ದಿನಭವಿಷ್ಯ| ಅತಿಯಾದ ಕೆಲಸದಿಂದ ಬಸವಳಿಯುವಿರಿ, ಮಾನಸಿಕವಾಗಿ ಕುಗ್ಗುವ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಆರೋಗ್ಯ ವಿಷಯವನ್ನು ಕಡೆಗಣಿಸಬೇಡಿ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ. ಆಪ್ತರೊಬ್ಬರು ನಿಮ್ಮ ಜತೆ ಮುನಿಸಿಕೊಂಡಾರು.ಸಂಘರ್ಷ ತಪ್ಪಿಸಿ.

ವೃಷಭ
ಬಂಧುಗಳ ಜತೆ ಭಾವನಾತ್ಮಕ ಒಡನಾಟ.ಸಣ್ಣಪುಟ್ಟ ಭಿನ್ನಮತ ಮರೆತು ವ್ಯವಹರಿಸಿರಿ. ಆರ್ಥಿಕ ಕೊರತೆ ಕಾಡಿದರೂ ಸೂಕ್ತ ನೆರವು ಒದಗಲಿದೆ.

ಮಿಥುನ
ಕೌಟುಂಬಿಕ ವಿಷಯಗಳು ಇಂದು ಪ್ರಮುಖವಾಗುತ್ತವೆ.ಕುಟುಂಬದ ಎಲ್ಲರನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟಕರ ಎನಿಸಬಹುದು.

ಕಟಕ
ಮನದಲ್ಲಿ ಹಲವಾರು ತಾಕಲಾಟಗಳು. ನಿಮ್ಮ ಸಮಸ್ಯೆಯ ಜತೆಗೆ ಬೇರೆಯವರ ಸಮಸ್ಯೆಯನ್ನೂ ತುಂಬಿಕೊಂಡು ಚಿಂತಿಸುವಿರಿ.

ಸಿಂಹ
ನಿಮ್ಮದಲ್ಲದ ಕಾರಣಕ್ಕೆ ಕೆಲವರಿಂದ ಟೀಕೆ ಎದುರಿಸುವಿರಿ. ಯಾರದೋ ತಪ್ಪಿಗೆ ನೀವು ಹೊಣೆಗಾರರಾಗುವಿರಿ.ಮನಸ್ಸು ದೃಢ ಮಾಡಿಕೊಳ್ಳಿರಿ.

ಕನ್ಯಾ
ಮನಸ್ಸಿಗೆ ನಿರಾಳತೆ ತರುವ ದಿನವಿದು. ಬಂಧುಗಳ ಜತೆಗಿನ ಕಿರಿಕಿರಿ ಮುಕ್ತಾಯ ಕಾಣುವುದು. ಆರ್ಥಿಕ ಪರಿಸ್ಥಿತಿ ಸುಧಾರಣೆ.ಕೌಟುಂಬಿಕ ನೆಮ್ಮದಿ.

ತುಲಾ
ವೈಯಕ್ತಿಕ ಇಷ್ಟಾನಿಷ್ಟಗಳು ನಿಮ್ಮ ನಿರ್ಧಾರದ ಮೇಲೆ ಪರಿಣಾಮ ಬೀರುವುದು. ಇದರಿಂದ ತಾರ್ಕಿಕ ನಿರ್ಣಯ ಕೈಗೊಳ್ಳಲು ವಿಫಲರಾಗುವಿರಿ.

ವೃಶ್ಚಿಕ
ಫಲಪ್ರದ ದಿನವಲ್ಲ. ಕೆಲವು ಕಾರ್ಯಗಳು ಉದ್ದೇಶಿತ ಗುರಿ ಸಾಧಿಸಲಾರವು. ಕೌಟುಂಬಿಕ ಪರಿಸರ ಕೂಡ ಅಸಹನೀಯ. ಆರ್ಥಿಕ ಮುಗ್ಗಟ್ಟು.

ಧನು
ಚಿಂತೆಗಳನ್ನು ಮರೆತು ಸಂತೋಷ ಪಡಿರಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಆತ್ಮೀಯ ಬಂಧುಗಳ ಜತೆ ನಲಿದಾಡಿ.

ಮಕರ
ಕವಲುದಾರಿಯಲ್ಲಿ ನಿಂತಂತಹ ಅನುಭವ. ಮುಖ್ಯ ವಿಷಯದಲ್ಲಿ ಯಾವ ದಾರಿ ಹಿಡಿಯಬೇಕು ಎಂಬ ಗೊಂದಲ. ಆಪ್ತರ ಸಲಹೆ ಪಡೆಯಿರಿ.

ಕುಂಭ
ಅತಿಯಾದ ಕೆಲಸದಿಂದ ಬಸವಳಿಯುವಿರಿ. ಮಾನಸಿಕವಾಗಿ ಕೂಡ ಕುಗ್ಗುವಿರಿ. ಕೆಲವು ಸಮಸ್ಯೆಗಳನ್ನು ಸರಿಪಡಿಸಲು ಆದ್ಯತೆ ಕೊಡಬೇಕಾಗುವುದು.

ಮೀನ
ಹಳೆಯ ಬಂಧು ಮಿತ್ರರನ್ನು ಭೇಟಿ ಯಾಗುವ ಅವಕಾಶ.ಉತ್ಸಾಹ ಹೆಚ್ಚು. ಕೆಲಸದಲ್ಲಿ ನಿಮ್ಮ ಪ್ರಾಮಾಣಿಕತೆಯು ಉತ್ತಮ ಫಲ ನೀಡುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!