ದಿನ ಭವಿಷ್ಯ | ನಿಮ್ಮ ಕಾರ್ಯದಕ್ಷತೆಗೆ ನಿಮ್ಮನ್ನು ಕಡೆಗಣಿಸಿದವರು ಅಚ್ಚರಿ ಪಡಲಿದ್ದಾರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ಹಿರಿಯರು ಸಲಹೆ ನೀಡಿದರೆ ಅದರಿಂದ ಖತಿಗೊಳ್ಳಬೇಡಿ. ಅದನ್ನು ಒಳ್ಳೆಭಾವದಿಂದ ಸ್ವೀಕರಿಸಿ. ಪ್ರತಿಕೂಲ ಪರಿಸ್ಥಿತಿಯಲ್ಲೂ ಆಶಾವಾದ ಬಿಡದಿರಿ.

ವೃಷಭ
ಉದ್ಯಮಿಗಳಿಗೆ ಶುಭದಿನ. ವೃತ್ತಿಪರರಿಗೂ  ಉನ್ನತಿ. ನಿಮ್ಮ ಪ್ರಮುಖ ಕಾರ್ಯಗಳು ನಿರ್ವಿಘ್ನವಾಗಿ ಮುಗಿಯುವವು.

ಮಿಥುನ
ಉದ್ಯೋಗದಲ್ಲಿ ಉನ್ನತಿ. ಕಾರ್ಯ ಸಲೀಸು. ನಿಮ್ಮನ್ನು ಕಡೆಗಣಿಸಿದವರು ಅಚ್ಚರಿ ಪಡುವಂತಹ ನಿರ್ವಹಣೆ ನೀಡುವಿರಿ. ಬಂಧುಗಳಿಂದ ನೆರವು

ಕಟಕ
ವಿವಾಹಿತರಿಗೆ ಹರ್ಷದ ಸುದ್ದಿ ದೊರಕುವುದು. ಕೌಟುಂಬಿಕ ಸನ್ನಿವೇಶ ಹಿತದಾಯಕ. ಉದ್ಯೋಗದಲ್ಲಿ ನೀವು ಬಯಸಿದ ಬೆಳವಣಿಗೆ. ಕಾರ್ಯಸಿದ್ಧಿ.

ಸಿಂಹ
ಸಹೋದ್ಯೋಗಿಗಳ ಜತೆ ಮಾತಿನ ಜಗಳ ನಡೆಯಬಹುದು.  ಹಾಗಾಗಿ ಭಾವನೆಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಕೋಪ ನಿಯಂತ್ರಿಸಿ.

ಕನ್ಯಾ
ಕುಟುಂಬ ಸದಸ್ಯರ ಜತೆ ಆರಾಮವಾಗಿ ಕಾಲ ಕಳೆಯುವ ಅವಕಾಶ. ಇನ್ನಿತರ ಒತ್ತಡಗಳನ್ನು ಮರೆತುಬಿಡಿ. ಉದ್ಯೋಗದಲ್ಲಿ ಉನ್ನತಿ, ಕಾರ್ಯಸಿದ್ಧಿ.

ತುಲಾ
ಸಣ್ಣಪುಟ್ಟ ವಿಷಯಗಳಿಗೆ ತಲೆಕೆಡಿಸದೆ ಮುಖ್ಯ ವಿಚಾರದತ್ತ ಮಾತ್ರ ಗಮನ ಹರಿಸಿ. ಕೆಲಸದ ಒತ್ತಡದಲ್ಲಿ ಕೌಟುಂಬಿಕ ಹಿತಾಸಕ್ತಿಯನ್ನು ಕಡೆಗಣಿಸದಿರಿ.

ವೃಶ್ಚಿಕ
ಕೆಲವು ಕೌಟುಂಬಿಕ ವಿಚಾರಗಳು ಮನಸ್ಸಿನ ಶಾಂತಿ ಕದಡಬಹುದು. ಸಣ್ಣ ವಿಚಾರವಾದರೂ ಅವು ನಿಮ್ಮನ್ನು ಕೊರಗಿಗೆ ತಳ್ಳುತ್ತವೆ. ಬೇಗ ಪರಿಹಾರ ಕಂಡುಕೊಳ್ಳಿ.

ಧನು
ವೃತ್ತಿಯಲ್ಲೂ ಮನೆಯಲ್ಲೂ ಹೆಚ್ಚು ಹೊಣೆಗಾರಿಕೆ. ನಿಮ್ಮ ಶಕ್ತಿಯನ್ನೆಲ್ಲ ಗುರಿ ಸಾಧನೆಗೆ ವ್ಯಯಿಸಬೇಕು. ಅಸಹನೆ ನಿಯಂತ್ರಿಸಿರಿ.

ಮಕರ
ಹರಿತ ವಸ್ತುಗಳೊಂದಿಗೆ ವ್ಯವಹರಿಸುವಾಗ ಎಚ್ಚರ ವಹಿಸಿ. ಸಣ್ಣಪುಟ್ಟ ಅವಘಡದ ಸೂಚನೆಯಿದೆ. ಕೌಟುಂಬಿಕ ಭಿನ್ನಮತ ಪರಿಹಾರ.

ಕುಂಭ
ವೃತ್ತಿಯಲ್ಲಿ ಪ್ರಗತಿ. ನಿಮ್ಮ ಸುತ್ತಲಿನ ಜನರಿಂದ ಮೆಚ್ಚುಗೆ, ಗೌರವ ಪಡೆಯುವಿರಿ. ಕುಟುಂಬ ಸದಸ್ಯರಲ್ಲಿ ಅನಾರೋಗ್ಯ ಉಂಟಾದೀತು.

ಮೀನ
ಪ್ರತಿಯೊಂದಕ್ಕೂ ಅತಿರೇಕದಿಂದ ಪ್ರತಿಕ್ರಿಯಿಸುವಿರಿ.ಕೆಲಸದಲ್ಲೂ ಅತಿರೇಕ. ಮುರಿದ ಸಂಬಂಧ ಇಂದು ಜೋಡಲಿದೆ. ಭಾವುಕ ಸನ್ನಿವೇಶ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!