ದಿನಭವಿಷ್ಯ | ಮೇಷ ರಾಶಿಗೆ ಉತ್ಸಾಹದ ದಿನ, ಧನು ರಾಶಿಯವರಿಗೆ ಮನಸ್ಸು ಸ್ಥಿರವಾಗಿ ನಿಲ್ಲಲ್ಲ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮೇಷ
ಉತ್ಸಾಹದ ದಿನ. ಆದರೆ ಇದರಿಂದಾಗಿ ಕೆಲವು ಅನವಶ್ಯ ಕೆಲಸದಲ್ಲಿ ತೊಡಗುವ ಸಾಧ್ಯತೆಯಿದೆ. ಅದರಿಂದ ನಿಮಗಾವ ಲಾಭ ಲಭಿಸುವುದಿಲ್ಲ.

ವೃಷಭ
ಕುಟುಂಬ ಸದಸ್ಯರೊಂದಿಗೆ ಕೂಡಿ ಕಳೆಯುವ ಅವಕಾಶ. ವೃತ್ತಿಯ ಒತ್ತಡಗಳು ಇಂದು ಬಾಧಿಸುವುದಿಲ್ಲ. ಆರ್ಥಿಕ ಸುಧಾರಣೆ.

ಮಿಥುನ
ಸಮಸ್ಯೆಗಳಲ್ಲಿ ಮುಳುಗುತ್ತೀರಿ. ಅದರಿಂದ ಹೊರಬರಲಾರದೆ ಕಷ್ಟ ಪಡುವಿರಿ. ಸ್ಥೈರ್ಯ ಕೆಡದೆ ಆತ್ಮವಿಶ್ವಾಸ ಉಳಿಸಿಕೊಳ್ಳಿ.

ಕಟಕ
ಮನೆಯ ನವೀಕರಣಕ್ಕೆ ಮನಸ್ಸು ಮಾಡುವಿರಿ. ಅದಕ್ಕೆ ಆರ್ಥಿಕ ಒತ್ತಡ ಹೆಚ್ಚಬಹುದು. ವ್ಯಕ್ತಿ ಯೊಬ್ಬರು ಭಾವನಾತ್ಮಕ ಏರುಪೇರು ಸೃಷ್ಟಿಸುತ್ತಾರೆ.

ಸಿಂಹ
ಕುಟುಂಬಸ್ಥರ ಹಿತಾಸಕ್ತಿಗೆ ಆದ್ಯತೆ ಕೊಡಬೇಕು. ಇದಕ್ಕಾಗಿ ನಿಮ್ಮ ಹಿತವನ್ನು ತ್ಯಾಗ ಮಾಡಬೇಕಾಗುವುದು. ವೃತ್ತಿಯಲ್ಲಿ ಏರುಪೇರು ಸಂಭವಿಸುವುದು.

ಕನ್ಯಾ
ನಿಮಗೆ ಸವಾಲು ಹಾಕುವವರಿಗೆ ನಿಮ್ಮ ನೈಜ ಸಾಮರ್ಥ್ಯ ತೋರ್ಪಡಿಸಿ. ಅವರ ಕಿರುಕುಳವನ್ನು ತಪ್ಪಿಸಿಕೊಳ್ಳಿ. ಆರ್ಥಿಕ ಒತ್ತಡ ಹೆಚ್ಚಳ.

ತುಲಾ
ಕುಟುಂಬದಲ್ಲಿ ವಾಗ್ವಾದ ಸಂಭವ. ನೀವು ಅತಿರೇಕದ ವರ್ತನೆ ತೋರದಿರಿ.  ಇಂದು ನಿಮಗೆ ದಿನವು ಪೂರಕವಾಗಿಲ್ಲ. ಪ್ರತಿಕೂಲ ಪರಿಸ್ಥಿತಿ.

ವೃಶ್ಚಿಕ
ಖಾಸಗಿ ಬದುಕು ಮತ್ತು ವೃತ್ತಿ ಬದುಕಿನ ಮಧ್ಯೆ ಸಮತೋಲನ ಸಾಧಿಸಲು ನೆರವಾಗುವಿರಿ. ಹಾಗಾಗಿ ಮಾನಸಿಕ ತೊಳಲಾಟ ನಿವಾರಣೆ. ಆರ್ಥಿಕ ಚೇತರಿಕೆ.

ಧನು
ಮನಸ್ಸು ಸ್ಥಿರವಾಗಿ ನಿಲ್ಲದು. ವೃತ್ತಿಗಿಂತಲೂ ಕುಟುಂಬದತ್ತ ಮನಸ್ಸು ಸರಿಯುವುದು. ಕೌಟುಂಬಿಕ ಅವಶ್ಯತೆ ಈಡೇರಿಸುವುದು ಅಗತ್ಯವಾಗುತ್ತದೆ.

ಮಕರ
ವೃತ್ತಿಯಲ್ಲಿ ಯಶಸ್ಸು ಸಾಧಿಸುವಿರಿ. ಮೇಲಧಿಕಾರಿಗಳಿಂದ ಮೆಚ್ಚುಗೆ ಗಳಿಸುವಿರಿ. ಹಾಗೆಂದು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸದು. ಹಣದ ಕೊರತೆ ಬಾಧಿಸಲಿದೆ.

ಕುಂಭ
ಗ್ರಹಗತಿಗಳು ನಿಮಗೆ ಪೂರಕವಾಗಿವೆ. ಕಾರ್ಯ ಯಶಸ್ಸು. ಉದ್ಯಮ ವೃದ್ಧಿ. ಪೂರಕ ಬೆಳವಣಿಗೆ. ಕೌಟುಂಬಿಕ ಶಾಂತಿ ಮರಳುವುದು.

ಮೀನ
ಹಳೆಯ ನೆನಪುಗಳು, ಸ್ನೇಹಿತರು ಕಾಡಬಹುದು. ಹಳೆಯದನ್ನು ಇಂದಿನ ಸ್ಥಿತಿಯೊಂದಿಗೆ ಹೋಲಿಸಿ ಮರುಗುವಿರಿ. ಮನಃಶಾಂತಿ ದೂರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!