ದಿನಭವಿಷ್ಯ | ಕೌಟುಂಬಿಕ ಸಮ್ಮಿಲನ, ಹರ್ಷದ ವಾತಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಮೇಷ
ಹಣದ ವಿಚಾರ ಪಕ್ಕಕ್ಕಿಡಿ, ನಿಮ್ಮ ಬದುಕಿಗೆ ಸಂಬಂಧಿಸಿದ ಇತರ ಮಹತ್ವದ ವಿಚಾರಗಳತ್ತ ಗಮನ ಹರಿಸಿ. ನಿಮ್ಮ ಕೆಲವು ಸಾಮರ್ಥ್ಯ ವ್ಯರ್ಥ ಮಾಡಬೇಡಿ.

ವೃಷಭ
ನಿಮ್ಮ ಕ್ರಿಯಾಶೀಲತೆಗೆ ಗಮನ ಕೊಡಿ. ಜಡವಾಗಿ ಕೂರದಿರಿ. ಉತ್ತಮ ಕಾರ್ಯ ಸಾಧಿಸುವತ್ತ ನಿಮ್ಮ ಶ್ರಮವನ್ನು ವ್ಯಯಿಸಿ. ಜನಮೆಚ್ಚುಗೆ ಪಡೆಯುವಿರಿ.

ಮಿಥುನ
ಎಂದಿಗಿಂತ ಭಿನ್ನವಾದ ಕಾರ್ಯಗಳಿಗೆ ಕೈಹಚ್ಚಿ. ನೀವು ಅದರಲ್ಲಿ ಸಫಲತೆ ಕಾಣುವುದನ್ನು ಗಮನಿಸಿ. ನಿಮ್ಮ ಸೀಮಿತ ಚೌಕಟ್ಟನ್ನು ಮೀರಿ ಚಿಂತಿಸಿರಿ ಮತ್ತು ಕಾರ್ಯಾಚರಿಸಿ.

ಕಟಕ
ಹಣದ ವಿಷಯ ಅಥವಾ ಭಾವನಾತ್ಮಕ ವಿಷಯ, ಯಾವುದಕ್ಕೂ ಆತುರದ ತೀರ್ಮಾನ ತಾಳದಿರಿ. ಯೋಚಿಸಿ ನಿರ್ಧರಿಸಿ. ನಿಮ್ಮ ಆತ್ಮಸಾಕ್ಷಿಯ ಮಾತಿಗೆ ಕಿವಿಗೊಡಿ.

ಸಿಂಹ
ಇಂದು ನಿಮಗೆ ಒತ್ತಡದ ಮತ್ತು ಆಯಾಸದ ದಿನ. ಏಕೆಂದರೆ ನಿರಂತರ ಕಾರ್ಯನಿರತರು ನೀವು. ಸಂಬಂಧದ ವಿಚಾರದಲ್ಲಿ ನೆಗೆಟಿವ್ ಚಿಂತನೆಗೆ ದಾರಿ ಮಾಡದಿರಿ.

ಕನ್ಯಾ
ನಿಮ್ಮನ್ನು ಹೊಗಳುವ ಕಾರ್ಯ ಮಾಡುವಿರಿ. ಇತರರ ಸಂತೋಷದಲ್ಲಿ ನೀವೂ ಕುಶಿ ಕಾಣುವಿರಿ. ಕುಟುಂಬ ಸದಸ್ಯರ ಜತೆ ಕಲೆತು ಹರ್ಷ ಆಚರಿಸುವಿರಿ.

ತುಲಾ
ನಿಮ್ಮ ಚಿಂತೆ ಇತರರ ಜತೆ ಹಂಚಿಕೊಳ್ಳಲು ಹಿಂಜರಿಕೆ ಬೇಡ. ಮನಸ್ಸಿನ ಒತ್ತಡ ಕಡಿಮೆಯಾದೀತು. ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಗುವಿರಿ.

ವೃಶ್ಚಿಕ
ಏಕಾಕಿ ಮನೋಭಾವ ತ್ಯಜಿಸಿ, ಎಲ್ಲರ ಜತೆ ಬೆರೆಯಲು ಕಲಿಯಿರಿ. ಜೀವನದ ಸಂತೋಷ ಕಾಣುವಿರಿ. ಹಣಕ್ಕೆ ಸಂಬಂಧಿಸಿ ಪ್ರಮುಖ ನಿರ್ಧಾರ ತಾಳದಿರಿ.

ಧನು
ಇತರರ ಜತೆಗಿನ ವ್ಯವಹಾರ ಇಂದು ನೀವು ಬಯಸಿದಂತೆ ಸಾಗದಿರಬಹುದು. ಆದರೆ ನಿರಾಶೆ ಬೇಡ. ನಿಮಗೆ ಸಿಗುವ ಫಲ ಸಿಕ್ಕೇ ಸಿಗುವುದು.

ಮಕರ
ನಿಮಗೆ ಅರಿವೇ ಇಲ್ಲದಂತೆ ನಿಮ್ಮ ಜನಪ್ರಿಯತೆ ಹೆಚ್ಚುವುದು. ಇತರರು ನಿಮ್ಮ ಮಾತಿಗೆ ಮನ್ನಣೆ ಕೊಡುವರು. ಕೌಟುಂಬಿಕ ಸಂತೋಷ.

ಕುಂಭ
ಕೌಟುಂಬಿಕ ಸಮ್ಮಿಲನ. ಹರ್ಷದ ಪರಿಸರ. ನಿಮ್ಮಿಂದ ದೂರ ಸರಿದವರೂ ಇಂದು ಸಮೀಪ ಬರುವರು. ಆರ್ಥಿಕವಾಗಿ ಕುಶಿಯ ಬೆಳವಣಿಗೆ.

ಮೀನ
ಸಂಬಂಧದಲ್ಲಿ ವಿವೇಕ ಮತ್ತು ಭಾವನೆ ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಳ್ಳಿ. ಆರೋಗ್ಯ ಸುಧಾರಣೆ.  ಆರ್ಥಿಕ ಒತ್ತಡ ನಿವಾರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!