲಿ ಆಸಕ್ತಿ ತೋರಲು ಹೋಗದಿರಿ.
ಮಕರ
ಅನಿರೀಕ್ಷಿತ ಧನಲಾಭ. ಹಳೆಯ ಹೂಡಿಕೆಯೊಂದು ಒಳ್ಳೆಯ ಫಲ ನೀಡುವುದು. ಕೌಟುಂಬಿಕ ಬಿಕ್ಕಟ್ಟು ಉಲ್ಭಣಿಸಬಹುದು.
ಕುಂಭ
ನಿಮ್ಮ ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಮಹತ್ತರ ಬದಲಾವಣೆ ಆಗುವುದು. ಆರ್ಥಿಕ ನಷ್ಟವಾದೀತು. ಕುಟುಂಬದವರ ಸಹಕಾರ ಸಿಗುವುದು.
ಮೀನ
ಪ್ರತಿಫಲ ಅಪೇಕ್ಷಿಸದೆ ಇತರರಿಗೆ ನೆರವು ನೀಡುವಿರಿ. ಇದು ನಿಮಗೆ ಬೇರೊಂದು ವಿಧದಲ್ಲಿ ಲಾಭ ತಂದುಕೊಡಲಿದೆ. ಕೌಟುಂಬಿಕ ಶಾಂತಿ.