ದಿನಭವಿಷ್ಯ| ಇಂದು ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ

ಮೇಷ
ಇಂದು ನೀವು ಸಾಮಾಜಿಕವಾಗಿ ಗುರುತಿಸಿಕೊಳ್ಳುವಿರಿ. ಹಿರಿಯರ ಆರೋಗ್ಯದತ್ತ ಗಮನವಿರಲಿ. ಆರ್ಥಿಕವಾಗಿ
ಮುನ್ನಡೆ.

ವೃಷಭ
ನಿಮ್ಮ ಮುಂದಿನ ಜೀವನದ ಅಭಿವೃದ್ದಿಗೆ ಬೇಕಾದ ಕಾರ್ಯಗಳು ಸಾಂಗವಾಗಿ ನೇರವೇರುವುದು. ಇದರಿಂದ ಮಾನಸಿಕ ನೆಮ್ಮದಿ, ಶಾಂತಿ.

ಮಿಥುನ
ನಿಮ್ಮ ಹಾದಿ ಸುಗಮವಾಗಿ ಸಾಗಬೇಕಾದರೆ ನಿಮ್ಮಲ್ಲಿ ತಾಳ್ಮೆ, ಸಹನೆ ಅಗತ್ಯ. ಆರೋಗ್ಯದ ಬಗ್ಗೆ ಗಮನವಿರಲಿ. ಧನ ಹಾನಿ.

ಕಟಕ
ಶುಭ ದಿನ. ವ್ಯಾಪಾರದಲ್ಲಿ ಅಭಿವೃದ್ಧಿ, ಮನೆಯಲ್ಲಿಯೂ ಸಂತೋಷದ ವಾತಾವರಣ. ಆರೋಗ್ಯ ಸುಧಾರಣೆ.

ಸಿಂಹ
ಆರ್ಥಿಕವಾಗಿ ಮತ್ತು ಆರೋಗ್ಯದಲ್ಲಿ ನೆಮ್ಮದಿ ನಿಮ್ಮದಾಗುವುದು. ಬಿಡುವಿಲ್ಲದ ದಿನ. ಅತಿಥಿಗಳ ಆಗಮನ. ಹೊಸ ವ್ಯಕ್ತಿಗಳ ಪರಿಚಯ.

ಕನ್ಯಾ
ಕೌಟುಂಬಿಕವಾಗಿ ಅಭಿಪ್ರಾಯ ಬೇಧಗಳಿಂದ ಮಾನಸಿಕವಾಗಿ ಕಿರಿಕಿರಿ. ಸಮಾಧಾನ ಚಿತ್ತದಿಂದ ಕಾರ್‍ಯ ನಿರ್ವಹಿಸಿದರೆ ನೆಮ್ಮದಿ.

ತುಲಾ
ಕಠಿಣ ಪರಿಶ್ರಮದ ಫಲ ಇಂದು ನಿಮಗೆ ಗೋಚರ. ಜೀವನದಲ್ಲಿ ಹೊಸ ಪರಿವರ್ತನೆಯ ಕಾಲ. ಆರ್ಥಿಕವಾಗಿ ಸದೃಢರಾಗುವಿರಿ. ಸಂತೋಷ.

ವೃಶ್ಚಿಕ
ನಿಮ್ಮನ್ನು ಕಾಡುವ ಸಮಸ್ಯೆಯೊಂದು ಪರಿಹಾರ ಕಾಣುವುದು. ವ್ಯಾಪಾರದಲ್ಲಿ ನಿಮ್ಮ ನಿರೀಕ್ಷೆಗೂ ಮೀರಿ ಲಾಭ ಗಳಿಸುವಿರಿ. ಸ್ನೇಹಿತರ ಭೇಟಿ.

ಧನು
ಸಾಮಾನ್ಯದಿನ. ಹಿರಿಯರ ಆರೋಗ್ಯ ದತ್ತ ಗಮನ ನೀಡಿ. ಹೊಸ ಉದ್ಯೋಗಾವಕಾಶಗಳು ಬರಬಹುದು. ಆರೋಗ್ಯದಲ್ಲಿ ಏರುಪೇರು.

ಮಕರ
ಆಹಾರ ಸೇವನೆಯಲ್ಲಿ ಆರೋಗ್ಯಕರ ಅಭ್ಯಾಸ ಬೆಳೆಸಿಕೊಳ್ಳಿ. ಇಲ್ಲವಾದರೆ ಆರೋಗ್ಯ ಕೆಡಬಹುದು. ಕುಟುಂಬದಲ್ಲಿ ಹಿರಿಯರಿಗೆ ಅಸೌಖ್ಯ.

ಕುಂಭ
ಕಷ್ಟದ ಸವಾಲು ನಿಮ್ಮ ಮುಂದಿದೆ. ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಸಫಲತೆ ಖಂಡಿತ. ಇತರರ ಪ್ರಭಾವಕ್ಕೆ ಒಳಗಾಗದಿರಿ.

ಮೀನ
ಖರೀದಿಯ ಉತ್ಸಾಹ ನಿಮ್ಮದು. ಆದರೆ ಹಣ ನೀರಿನಂತೆ ಖರ್ಚಾಗಬಹುದು. ಅನವಶ್ಯ ಖರ್ಚು ಅಗತ್ಯವೇ ಎಂದು ಪ್ರಶ್ನಿಸಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!