ದಿನಭವಿಷ್ಯ| ಈ ರಾಶಿಯವರಿಗೆ ಇಂದು ಅತ್ಯಂತ ಶುಭದಿನ

ಮೇಷ
ಕೌಟುಂಬಿಕ  ವ್ಯವಹಾರ ಗಳಲ್ಲಿ ಇಂದು ಹೆಚ್ಚು ವ್ಯಸ್ತರಾಗುವಿರಿ. ಉದ್ವಿಗ್ನತೆ ಹೆಚ್ಚಾಗದಂತೆ ನೋಡಿಕೊಳ್ಳಿ. ಸಹನೆಯನ್ನು ನೀವು ಹೆಚ್ಚು ಪಾಲಿಸಬೇಕು.

ವೃಷಭ
ನಿಮಗೆ ಅಪರಿಚಿತ ಎನಿಸುವ ಪರಿಸ್ಥಿತಿಗೆ ಸಿಲುಕುವಿರಿ.  ಆಪ್ತರ ಸಲಹೆ, ಸೂಚನೆ ಬೇಕಾಗುವುದು. ಕುಟುಂಬದಲ್ಲಿ ಹೆಚ್ಚಿನ ಒತ್ತಡ ಅನುಭವಿಸುವಿರಿ.

ಮಿಥುನ
ಇಂದು ಹೊರಗಿನ ಗೊಂದಲ, ಗಲಾಟೆ ನಿಮ್ಮನ್ನು ಕಾಡುವುದಿಲ್ಲ. ನಿಮ್ಮೊಳಗೆ ಶಾಂತತೆಯನ್ನು ಕಾಯ್ದುಕೊಳ್ಳುವಿರಿ. ಸಾಂಸಾರಿಕ ಬಿಕ್ಕಟ್ಟು ಶಮನ.

ಕಟಕ
ಕಾಡುತ್ತಿದ್ದ ಗೊಂದಲಗಳು ಕಳೆದು ಮನಸ್ಸು ತಿಳಿಯಾಗಲಿದೆ. ಹೃದಯದ ಭಾವನೆಗೆ ಬೆಲೆ ದೊರಕಲಿದೆ. ಭಾವನಾತ್ಮಕ ಸಂತೋಷ ಅನುಭವಿಸುವಿರಿ.

ಸಿಂಹ
ಅದೃಷ್ಟ ನಿಮ್ಮ ಮನೆಬಾಗಿಲು ತಟ್ಟುವುದು. ಆತಂಕ ನಿವಾರಣೆ. ಕಾರ್ಯದಲ್ಲಿ ಸಫಲತೆ. ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣಲಿದೆ.

ಕನ್ಯಾ
ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಮುಖ್ಯವಾಗಿ ಆಹಾರ ಸೇವನೆಯಲ್ಲಿ ಹೆಚ್ಚಿನ ಎಚ್ಚರವಿರಲಿ. ಕುಟುಂಬದ ಹಿರಿಯರಿಗೆ ಅನಾರೋಗ್ಯ ಸಂಭವ.

ತುಲಾ
ನಿಮ್ಮ ಕಾರ್ಯವು ನಿರ್ವಿಘ್ನವಾಗಿ ನಡೆಯುವುದು. ಅಡ್ಡಿಗಳು ನಿವಾರಣೆ ಕಾಣುವವು. ವೃತ್ತಿಯಲ್ಲಿನ ಒತ್ತಡಗಳು ಪರಿಹಾರ ಕಾಣಲಿವೆ.

ವೃಶ್ಚಿಕ
ಕಠಿಣ ಪರಿಶ್ರಮದಿಂದ ಮಾಡಿದ ಕೆಲಸವು ಫಲ ನೀಡುವುದಿಲ್ಲ. ಕೆಲವರು ಏನಾದರೊಂದು ಕೊಂಕು ತೆಗೆಯುತ್ತಾರೆ. ಮನಸ್ಸಿನ ನೆಮ್ಮದಿ ಕಲಕುತ್ತದೆ. ಧ್ಯಾನ ಸಹಕಾರಿ.

ಧನು
ನಿಮ್ಮ ಮನಸ್ಥಿತಿ ಬದಲಿಸಬಲ್ಲ ಬೆಳವಣಿಗೆ ಸಂಭವಿಸಬಹುದು. ಕಷ್ಟವೆಂದುಕೊಂಡ ಪ್ರಸಂಗವು ಸುಗಮವಾದೀತು. ಆರ್ಥಿಕ ಒತ್ತಡ.

ಮಕರ
ನಿಮ್ಮ ನಿರ್ಧಾರವು ಉತ್ತಮ ಫಲ ನೀಡಲಿದೆ.  ಹಾಗಾಗಿ ಕಠಿಣ ನಿರ್ಧಾರ ತಾಳುವಲ್ಲಿ ಹಿಂಜರಿಕೆ ಬೇಡ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು.

ಕುಂಭ
ನಿಮ್ಮ ಪ್ರತಿಭೆಯ ಅನಾವರಣ ಆಗಲಿದೆ. . ನಿಮ್ಮ ಶ್ರಮಕ್ಕೆ ತಕ್ಕುದಾದ ಫಲವನ್ನೆ ಪಡೆಯುವಿರಿ. ಕೌಟುಂಬಿಕ ಶಾಂತಿ. ಎಲ್ಲರೊಡನೆ ಕೂಡಿ ಕಳೆಯುವ ಅವಕಾಶ.

ಮೀನ
ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯುವಿರಿ. ಕೆಲಸದಲ್ಲಿ ತೃಪ್ತಿಕರ ಬೆಳವಣಿಗೆ. ಬಾಕಿ ಇದ್ದ ಕಾರ್ಯವನ್ನು ಮುಗಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!